ಮೇಷ
ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ ಎದುರಿಸುವಿರಿ. ನೀವು ಮಾಡಿದ ಕಾರ್ಯಕ್ಕೆ ಅಪಸ್ವರ ಕೇಳಿಬಂದೀತು. ಹೆಚ್ಚು ತಲೆಕೆಡಿಸದೆ ಪ್ರಾಮಾಣಿಕರಾಗಿರಿ.
ವೃಷಭ
ಇಂದು ಹಿನ್ನಡೆ ಅನುಭವಿಸುವಿರಿ. ಕೆಲಸ ನೀವಂದುಕೊಂಡಂತೆ ನಡೆಯುವುದಿಲ್ಲ. ನಿರೀಕ್ಷಿಸದ ಅಡ್ಡಿ ಒದಗಬಹುದು.
ಮಿಥುನ
ಅದೃಷ್ಟದ ದಿನ. ಕಾರ್ಯದಲ್ಲಿ ಯಶಸ್ಸು. ಬಾಕಿ ಉಳಿದ ಕೆಲಸ ಪೂರ್ಣಗೊಳ್ಳುವುದು. ನವವಿವಾಹಿತರಿಗೆ ಶುಭಸುದ್ಧಿ.
ಕಟಕ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಂಘರ್ಷ ಬರದಂತೆ ನೋಡಿಕೊಳ್ಳಿ. ಸಮತೋಲನ ಕಾಯ್ದು ಕೊಳ್ಳಿ. ಆಪ್ತ ಬಂಧುಗಳ ಹಿತ ಕಾಪಾಡಿ.
ಸಿಂಹ
ಉತ್ಸಾಹಪೂರ್ಣ ದಿನ. ಆತ್ಮೀಯರೊಂದಿಗೆ ಕಾಲಹರಣ. ಉದ್ಯೋಗ ದಲ್ಲಿ ನಿರೀಕ್ಷಿತ ಬೆಳವಣಿಗೆ. ಆತ್ಮೀಯರ ಜತೆ ಮಾತಿನ ಸಂಘರ್ಷ ನಡೆದೀತು.
ಕನ್ಯಾ
ಪ್ರೀತಿಯ ವಿಷಯ ಸವಾಲು ಒಡ್ಡಬಹುದು. ಭಿನ್ನಮತ ಉಂಟಾದೀತು. ಶಾಂತಿಯತವಾಗಿ ಪರಿಹರಿಸಿಕೊಳ್ಳಿ. ಆರ್ಥಿಕ ಉನ್ನತಿ ಪಡೆಯುವಿರಿ.
ತುಲಾ
ಹಲವಾರು ಬಗೆಯ ಒತ್ತಡ. ವೃತ್ತಿಯ ಜತೆಗೆ ಕೌಟುಂಬಿಕ ಕಾರ್ಯದ ಜವಾಬ್ದಾರಿ. ಎಲ್ಲವೂ ಸುಸೂತ್ರವಾಗಿ ನಡೆಯುವ ಬಗ್ಗೆ ಚಿಂತೆ ಬೇಡ.
ವೃಶ್ಚಿಕ
ನಿಮ್ಮ ಕಾರ್ಯ ಇತರರ ಮೆಚ್ಚುಗೆ ಗಳಿಸಿದರೂ ನಿಮಗೆ ಅತೃಪ್ತಿ ಕಾಡಬಹುದು. ಭಾವುಕ ಸನ್ನಿವೇಶದಲ್ಲಿ ಸಿಲುಕುವಿರಿ. ಆಪ್ತರ ಜತೆ ವಿರಸ.
ಧನು
ಕೆಲಸದಲ್ಲಿ ಪ್ರಗತಿ. ಖಾಸಗಿ ಜೀವನದಲ್ಲಿ ನಿರಾಶೆ. ಆರ್ಥಿಕ ಸ್ಥಿತಿ ಮತ್ತು ಪ್ರೀತಿಯ ವಿಷಯದಲ್ಲಿ ಹಿನ್ನಡೆ ಅನುಭವಿಸುವಿರಿ.
ಮಕರ
ಕೆಲಸದ ಒತ್ತಡ. ಕಾಲಮಿತಿಯೊಳಗೆ ಪೂರೈಸಬೇಕಾದ ಪರಿಸ್ಥಿತಿ. ನಿರೀಕ್ಷಿತ ನೆರವು ದೊರಕು
ವುದಿಲ್ಲ. ನೀವೋಬ್ಬರೆ ಏಗಬೇಕಾಗುವುದು.
ಕುಂಭ
ಕೆಲಸದಲ್ಲಿನ ಹೊಣೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಆರ್ಥಿಕ ದುಸ್ಥಿತಿ ನಿವಾರಣೆ, ಧನಪ್ರಾಪ್ತಿ.
ಮೀನ
ಆಪ್ತರ ಭಾವನೆಗೆ ನೀವೂ ಸ್ಪಂದಿಸುವಿರಿ. ಅವರಿಗೆ ಭಾವನಾತ್ಮಕ ಬೆಂಬಲ ನೀಡಿರಿ. ಆರ್ಥಿಕ ಸಂಕಷ್ಟಗಳು ಪರಿಹಾರ. ವೃತ್ತಿ ಸಮಸ್ಯೆ ನಿವಾರಣೆ.
ದಿನಭವಿಷ್ಯ: ಇಂದು ದ್ರವ್ಯ ವ್ಯಾಪಾರಿಗಳಿಗೆ ಲಾಭ, ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಲಾಭ

