ಮೇಷ
ಪೂರೈಸಲಾಗದ ಆಶ್ವಾಸನೆ ನೀಡಿ ಇಕ್ಕಟ್ಟಿಗೆ ಸಿಲುಕುವಿರಿ. ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಎಸಗದಿರಿ. ಕೌಟುಂಬಿಕ ಸಮಸ್ಯೆ ಕಾಡುವುದು.
ವೃಷಭ
ಸವಾಲಿನ ದಿನ. ವೃತ್ತಿಯಲ್ಲೂ, ವೈಯಕ್ತಿಕವಾಗಿಯೂ ಹೆಚ್ಚು ಹೊಣೆ. ಸಂಬಂಧಕ್ಕೆ ಧಕ್ಕೆ. ಆರ್ಥಿಕ ಹಿಂಜರಿಕೆ. ಖರ್ಚೂ ಹೆಚ್ಚಳ.
ಮಿಥುನ
ಹೊಸತನಕ್ಕೆ ಯತ್ನಿಸುವಿರಿ. ಅದರಲ್ಲಿ ಆಂಶಿಕ ಯಶ. ಮನಸ್ಸು ಉಲ್ಲಸಿತ ಗೊಳಿಸುವ ಪ್ರಸಂಗ ಉಂಟಾದೀತು. ಪ್ರೀತಿಯಲ್ಲಿ ಸಫಲತೆ.
ಕಟಕ
ವೃತ್ತಿಯಲ್ಲಿ ಸಫಲತೆ. ಪರಿಶ್ರಮಕ್ಕೆ ಅಧಿಕ ಫಲ ಪಡೆಯುವಿರಿ. ಹೊಟ್ಟೆ ಕೆಡಿಸುವ ಆಹಾರ ತಿನ್ನದಿರಿ. ಪ್ರೀತಿಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ.
ಸಿಂಹ
ಆತ್ಮೀಯ ಸಂಬಂಧಕ್ಕೆ ಹುಳಿ ಹಿಂಡಲು ಕೆಲವರ ಯತ್ನ ನಡೆದೀತು. ನೀವು ಎಚ್ಚರದಿಂದಿರಿ. ವೃತ್ತಿಯಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಿರಿ.
ಕನ್ಯಾ
ಒಳಿತು, ಕೆಡಕು ಎರಡನ್ನೂ ಎದುರಿಸುವಿರಿ. ಉದ್ವಿಗ್ನ ಸ್ಥಿತಿ ಕಾಣುವಿರಿ. ಅದರ ಜತೆಗೇ ಪರಿಹಾರದ ನಿರಾಳತೆಯೂ. ಆರೋಗ್ಯ ಬಗ್ಗೆ ಕಾಳಜಿ ವಹಿಸಿ.
ತುಲಾ
ದುಗುಡಕ್ಕೆ ಕಾರಣವಾಗಿದ್ದ ವಿಷಯ ಇಂದು ಇತ್ಯರ್ಥ. ಆದರೆ ಸ್ವಲ್ಪ ಮಟ್ಟಿನ ಹಿನ್ನಡೆಯೂ ಉಂಟಾದೀತು. ಭಾವುಕ ಸನ್ನಿವೇಶ ಎದುರಿಸುವಿರಿ.
ವೃಶ್ಚಿಕ
ಪ್ರಗತಿಯ ದಿನ. ಉದ್ಯೋಗದಲ್ಲಿ ಹೊಸ ಅವಕಾಶ. ಏಕಾಂಗಿಗಳಿಗೆ ವೈವಾಹಿಕ ಬಂಧ ಏರ್ಪಡಬಹುದು. ತೃಪ್ತಿಕರ ಆರ್ಥಿಕ ಪ್ರಗತಿ.
ಧನು
ವೃತ್ತಿಯಲ್ಲಿ ಸೃಷ್ಟಿಯಾಗಿದ್ದ ಸಮಸ್ಯೆ ಪರಿಹಾರ. ಪ್ರೀತಿಯಲ್ಲಿ ಒಡಕು. ಕ್ಷುಲ್ಲಕ ವಿಷಯ ಮನಸ್ಸು ಕೆಡಿಸಬಹುದು. ದೇವರ ಪ್ರಾರ್ಥನೆ ಮಾಡಿ.
ಮಕರ
ಹೊಣೆಗಾರಿಕೆ, ಒತ್ತಡ ಕಡಿಮೆ. ಯಾವುದೋ ವಿಷಯದಲ್ಲಿ ಭಾವುಕರಾಗಿ ನಿರ್ಧಾರ ತಾಳದಿರಿ. ಅದರ ಪ್ರಾಕ್ಟಿಕಲ್ ಆಯಾಮ ಪರಿಶೀಲಿಸಿ, ನಿರ್ಧರಿಸಿ.
ಕುಂಭ
ವೃತ್ತಿಯಲ್ಲಿ ನಿಮ್ಮ ಕಠಿಣ ದುಡಿಮೆಗೆ ತೃಪ್ತಿಕರ ಫಲಿತಾಂಶ. ಆದರೆ ಕೆಲವು ವಿಷಯಗಳು ಮನಸ್ಸು ಕದಡುತ್ತವೆ. ನಿಮ್ಮ ಮಾತು ತಪ್ಪರ್ಥ ಬಿಂಬಿಸಬಹುದು.
ಮೀನ
ದಂಪತಿಗಳು ತಮ್ಮ ಸಂಬಂಧ ಬಲಪಡಿಸುವ ಕ್ರಮ ತೆಗೆದುಕೊಳ್ಳಬೇಕು. ಸಣ್ಣ ಭೇದವು ಸಂಬಂಧ ಕೆಡಿಸದಿರಲಿ. ಮುಖ್ಯ ಕಾರ್ಯ ಅಪೂರ್ಣ.



