ದಿನಭವಿಷ್ಯ: ಉದ್ವೇಗ, ಶಾಂತತೆಯನ್ನು ಕಾಪಾಡಿಕೊಳ್ಳಿ, ನಿಮ್ಮ ಆತ್ಮಸಾಕ್ಷಿಯ ಮಾತನ್ನು ಆಲಿಸಿ

ಮೇಷ
ಕೌಟುಂಬಿಕವಾಗಿ ಮನಸ್ಸಿನ ನೆಮ್ಮದಿ ಕದಡಬಹುದು. ಆಪ್ತರ ಜತೆ ಮುನಿಸು ಸಂಭವ. ವೃತ್ತಿಯಲ್ಲಿ ಏರುಪೇರು. ಹಣಕಾಸು ಸಮಸ್ಯೆ.
ವೃಷಭ
ಕಠಿಣ ಪ್ರಸಂಗ ದಲ್ಲಿ ಭಾವನಾತ್ಮಕ ದೃಢತೆ ಪ್ರದರ್ಶಿಸಿ. ದುರ್ಬಲ ಮನಸ್ಸಿನವರು ಎಂಬ ಭಾವನೆ ಬಾರದಿರಲಿ. ಬಂಧು ನೆರವು ಸಿಗದು.
ಮಿಥುನ
ನಿರುತ್ಸಾಹದ ದಿನ. ಹತಾಶೆ, ಕೋಪ ಆವರಿಸಬಹುದು. ವಾಗ್ವಾದಕ್ಕೆ ಇಳಿಯದಂತೆ ದೃಢ ಮನಸ್ಸು ತೋರಿ. ಧನವಯ ಹೆಚ್ಚು.
ಕಟಕ
ಕೆಲಸದ ಒತ್ತಡ ಇಂದಾದರೂ ಕಡಿಮೆ ಆದೀತೆಂಬ ನಿರೀಕ್ಷೆ ನಿಮ್ಮದು. ಈ ವಿಷಯದಲ್ಲಿ ನಿರಾಶೆ ಸಂಭವ. ಕೌಟುಂಬಿಕ ಉದ್ವಿಗ್ನತೆ.
ಸಿಂಹ
ಪ್ರತಿಕೂಲ ಸನ್ನಿವೇಶ ಎದುರಾದೀತು. ಯಾವುದೇ ಪರಿಸ್ಥಿತಿ ಎದುರಿಸುವ ದೃಢ ಮನಸ್ಥಿತಿ ತೋರಿ. ಸುಲಭದಲ್ಲಿ ಬಗ್ಗಬೇಡಿ.
ಕನ್ಯಾ
ನಿಮ್ಮ ಯೋಜನೆ ಗಳೆಲ್ಲ ಬುಡಮೇಲು. ಅಸಹನೆ ಹೆಚ್ಚಳ. ಕೌಟುಂಬಿಕ ವಿಷಯ ದಲ್ಲಿ ಸಮಾಧಾನಕರ ಬೆಳವಣಿಗೆ. ಬಂಧು ಭೇಟಿ.
ತುಲಾ
ಹಲವಾರು ಹೊಣೆ ಪೂರೈಸಬೇಕಾದ ಒತ್ತಡ. ಅನ್ಯರ ಮೇಲೆ ಅವಲಂಬಿಸಬೇಡಿ. ಇತರರ ಕಾರ್ಯ ನಿಮಗೆ ಸಮಾಧಾನ ತರದು.
ವೃಶ್ಚಿಕ
ಹಲವಾರು ಕೆಲಸದಲ್ಲಿ ಇಂದು ವ್ಯಸ್ತರಾಗುವಿರಿ.  ಸುಲಭವೆಂದು ನೀವು ಭಾವಿಸಿದರೂ ನಿಮಗದು ಕಠಿಣವಾಗಲಿದೆ. ಹಣದ ಸಮಸ್ಯೆ ನಿವಾರಣೆ.
ಧನು
ಪ್ರೀತಿಪಾತ್ರರ ಕುರಿತಾದ ಚಿಂತೆ ಪರಿಹಾರ.  ಸಮಸ್ಯೆ ನಿವಾರಣೆ. ಮಾತಿನ ಚಕಮಕಿಯಿಂದ ದೂರವಿರಿ. ಧನಲಾಭ.
ಮಕರ
ಜಡತ್ವ ಬಿಟ್ಟು ಚುರುಕಾಗಿರಿ. ಇಲ್ಲವಾದರೆ  ಹಿಂದೆ ಬೀಳುವಿರಿ. ವೃತ್ತಿಯ ಹೊಣೆ ಸರಿಯಾಗಿ ನಿಭಾಯಿಸಿರಿ.     ಕೌಟುಂಬಿಕ ಸಮಾಧಾನ.
ಕುಂಭ
ವೃತ್ತಿ ಕ್ಷೇತ್ರದಲ್ಲಿ ಸವಾಲು ಎದುರಿಸುವಿರಿ. ಇತರರಿಂದ ಟೀಕೆ. ಇದು ನಿಮ್ಮ ನಿರ್ವಹಣೆ ಮೇಲೆ ಪರಿಣಾಮ ಬೀರದಿರಲಿ. ಖರ್ಚು ಅಽಕ.
ಮೀನ
ನೀವು ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದು ಮುಖ್ಯ. ಅನ್ಯರ ವಿರೋಧ ಕಟ್ಟಿಕೊಳ್ಳದಿರಿ.  ಮನೆಯಲ್ಲಿ ಮನಸ್ತಾಪ ಉಂಟಾದೀತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!