ಮೇಷ
ಪ್ರೀತಿಪಾತ್ರ ವ್ಯಕ್ತಿಯಿಂದ ನೋವು ಪಡೆಯುವಿರಿ. ಅವರನ್ನು ದ್ವೇಷಿಸದಿರಿ. ಖರ್ಚು ಹೆಚ್ಚಾಗುವ ಪ್ರಸಂಗ ಒದಗುವುದು.
ವೃಷಭ
ಸಹನೆ ಕಳಕೊಳ್ಳುವ ಸಾಧ್ಯತೆಗಳಿವೆ. ಭಾವನೆಯ ಮೇಲೆ ನಿಯಂತ್ರಣವಿರಲಿ. ನಿಮಗೆ ಸಂತೋಷ ತರುವ ವ್ಯಕ್ತಿಗಳ ಜತೆ ದಿನ ಕಳೆಯಿರಿ.
ಮಿಥುನ
ಹಲವು ವಿಧಗಳಲ್ಲಿ ನಿಮಗಿಂದು ಸಂತೋಷದ ದಿನ. ಕಾರ್ಯದಲ್ಲಿ ಯಶಸ್ಸು,ಆಪ್ತರ ಉನ್ನತಿ ಮನಸ್ಸಿಗೆ ಹರ್ಷ ತರುವುದು. ಆರ್ಥಿಕ ಸದೃಢತೆ.
ಕಟಕ
ಮನಸ್ಸಿನ ಗೊಂದಲ ನಿವಾರಣೆ. ನಿರಾಳತೆ. ಶಾಂತ ಮನಸ್ಥಿತಿಯಿಂದಾಗಿ ಸೂಕ್ತ ನಿರ್ಧಾರ ತಾಳಲು ಸಮರ್ಥರಾಗುವಿರಿ. ಬಾಂಧವ್ಯ ವೃದ್ಧಿ.
ಸಿಂಹ
ಕಾರಣವಿಲ್ಲದೇ ಮನಸ್ಸು ಉದಾಸ. ಕೆಲವು ಬೆಳವಣಿಗೆ ನೆಮ್ಮದಿಯನ್ನು ಕೆಡಿಸುತ್ತದೆ. ಆಪ್ತರು ನಿಮ್ಮನ್ನು ಕಡೆಗಣಿಸಿದ ನೋವು ಕಾಡುವುದು
ಕನ್ಯಾ
ಮಾನಸಿಕ ತೊಳ ಲಾಟ. ಮನಶ್ಯಾಂತಿ ಕಂಡುಕೊಳ್ಳಲು ಆದ್ಯತೆ ಕೊಡಬೇಕು. ಸಮಸ್ಯೆ ಗಳನ್ನು ಪರಿಹರಿಸುವ ದಾರಿ ಕಂಡುಕೊಳ್ಳಿ.
ತುಲಾ
ಭಾವುಕರಾಗಿ ಇಂದು ವರ್ತಿಸುವಿರಿ. ಅದಕ್ಕೆ ಕಾರಣ ನಿಮ್ಮ ಪ್ರೀತಿಪಾತ್ರರ ವರ್ತನೆ. ಸಂಬಂಧ ಕೆಡುವಂತಹ ಅವಕಾಶ ಸೃಷ್ಟಿಸದಿರಿ. ಸಹನೆಯಿರಲಿ.
ವೃಶ್ಚಿಕ
ಮನಸ್ಸು ಇಂದು ವ್ಯಗ್ರವಾದೀತು. ಅಂತಹ ಪರಿಸ್ಥಿತಿಯಲ್ಲಿ ಭಾವನೆ ನಿಯಂತ್ರಿಸಿ. ಹೊಂದಾಣಿಕೆ, ಸಮಾಧಾನ ಇಂದು ನಿಮ್ಮ ಮಂತ್ರವಾಗಲಿ.
ಧನು
ನಿಮಗೆ ಹಿತವೆನಿಸದ ಕಾರ್ಯ ಮಾಡುವ ಒತ್ತಡ ಉಂಟಾದೀತು. ಅದಕ್ಕೆ ಆಸ್ಪದ ನೀಡಬೇಡಿ. ಹಣದ ಕೊರತೆ ನಿವಾರಣೆಗೆ ಗಮನ ಕೊಡಿ.
ಮಕರ
ಕೆಲಸದಲ್ಲಿ ಏಕಾಗ್ರತೆ ಮೂಡದು. ಮನಸ್ಸು ಅಶಾಂತ. ಹಾಗೆಂದು ಯಾವುದೇ ಕೆಲಸ ಬಾಕಿ ಉಳಿಸದಿರಿ. ಕೌಟುಂಬಿಕ ಅಸಮಾಧಾನ.
ಕುಂಭ
ಖಾಸಗಿ ಬದುಕಿಗೆ ಆದ್ಯತೆ ನೀಡಿ. ಅದನ್ನು ಕಡೆಗಣಿಸದಿರಿ. ವೃತ್ತಿಯ ಒತ್ತಡ ಕಡಿಮೆ ಮಾಡಿ ಕೊಂಡು ಕುಟುಂಬಸ್ಥರ ಜತೆ ಸಮಯ ಕಳೆಯಿರಿ.
ಮೀನ
ನೆಗೆಟಿವ್ ಚಿಂತನೆಗಳಿಂದ ಮುಕ್ತಿ. ನಿಮಗೆ ಶಾಂತಿ, ಸಂತೋಷ ನೀಡುವ ಕಾರ್ಯದಲ್ಲಿ ತೊಡಗುವಿರಿ. ಆಪ್ತರಿಂದ ಸಹಕಾರ, ಬೆಂಬಲ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ