ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಸಂಬಂಧದಲ್ಲಿ ಏರುಪೇರು. ಅದನ್ನು ಎದುರಿಸಲು ತಯಾರಾಗಿರಿ. ಮನದಲ್ಲಿ ಶಾಂತಿ, ಹೃದಯದಲ್ಲಿ ಪ್ರೀತಿ ತುಂಬಿಕೊಂಡು ವ್ಯವಹರಿಸಿರಿ.

ವೃಷಭ
ಕೆಲವರ ಸಂಬಂಧ ಕಡಿದುಕೊಳ್ಳಲು ಯೋಜಿಸಿದ್ದರೆ ಮುಂದುವರಿಯಿರಿ. ಅದರಿಂದ ಒಳಿತು ಆಗಲಿದೆ. ಹಣದ ಹೂಡಿಕೆಯಿಂದ ಲಾಭ.

ಮಿಥುನ
ಕೆಲಸದಲ್ಲಿ ತಪ್ಪು ಘಟಿಸಬಹುದು. ಹಾಗಾಗಿ ಎಚ್ಚರವಿರಲಿ. ಎಲ್ಲೆಂದರಲ್ಲಿ ಹಣ ಹೂಡಬೇಡಿ. ನಷ್ಟವಾದೀತು. ಆರೋಗ್ಯ ಸಮಸ್ಯೆ.

ಕಟಕ
ಇಂದು ಹೊರಗೆ ಹೋಗದೆ ಮನೆಯಲ್ಲೆ ಕಾಲ ಕಳೆಯುವ ಮನಸ್ಸು. ಕಾರ್ಯದಲ್ಲಿ ನಿರಾಸಕ್ತಿ. ಹಳೆಯ ನೆನಪುಗಳು ಕಾಡಬಹುದು.

ಸಿಂಹ
ನೀವಾಗಿ ಪ್ರತಿಕೂಲ ಪರಿಸ್ಥಿತಿ ಬದಲಿಸಲು ಹೋಗದಿರಿ. ತಾನಾಗಿ ಅದು ನಿಮ್ಮ ಪರವಾಗಿ ವಾಲಲಿದೆ. ಅನಿರೀಕ್ಷಿತ ಧನಲಾಭ. ಕೆಮ್ಮು, ಶೀತಬಾಧೆ.

ಕನ್ಯಾ
ವೃತ್ತಿಯ ಮತ್ತು ಖಾಸಗಿ ಬದುಕಿನ ಕೆಲವು ಗುರಿ  ಈಡೇರುವುದು. ಜನಪ್ರಿಯತೆ ಗಳಿಸುವಿರಿ. ಆರೋಗ್ಯ ಸಮಸ್ಯೆ ಪರಿಹಾರ. ಆರ್ಥಿಕ ಸ್ಥಿತಿ ಉತ್ತಮ.

ತುಲಾ
ನಿಮ್ಮ ಪಾಲಿಗೆ ಯಶಸ್ವಿ ದಿನ. ಉದ್ಯೋಗದಲ್ಲಿ ಗುರಿ ಈಡೇರಿಕೆ. ಭಾವನಾತ್ಮಕ ಸಂತೋಷ.  ಹೊಸ ಸಂಬಂಧ ಬೆಳೆಯುವುದು. ಆರ್ಥಿಕ ಸ್ಥಿತಿ ಸದೃಢ.

ವೃಶ್ಚಿಕ
ಕೆಲಸದ ಹೊರೆ ಹೆಚ್ಚು. ಅದನ್ನು ಸಮರ್ಥವಾಗಿ ಪೂರೈಸುವಿರಿ. ಕೌಟುಂಬಿಕ ವಿಷಯದಲ್ಲಿ ಸಮಾಧಾನ.  ಹೊಟ್ಟೆ ನೋವು ಅಥವಾ ಬೆನ್ನು ನೋವಿನಿಂದ ಶಮನ.

ಧನು
ಒತ್ತಡದಿಂದಲೇ ದಿನ ಆರಂಭವಾದರೂ ಬಳಿಕ ಒತ್ತಡ ನಿವಾರಣೆ. ನಿರಾಳತೆ ಅನುಭವಿಸುವಿರಿ. ಕೌಟುಂಬಿಕ ಬೇಡಿಕೆ ಈಡೇರುವುದು.

ಮಕರ
ಹೊಸ ವ್ಯವಹಾರದಲ್ಲಿ ಹಣ ಹೂಡುವಾಗ ಎಚ್ಚರಿಕೆ ವಹಿಸಿ. ಉದ್ಯೋಗದಲ್ಲಿ ಆರ್ಥಿಕ ಗಳಿಕೆ ಹೆಚ್ಚಳ. ಆಪ್ತರಿಂದ ಟೀಕೆ ಕೇಳುವ ಸಂಭವವಿದೆ.

ಕುಂಭ
ಕೆಲವರ ಸಲಹೆ ಪಾಲಿಸಲು ಹೋಗಿ ಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರದಿಂದ ನಡಕೊಳ್ಳಿ. ಕುಟುಂಬಸ್ಥರ ಹಿತಾಸಕ್ತಿ ಪಾಲಿಸಿರಿ.

ಮೀನ
ಹಲವಾರು ಪ್ರಮುಖ ಕೆಲಸಗಳು ಮಾಡದೆ ಬಾಕಿ ಉಳಿದಿವೆ. ಅದನ್ನು ಪೂರೈಸಲು ಅದ್ಯಗಮನ ಕೊಡಿ. ಕೌಟುಂಬಿಕ ಕಲಹಕ್ಕೆ ಅನುವು ನೀಡದಿರಿ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!