ಮೇಷ
ವಂಚಕರು ನಿಮ್ಮ ಸುತ್ತ ಸುತ್ತುವರಿದಿದ್ದಾರೆ. ಹಾಗಾಗಿ ಯಾರನ್ನೂ ಕುರುಡಾಗಿ ನಂಬದಿರಿ. ಪ್ರೀತಿಯ ಅಹವಾಲು ಮಂಡಿಸಿದರೆ ಪೂರಕ ಸ್ಪಂದನೆ ದೊರಕದು.
ವೃಷಭ
ಕೆಲವು ಬೆಳವಣಿಗೆ ನಿಮಗೆ ನಿರಾಶೆ ತುಂಬುತ್ತದೆ. ಆತ್ಮೀಯರ ಬೆಂಬಲವೂ ದೊರಕುವುದಿಲ್ಲ. ಖರೀದಿ ಉತ್ಸಾಹ, ಖರ್ಚು ಅಧಿಕ.
ಮಿಥುನ
ಶಾಂತ ಮನಸ್ಥಿತಿ. ಕಾಡುತ್ತಿದ್ದ ಗೊಂದಲ ನಿವಾರಣೆ. ಹಳೆಯ ಸಮಸ್ಯೆಯೊಂದು ಪರಿಹಾರ ಕಾಣಲಿದೆ. ಕೌಟುಂಬಿಕ ನೆಮ್ಮದಿ, ಸಹಕಾರ.
ಕಟಕ
ಬಾಕಿ ಉಳಿದ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಇನ್ನಷ್ಟು ಮುಂದೂಡಬೇಡಿ. ಖಾಸಗಿ ಬದುಕಲ್ಲಿ ನಿರಾಳತೆ ತರುವ ಬೆಳವಣಿಗೆ.
ಸಿಂಹ
ಭಾವನಾತ್ಮಕವಾಗಿ ಹೆಚ್ಚು ಉಲ್ಲಾಸ. ಅದಕ್ಕೆ ನಿಮ್ಮ ಮನೋಇಚ್ಛೆ ಪೂರೈಸುವುದೇ ಕಾರಣ. ಆತ್ಮೀಯ ಸಂಬಂಧ ಬಲಗೊಳ್ಳಲಿದೆ. ಕೌಟುಂಬಿಕ ಸಹಕಾರ.
ಕನ್ಯಾ
ಇಂದು ಏಕಾಂಗಿತನ ಹೆಚ್ಚು ಬಯಸುವಿರಿ. ಮನದಲ್ಲೇನೋ ಬೇಗುದಿ. ಆಪ್ತರ ಜತೆ ಮನ ಬಿಚ್ಚಿ ಮಾತಾಡಿ. ಅದರಿಂದ ಉದ್ವಿಗ್ನತೆ ಕಡಿಮೆಯಾದೀತು.
ತುಲಾ
ಅನ್ಯರಿಗೆ ನೆರವಾಗುವ ಹುಮ್ಮಸ್ಸಿನಲ್ಲಿ ನಿಮ್ಮ ಹಿತಾಸಕ್ತಿ ಬಲಿಗೊಡಬೇಡಿ. ಇಂದು ಆರ್ಥಿಕ ಸಂಕಷ್ಟ ಬಾಧಿಸಬಹುದು. ಖರೀದಿ ಕಡಿಮೆ ಮಾಡಿ.
ವೃಶ್ಚಿಕ
ನಿಮ್ಮ ಪೂರ್ಣ ಪ್ರಯತ್ನದ ಹೊರತಾಗಿಯೂ ನಿಮಗೆ ಅಪೇಕ್ಷಿತ ಫಲ ಸಿಗದು. ನಿರಾಶೆ ಉಂಟಾದೀತು. ಧೃತಿಗೆಡದಿರಿ, ಉತ್ಸಾಹ ತುಂಬಿಕೊಂಡು ಕಾರ್ಯಾಚರಿಸಿ.
ಧನು
ಬದುಕಲ್ಲಿ ಕೆಲವು ಪೂರಕ ಬದಲಾವಣೆ ಉಂಟಾದೀತು. ಭಾವನಾತ್ಮಕ ಬೆಂಬಲ ಪಡೆಯುವಿರಿ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ.
ಮಕರ
ಅಶಾಂತ ಮನಸ್ಸು. ದೈಹಿಕ ಸಮಸ್ಯೆ ಅಥವಾ ಮಾನಸಿಕ ಒತ್ತಡ ಇದಕ್ಕೆ ಕಾರಣ. ಕೆಲಸದಿಂದ ತುಸು ವಿರಾಮ ಪಡೆಯಿರಿ. ಧ್ಯಾನ ಸಹಕಾರಿಯಾದೀತು.
ಕುಂಭ
ಪ್ರತಿಕೂಲ ಪ್ರಸಂಗ ಎದುರಿಸುವಿರಿ. ಒತ್ತಡ ಅಧಿಕ. ಇದರಿಂದ ನಿಮ್ಮ ಮನಸ್ಸು ಧಾರ್ಮಿಕ ವಿಷಯದತ್ತ ವಾಲಬಹುದು. ಶಾಂತಿ ಬಯಸುವಿರಿ.
ಮೀನ
ಪ್ರಮುಖ ವಿಷಯಕ್ಕೆ ಆದ್ಯತೆ ಕೊಡಿ. ಅದನ್ನು ನೀವು ಬದಲಿಸಲು ಹೋಗದಿರಿ. ಪ್ರೀತಿ, ಕುಟುಂಬ ಮತ್ತು ವೃತ್ತಿ ಮಧ್ಯೆ ಸಮತೋಲನವಿರಲಿ.