October 10, 2026
Saturday, October 10, 2026
spot_img

Worship | ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿಯಲ್ಲಿ ಏನೆಲ್ಲಾ ಇರಬೇಕು?

ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿ ಸರಿಯಾದ ರೀತಿಯಲ್ಲಿ ಸಿದ್ಧಪಡಿಸುವುದು ಬಹಳ ಮುಖ್ಯ. ಪೂಜೆ ಸಾಮಗ್ರಿಗಳು ಪೂಜೆಯ ಶುದ್ಧತೆ ಮತ್ತು ದೇವರ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತವೆ ಎನ್ನಲಾಗುತ್ತದೆ. ದೇವಾಲಯಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿ ಸ್ವಚ್ಛ, ಹಗುರ ಮತ್ತು ಸುಲಭವಾಗಿ ಸಾಗಬಹುದಾದ ರೀತಿಯಲ್ಲಿ ಇರಬೇಕು.

ಪೂಜೆ ಬುಟ್ಟಿಯಲ್ಲಿ ಇರಬೇಕಾದ ಪ್ರಮುಖ ವಸ್ತುಗಳು

ಹೂವುಗಳು: ಹೂವು, ತುಳಸಿ ಎಲೆ, ಹಿಂಗಾರ, ತೆಂಗಿನಕಾಯಿ, ಅರಶಿನ ಕುಂಕುಮ ಜೊತೆಗೆ ಶುದ್ಧ ಮನಸ್ಸು ಇರಬೇಕು.

ದೀಪ ಮತ್ತು ಆರತಿ ಸಾಮಗ್ರಿಗಳು: ತೈಲದ ದೀಪ, ಕಂಚಿನ ತಟ್ಟೆ, ಆರತಿ ದೀಪ,ಕರ್ಪೂರ ಪೂಜೆಗೆ ಅಗತ್ಯ.

ನೈವೇದ್ಯಕ್ಕೆ: ಹಣ್ಣು, ಹಾಲು, ಸಕ್ಕರೆ, ತುಪ್ಪ, ಮೊಸರು, ಜೇನು ಅಥವಾ ದೇವರಿಗೆ ಇಷ್ಟದ ಆಹಾರ.

ಉಪಕರಣಗಳು: ಲೋಹದ/ಕಂಚಿನ ಪಾತ್ರೆ, ಬಟ್ಟೆ, ಸ್ವಚ್ಛ ನೀರು, ಗಂಧ, ಚಮಚ.

ಬಟ್ಟೆ: ಹೊಸ ಬಟ್ಟೆ

ಪೂಜೆ ಬುಟ್ಟಿ ಸರಿಯಾಗಿ ಸಿದ್ಧಪಡಿಸಿದರೆ ದೇವಾಲಯಕ್ಕೆ ಹೋಗುವಾಗ ಗಡಿಬಿಡಿ ಇರೋದಿಲ್ಲ. ದೇವರಿಗೆ ಅರ್ಪಣೆ ಸಲ್ಲಿಸುವ ಪ್ರಕ್ರಿಯೆ ಶುದ್ಧ, ವ್ಯವಸ್ಥಿತವಾಗಿರಬೇಕು. ಇದರಿಂದ ಪೂಜೆಯ ಶಕ್ತಿ ಹೆಚ್ಚುತ್ತದೆ.

Must Read