ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಕೆಲಸ ಸಾಧಿಸಲ್ಪಡಲು ಹೆಚ್ಚು ಪರಿಶ್ರಮ ಹಾಕಬೇಕಾಗುವುದು. ಆದರೂ ನಿರೀಕ್ಷಿತ ಫಲಿತಾಂಶ ದೊರಕದು. ನಿರಾಶೆ ಬೇಡ, ಕಾದು ನೋಡಿರಿ.

ವೃಷಭ
ಸಮಸ್ಯೆ ಎದುರಾದರೆ ಅದನ್ನು ಎದುರಿಸಲು ಹಿಂಜರಿಕೆ ಬೇಡ. ಆತ್ಮವಿಶ್ವಾಸ ಕಳಕೊಳ್ಳದಿರಿ. ನಿಧಾನವಾಗಿಯಾದರೂ ಸಮಸ್ಯೆ ಪರಿಹಾರ.

ಮಿಥುನ
ಮಾನಸಿಕವಾಗಿ ಅಶಾಂತಿ. ಬಿಡುವಿಲ್ಲದ ಕಾರ್ಯ ಅದಕ್ಕೆ ಕಾರಣ. ಅದರ ಜತೆಗೇ ಬಂಧುಗಳ ಕಿರಿಕಿರಿ. ನಿಮ್ಮ ಮಾತಿಗೆ ಇತರರು ಬೆಲೆ ನೀಡುವುದಿಲ್ಲ.

ಕಟಕ
ಸಂತೋಷದ ದಿನ. ಬಂಧು ಅಥವಾ ಸ್ನೇಹಿತರಿಂದ ಶುಭ ಸುದ್ದಿ ಕೇಳುವಿರಿ. ಆಪ್ತರ ಜತೆ ಸೇರಿ ಸಂಭ್ರಮ ಆಚರಣೆ. ಕೌಟುಂಬಿಕ ಸಮ್ಮಿಲನ.

ಸಿಂಹ
ನಿಮ್ಮ ವ್ಯಕ್ತಿತ್ವದಿಂದ ಸುತ್ತಮುತ್ತ ಉಲ್ಲಾಸ ತುಂಬಲು ಕಾರಣರಾಗುವಿರಿ. ಎಲ್ಲರೂ ನಿಮ್ಮ ನಡೆನುಡಿ ಮೆಚ್ಚಿಕೊಳ್ಳುವರು. ಬಂಧುಗಳ ಸಮಾಗಮ.

ಕನ್ಯಾ
ಸಹೋದ್ಯೋಗಿಯಿಂದ ಅತಿಯಾದುದನ್ನು ನಿರೀಕ್ಷಿಸದಿರಿ. ನಿಮಗೆ ನಿರಾಶೆ ಕಾದಿದೆ. ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಒತ್ತಡ ಕಡಿಮೆ.

ತುಲಾ
ಅನ್ಯರ ಜತೆ ಮಾತುಕತೆ ವೇಳೆ ನಿಮ್ಮ ನಿಲುವನ್ನು ಸ್ಪಷ್ಟವಾಗಿ ಸಾರಲು ಹಿಂಜರಿಯದಿರಿ. ಇದರಿಂದ ಗೊಂದಲ, ಬಿಕ್ಕಟ್ಟು ಉಂಟಾಗದು. ಖರ್ಚು ಅಧಿಕ.

ವೃಶ್ಚಿಕ
ಕಷ್ಟದ ಪರಿಸ್ಥಿತಿ ಒದಗಿದರೂ ಅದನ್ನು ಸಮರ್ಥವಾಗಿ ಎದುರಿಸಲು ಶಕ್ತ ರಾಗುವಿರಿ. ಆತ್ಮವಿಶ್ವಾಸ ಕಳಕೊಳ್ಳದಿರಿ. ಕೌಟುಂಬಿಕ ಸಹಕಾರ.

ಧನು
ಇತರರ ಕಡೆಗೆ ಸಹಾನುಭೂತಿಯಿಂದ ವರ್ತಿಸುವ ನಿಮ್ಮ ಗುಣ ಎಲ್ಲರ ಮನ ಸೆಳೆಯಲಿದೆ. ಬಂಧುಗಳಿಂದ ಸಹಕಾರ ಸಿಗಲಿದೆ.

ಮಕರ
ವೃತ್ತಿಯಲ್ಲಿ ಅಥವಾ ಕುಟುಂಬದಲ್ಲಿ ಭಿನ್ನಮತ ಉಂಟಾದೀತು. ಅದನ್ನು ಹೊಂದಾಣಿಕೆಯಿಂದ ಸರಿಪಡಿಸಿ. ಸಂಘರ್ಷದ ಹಾದಿ ಒಳಿತನ್ನು ತರಲಾರದು.

ಕುಂಭ
ಉಧಾಸ ಭಾವದಿಂದ ದಿನದ ಆರಂಭ ಆಗಲಿದೆ. ಕೆಲಸದಲ್ಲೂ ಏಕಾಗ್ರತೆ ಮೂಡದು. ಆದರೆ ದಿನ ಕಳೆದಂತೆ ನಿಮ್ಮ ಉತ್ಸಾಹ ಮರಳಿ ಕಂಡುಕೊಳ್ಳುವಿರಿ.

ಮೀನ
ಹಷೋಲ್ಲಾಸದ ದಿನ. ಎಲ್ಲರಲ್ಲೂ ಸ್ಪೂರ್ತಿ ತುಂಬುವಿರಿ. ಎಚ್ಚರದ ನಡೆಯಿಂದ ನಿಮ್ಮ ಆರೋಗ್ಯವನ್ನೂ ಸುಧಾರಿಸಿಕೊಳ್ಳುವಿರಿ. ಕೌಟುಂಬಿಕ ಸಮಾಧಾನ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!