ಮೇಷ
ನಿಮ್ಮ ಸಾಮರ್ಥ್ಯ ಎಲ್ಲರ ಗಮನಕ್ಕೆ ಬರುವ ಪ್ರಸಂಗ ಒದಗುವುದು. ಧೈರ್ಯದಿಂದ ಮುಂದೆ ಹೆಜ್ಜೆ ಇಡಿ. ಜಗತ್ತೇ ನಿಮಗೆ ತಲೆ ಬಾಗುವುದು.
ವೃಷಭ
ಹೆಚ್ಚು ಉತ್ಸಾಹದ ದಿನ. ಕಾರ್ಯದಲ್ಲಿ ಸಫಲತೆ. ಸಣ್ಣ ವಿಷಯ ಗಂಭೀರವಾಗಿ ಪರಿಗಣಿಸಿ ಮನಸ್ಸು ಹಾಳು ಮಾಡಿಕೊಳ್ಳದಿರಿ. ಕೌಟುಂಬಿಕ ಸಹಕಾರ.
ಮಿಥುನ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಯಾರನ್ನೂ ಕುರುಡಾಗಿ ನಂಬದಿರಿ. ಬಂಧುಗಳ ಸಹಕಾರ.
ಕಟಕ
ಹೊಸ ಯೋಜನೆ ಕಾರ್ಯಗತ ಮಾಡಲು ಸಕಾಲ. ವಿಘ್ನಗಳು ಪರಿಹಾರ. ಕೌಟುಂಬಿಕ ಸಮಸ್ಯೆಯೊಂದು ಸೌಹಾರ್ದದಿಂದ ಪರಿಹಾರ ಕಾಣಲಿದೆ.
ಸಿಂಹ
ಯಾರ ಮನಸ್ಸನ್ನೂ ಒಲಿಸಬಲ್ಲ ಕಲೆ ನಿಮಗೆ ಕರಗತ. ಇದು ನಿಮ್ಮ ವ್ಯವಹಾರವನ್ನು ಸುಲಲಿತಗೊಳಿಸಲಿದೆ.ಆರೋಗ್ಯ ಸಮಸ್ಯೆ ಪರಿಹಾರ.
ಕನ್ಯಾ
ಇಷ್ಟಾರ್ಥ ಸಿದ್ಧಿ.ಕಠಿಣವೆಂದು ಭಾವಿಸಿದ ಕಾರ್ಯ ಸುಲಭದಲ್ಲಿ ಮುಗಿಯಲಿದೆ. ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯಿರಿ. ಖರ್ಚು ನಿಯಂತ್ರಣ.
ತುಲಾ
ಹೆಚ್ಚು ಪ್ರಾಕ್ಟಿಕಲ್ ಆಗಿ ಇಂದು ವರ್ತಿಸುವಿರಿ. ಇದರಿಂದ ಅನಗತ್ಯ ಮಾನಸಿಕ ನೋವು ತಿನ್ನುವುದು ತಪ್ಪಲಿದೆ. ಕೌಟುಂಬಿಕ ಅಶಾಂತಿ ನಿವಾರಣೆ.
ವೃಶ್ಚಿಕ
ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತನ್ನಿರಿ. ಇದರಿಂದ ಕೆಲವಾರು ಸಮಸ್ಯೆ ಪರಿಹಾರವಾಗಲಿದೆ. ಇಷ್ಟದೇವರ ಪ್ರಾರ್ಥನೆ ಮಾಡಿ ನೆಮ್ಮದಿ ಕಾಣಿ.
ಧನು
ನಿಮ್ಮ ಗುರಿ ಸಾಧನೆಗೆ ಕೆಲವರು ಅಡ್ಡಗಾಲು ಹಾಕಲು ಯತ್ನಿಸುವರು. ಅವರನ್ನು ದೂರವಿಡಿ. ಖರ್ಚು ಕಡಿಮೆ ಮಾಡಲು ಮೊದಲು ಗಮನ ಕೊಡಿ.
ಮಕರ
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಕೆಲವರಿಂದ ಟೀಕೆ ಕೇಳುವಿರಿ.
ಕುಂಭ
ಕೆಲಕಾಲದಿಂದ ಕಾಯುತ್ತಿರುವ ಅವಕಾಶವೊಂದು ಇಂದು ಸಿಗುವುದು. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕೌಟುಂಬಿಕ ಸಹಕಾರ.
ಮೀನ
ಕೆಲಸದ ಒತ್ತಡದಿಂದ ಹೊರಬಂದು ಆನಂದ ಅನುಭವಿಸಿರಿ. ಕುಟುಂಬ ಸದಸ್ಯರ ಜತೆ ಕಾಲ ಕಳೆಯಿರಿ. ಅವರ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ.