ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮಲ್ಲಿ ಉತ್ತಮ ಕ್ರಿಯಾಶೀಲತೆಯಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ಇಂದು ಸಮಸ್ಯೆಗಳಿಲ್ಲದ ನಿರಾಳ ದಿನ ನಿಮ್ಮ ಪಾಲಿಗೆ. ಕುಟುಂಬಸ್ಥರ ಸಹಕಾರ.

ವೃಷಭ
ಕೆಲವು ವಿಷಯಗಳಿಗೆ ನೀವು ಆದ್ಯ ಗಮನ ಕೊಡಬೇಕು. ಅದನ್ನು ನಿರ್ಲಕ್ಷಿಸಬೇಡಿ. ಕೆಲಸದ ನಡುವೆ ಕುಟುಂಬ ಸದಸ್ಯರ ಹಿತಾಸಕ್ತಿಗೂ ಗಮನ ಕೊಡಿ.

ಮಿಥುನ
ಇತ್ತೀಚಿನ ಕೆಲವು ಘಟನೆಗಳು ನಿಮ್ಮ ವರ್ತನೆಯಲ್ಲಿ ಬದಲಾವಣೆ ತಂದೀತು. ಅದು ಬದುಕಿನ ಮೇಲೆ ಪರಿಣಾಮ ಬೀರದಂತೆ ನೋಡಿ.

ಕಟಕ
ಕೆಲ ಕಾರಣಗಳಿಂದ ನೀವಿಂದು ಭಾವುಕರಾಗಿ ವರ್ತಿಸುವಿರಿ. ಕೋಪವನ್ನು ನಿಯಂತ್ರಿಸಿ. ಕೌಟುಂಬಿಕ ವಿಷಯದಲ್ಲಿ ಆತುರದ ನಿರ್ಣಯ ತಾಳಬೇಡಿ.

ಸಿಂಹ
ಎಲ್ಲರನ್ನು ಕುರುಡಾಗಿ ನಂಬಬೇಡಿ.  ಯಾವುದೋ ವಿಷಯ ಚಿಂತೆಗೆ ಕಾರಣವಾಗುತ್ತದೆ. ಪ್ರೀತಿಯ ನಿವೇದನೆ ಫಲ ನೀಡದು.

ಕನ್ಯಾ
ನಿಮ್ಮ ಕನಸೆಲ್ಲವೂ ಒಂದೇ ಬಾರಿ ಈಡೇರದು ಎಂಬ ಅರಿವು ನಿಮಗಿರಲಿ. ಕಾಯುವ ತಾಳ್ಮೆ ನಿಮಗಿರಬೇಕು. ಆರೋಗ್ಯ ಸ್ಥಿರ.

ತುಲಾ
ಬದುಕಿನ ಕುರಿತು ಸರಿಯಾದ ನಿರ್ಧಾರ ತಾಳಬೇಕಾದವರು ನೀವೆ.  ಅದಕ್ಕೆ ಇತರರನ್ನು ಅತಿಯಾಗಿ ಅವಲಂಬಿಸಬೇಡಿ.ಆರ್ಥಿಕ ಸುಧಾರಣೆ.

ವೃಶ್ಚಿಕ
ಗೊಂದಲಭರಿತ ಮನಸ್ಸು. ಸಮಸ್ಯೆಗಳು ಹೆಚ್ಚಿವೆ ಎಂಬ ದುಗುಡ. ಧಾರ್ಮಿಕ ವಿಚಾರದಲ್ಲಿ ಶಾಂತಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದು. ಆರೋಗ್ಯಕ್ಕೆ ಗಮನಕೊಡಿ.

ಧನು
ಫಲಪ್ರದ ದಿವಸ. ಯಾವುದೋ ಕಾರ್ಯ ಸಾಧಿಸಲು ಯೋಜಿಸಿದ್ದರೆ ಇಂದು ಕಾರ್ಯಗತ. ಸಾಂಸಾರಿಕ ಸಮಸ್ಯೆ ಪರಿಹಾರ ಕಾಣುವುದು.

ಮಕರ
ಇತರರ ಒಳ್ಳೆ ಕೆಲಸ ಮೆಚ್ಚಿಕೊಳ್ಳಿ. ಅವರಿಂದ ಮುಂದಕ್ಕೆ ನಿಮಗೂ ಕಾರ್ಯವಾಗಲಿದೆ. ಸಾಂಸಾರಿಕ ಸಮಸ್ಯೆ ಬಗ್ಗೆ ಅತಿಚಿಂತೆ ಬೇಡ. ಅದು ತಾತ್ಕಾಲಿಕ.

ಕುಂಭ
ನೀವಿಂದು ಭಾವುಕರಾಗಿ ವರ್ತಿಸುವಿರಿ. ಆದರೆ ಇದು ನಿಮಗೆ ಪಾಸಿಟಿವ್ ಫಲಿತಾಂಶ ತರಲಿದೆ. ಆತ್ಮೀಯ ಸಂಬಂಧ ಗಾಢವಾಗಲಿದೆ. ಧನಸಂಚಯ ಅಧಿಕ.

ಮೀನ
ಬಿರುಸಿನ ವರ್ತನೆ ತೋರುವಿರಿ. ಇದೇ ವೇಳೆ ಪ್ರಮುಖ ವಿಷಯದಲ್ಲಿ ನಿಷ್ಕ್ರಿಯತೆ ಪ್ರದರ್ಶಿಸುವಿರಿ. ಇದು ಪ್ರತಿಕೂಲ ಸನ್ನಿವೇಶ ಸೃಷ್ಟಿಸಬಹುದು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!