June 17, 2026
Wednesday, June 17, 2026
spot_img

ದಿನಭವಿಷ್ಯ: ಇಂದು ನೀವು ಶಾಂತವಾಗಿರುವುದೇ ಮುಖ್ಯ, ಇನ್ನೆಲ್ಲವೂ ತಂತಾನೆ ಸರಿ ಹೋಗಲಿದೆ

ಮೇಷ
ಕೆರಿಯರ್‌ಗೆ ಸಂಬಂಧಿಸಿ ಶುಭ ಬೆಳವಣಿಗೆ. ಇಚ್ಛಿತ ಉದ್ಯೋಗ ಸಿಕ್ಕೀತು. ಮನೆಯಲ್ಲಿ ಸಾಮರಸ್ಯ ಕಾಯಲು ಗಮನ ಕೊಡಿ.  
ವೃಷಭ
 ಕೆರಿಯರ್‌ಗೆ ಆದ್ಯತೆ ನೀಡಿ ಪ್ರೀತಿಪಾತ್ರರನ್ನು ಕಡೆಗಣಿಸಿದ್ದೀರಿ. ಆ  ಕಡೆಯೂ ಗಮನ ಕೊಡಿ. ಸಣ್ಣ ಆರೋಗ್ಯ ಸಮಸ್ಯೆ ಕಿರಿಕಿರಿ ಸೃಷ್ಟಿಸಬಹುದು.                  
ಮಿಥುನ
ಕೆಲಸದಲ್ಲಿ ಸದಾ ನಿರತ. ಅಧಿಕ ಒತ್ತಡ. ಇದರಿಂದ ಅಸಹನೆ ಹೆಚ್ಚು. ಹೊಸ ಸಂಬಂಧ ಹರ್ಷ ತುಂಬಬಹುದು. ಆರ್ಥಿಕ ಸ್ಥಿತಿ ಸಾಧಾರಣ.            
ಕಟಕ
ಶಾಂತಚಿತ್ತತೆ ಕಾಯ್ದುಕೊಳ್ಳಿ. ಏಕೆಂದರೆ ಪ್ರತಿಕೂಲ ಬೆಳವಣಿಗೆ ಕಾಣುವಿರಿ. ಆರ್ಥಿಕ ಪರಿಸ್ಥಿತಿಯತ್ತ ಹೆಚ್ಚು ಗಮನ ಕೊಡಿ. ಧನವ್ಯಯ.          
ಸಿಂಹ
ಹೊಸತನದ ಹುರುಪು. ವೃತ್ತಿ ಮತ್ತು ಮನೆಯಲ್ಲಿ ಪೂರಕ ಬೆಳವಣಿಗೆ. ಮುಖ್ಯ ವಿಷಯದಲ್ಲಿ ಹಿರಿಯರ  ಮಾರ್ಗದರ್ಶನ ಕೋರಿ.              
ಕನ್ಯಾ
ನಿಮ್ಮ ವರ್ತನೆ ಬದಲಿಸಬೇಕಾದ ಅಗತ್ಯ ಇದೆ. ಸಂಘರ್ಷದ ಧೋರಣೆ ಬಿಡಿ. ವೃತ್ತಿ ಒತ್ತಡ ಹೆಚ್ಚಲಿದೆ. ಅಸಹಕಾರ ಎದುರಿಸುವಿರಿ.  
ತುಲಾ
ಸಿಟ್ಟಿಗೇಳುವ ಪ್ರಸಂಗ ಉಂಟಾದೀತು. ತಾಳ್ಮೆ ಕಾಯ್ದುಕೊಳ್ಳಿ. ಅಧಿಕ ಖರ್ಚು ಚಿಂತೆಗೆ ಕಾರಣ. ಬಂಧು ಕಲಹ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.                              
ವೃಶ್ಚಿಕ
ನಿಮ್ಮ ಕಲ್ಪನೆ ಸಾಕಾರವಾಗುವ ಸಾಧ್ಯತೆ ಕಾಣುತ್ತಿದೆ. ಸಮಸ್ಯೆ ಇತ್ಯರ್ಥ. ಸಣ್ಣ ಆರೋಗ್ಯ ಸಮಸ್ಯೆ. ಚಾಲನೆಯಲ್ಲಿ ಎಚ್ಚರ ವಹಿಸಿರಿ.
ಧನು
ಫಲದಾಯಕ ದಿನ. ನಿಮ್ಮ ನಿರ್ವಹಣೆ ಮೆಚ್ಚುಗೆಗೆ ಪಾತ್ರ. ವಿಶೇಷ ವ್ಯಕ್ತಿಯ ಭೇಟಿಯಿಂದ ಉತ್ಸಾಹ. ಕೌಟುಂಬಿಕ ಸಮ್ಮಿಲನ ಸಂಭವ.  
ಮಕರ
ಆರ್ಥಿಕ ಯೋಜನೆ ಕಾರ್ಯಗತ ಮಾಡಲು ಸಕಾಲ. ಶುಭ ಸುದ್ದಿ ಕೇಳುವಿರಿ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿರಿ. ಧನಾಗಮ.          
ಕುಂಭ
ನಿಮ್ಮ ಕೆಲಸ ದಿಕ್ಕು ತಪ್ಪದಂತೆ ಎಚ್ಚರ ವಹಿಸಿ. ಕೆಲವರು ಅಡ್ಡಗಾಲು ಹಾಕಿಯಾರು. ಆರೋಗ್ಯಪೂರ್ಣ ಆಹಾರ ಮಾತ್ರ ಸೇವಿಸಿರಿ.              
ಮೀನ
ವ್ಯರ್ಥವೆಂದು ಭಾವಿಸಿದ ಕೆಲಸ ಒಮ್ಮೆಗೆ ಫಲ ನೀಡಬಹುದು. ಆರ್ಥಿಕವಾಗಿ ಪೂರಕ ಬೆಳವಣಿಗೆ. ಆಪ್ತರ ಜತೆಗೆ ಆತ್ಮೀಯ ಕಾಲಕ್ಷೇಪ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !