ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನೀವು ಉದ್ಯೋಗ ಬದಲಾವಣೆಗೆ ಯೋಚಿಸುತ್ತಿದ್ದರೆ ದೃಢ ನಿರ್ಧಾರ ತಾಳಿ.  ಆರ್ಥಿಕ ವ್ಯವಹಾರ ಸಾಧಾರಣ ಫಲ ನೀಡುವುದು.

ವೃಷಭ
ನಿಮ್ಮ ದಕ್ಷ ಕೆಲಸಕ್ಕೆ ಸೂಕ್ತ ಪ್ರತಿಫಲ ಪಡೆಯುವಿರಿ. ಬಾಯಿ ಚಪಲಕ್ಕೆ ಕಡಿವಾಣ ಹಾಕಿ. ಆರೋಗ್ಯ ಕಾಪಾಡಲು ಗಮನ ಕೊಡಿ.

ಮಿಥುನ
ಇಷ್ಟದ ವ್ಯಕ್ತಿಯನ್ನು ಭೇಟಿಯಾಗಿ ಅವರನ್ನು ಪ್ರಭಾವಿತಗೊಳಿಸಲು ಯತ್ನಿಸುವಿರಿ. ದೊಡ್ಡ ಖರ್ಚಿನ ಸಾಧ್ಯತೆ ಮೂಡಿಬರಲಿದೆ.

ಕಟಕ
ಆಶಾವಾದದಿಂದ ದಿನ ಆರಂಭಿಸಿ. ನಿರಾಶೆ ದೂರ ಸರಿಸಿ. ಹಣ ಹೂಡಿಕೆಯಲ್ಲಿ ಎಚ್ಚರ ವಹಿಸಿ. ಕುಟುಂಬ ಸದಸ್ಯರ ಸಲಹೆ ಪಡೆಯಿರಿ.

ಸಿಂಹ
ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದೀರಿ. ಅದರಿಂದ ಹೊರಬರಲು ಪ್ರಯತ್ನಿಸಿ. ಮನಸ್ಸಿದ್ದರೆ ಮಾರ್ಗವಿದೆ ಎಂದು ಅರಿತುಕೊಳ್ಳಿ.

ಕನ್ಯಾ
ಹಿನ್ನಡೆ ಕಂಡರೂ ಹೋರಾಟ ಮನೋಭಾವ ಬಿಡಬೇಡಿ. ಪ್ರೀತಿಯ ವ್ಯಕ್ತಿಗೆ ನಿಮ್ಮ ಭಾವನೆ ತಿಳಿಸಲು ಹಿಂಜರಿಕೆ ತೋರಬೇಕಿಲ್ಲ.

ತುಲಾ
ನೀವು ಕಾತರಿಸುತ್ತಿದ್ದ ಬೆಳವಣಿಗೆ ಇಂದು ಸಾಕಾರ ಕಾಣಲಿದೆ. ಪ್ರೀತಿಯಲ್ಲಿ ಯಶಸ್ಸು. ಸಣ್ಣ ಆರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ.

ವೃಶ್ಚಿಕ
ಏಕತಾನತೆಯನ್ನು ತೊಡೆದು ಹಾಕಿ. ಹೊಸತನಕ್ಕೆ  ಬಾಗಿಲು ತೆರೆಯಿರಿ. ದೈಹಿಕ ಆಲಸ್ಯ ತೊರೆಯುವುದು ಮುಖ್ಯ. ಕ್ಷಿಪ್ರ ಕಾರ್ಯ ಲೇಸು.

ಧನು
ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿ ಪ್ರವೇಶಿಸ ಬಹುದು. ಅವರಿಂದ ಸಂತೋಷ. ವೃತ್ತಿಯಲ್ಲಿ ಸಮಾಧಾನಕರ ಬೆಳವಣಿಗೆ.

ಮಕರ
ಭಿನ್ನಮತ, ವಾಗ್ವಾದ ಉಂಟಾದೀತು. ಅದನ್ನು ತಾಳ್ಮೆಯಿಂದ ನಿಭಾಯಿಸಿ. ಆರ್ಥಿಕ ಯೋಜನೆಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಒಳಿತು.

ಕುಂಭ
ಸಂತೋಷ ನೀಡುವ ಜನರ ಜತೆ ಕಾಲ ಕಳೆಯುವಿರಿ. ಉದ್ವಿಗ್ನತೆ ಶಮನಕ್ಕೆ ಇದು ಸಹಕಾರಿ.  ದೇವರ ಪೂಜೆಯಿಂದ ಒಳಿತಾದೀತು.

ಮೀನ
ಮಾನಸಿಕ ನೆಮ್ಮದಿ. ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಆಪ್ತ ಬಂಧುವಿನ ಭೇಟಿ. ಆರ್ಥಿಕ ಯೋಜನೆ ಸಫಲತೆ ಕಾಣುವುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!