ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮ ಪ್ರಯತ್ನದಿಂದ ಇಷ್ಟಾರ್ಥ ಸಿದ್ಧಿ. ಧನಾಗಮ. ಆರೋಗ್ಯ ಸ್ಥಿತಿಯೂ ಉತ್ತಮ. ಒಟ್ಟಿನಲ್ಲಿ ನಿಮ್ಮ ಪಾಲಿಗೆ ಇಂದು ಸುದಿನ.

ವೃಷಭ
ಕಳೆದು ಹೋದುದರ ಕುರಿತು ಕೊರಗುತ್ತಾ ಕೂರದಿರಿ. ಜೀವನಶೈಲಿ, ಆಹಾರದಲ್ಲಿ ಬದಲಾವಣೆ ತರಲು ಯತ್ನಿಸದಿರಿ. ಯಥಾಸ್ಥಿತಿ ಉತ್ತಮ.

ಮಿಥುನ
ಉದ್ಯೋಗ ಕ್ಷೇತ್ರದಲ್ಲಿ ಪೂರಕ ಬೆಳವಣಿಗೆ. ಕಾರ್ಯಸಿದ್ಧಿ. ಆರ್ಥಿಕ ಸ್ಥಿತಿ ತೃಪ್ತಿಕರ.  ಕೌಟುಂಬಿಕ ವಿರಸ ಶಮನ, ಸೌಹಾರ್ದ ವಾತಾವರಣ.

ಕಟಕ
ಕುಟುಂಬವು ನಿಮ್ಮ ಸಂತೋಷದ ಕೇಂದ್ರ. ಹಾಗಾಗಿ ಕೌಟುಂಬಿಕ ಹಿತಾಸಕ್ತಿಗೆ ಆದ್ಯತೆ ಕೊಡಿ. ಉದ್ಯಮದಲ್ಲಿ ತುಸು ಹಿನ್ನಡೆ ಸಂಭವ.

ಸಿಂಹ
ಕೆಲಸದಲ್ಲಿ ಮೂಡಿದ್ದ ಸಂಕಷ್ಟ ಪರಿಹಾರ. ಕುಟುಂಬ ಮತ್ತು ಸ್ನೇಹಿತರ ಜತೆ ಸಂಪರ್ಕವಿರಲಿ. ಉದ್ಯೋಗ ಬದಲಾವಣೆ ಒಳಿತು ತಾರದು.

ಕನ್ಯಾ
ಜೀವನಶೈಲಿ ಸುಧಾರಿಸಬೇಕು. ಯೋಗ, ಧ್ಯಾನ ಉತ್ತಮ. ಕೆಲಸದಲ್ಲಿ ಒತ್ತಡ ಹೆಚ್ಚು. ಹಳೆಯ ಸ್ನೇಹಿತರ ಭೇಟಿ. ಆರ್ಥಿಕ ಸ್ಥಿತಿ ಉತ್ತಮ.

ತುಲಾ
ಭವಿಷ್ಯದ ಬಗ್ಗೆ ಯೋಚಿಸುವ ಕಾಲ ಬಂದಿದೆ. ಖರ್ಚುವೆಚ್ಚ ನಿಯಂತ್ರಿಸಿ. ವೃತ್ತಿಯಲ್ಲಿ ವಾಗ್ವಾದ ತಪ್ಪಿಸಿ. ಏಕಾಂಗಿಗಳಿಗೆ ವೈವಾಹಿಕ ಭಾಗ್ಯ.

ವೃಶ್ಚಿಕ
ನೀವು ಬಯಸಿದಂತೆ ದಿನ ಸಾಗಲಿದೆ. ವೃತ್ತಿ ಮತ್ತು ಖಾಸಗಿ ಬದುಕಲ್ಲಿ ಸಮನ್ವಯ.   ಹಣಕಾಸು ಪರಿಸ್ಥಿತಿ ತೃಪ್ತಿಕರ. ವಿದ್ಯಾರ್ಥಿಗಳಿಗೆ ಯಶಸ್ಸು

ಧನು
ಯಾವುದೋ ವಿಷಯ ದ್ವಂದ್ವದಲ್ಲಿ ಕೆಡವಲಿದೆ. ಪರಿಸ್ಥಿತಿಗೆ ಸೂಕ್ತವಾಗಿ ವರ್ತಿಸಿ. ಕೌಟುಂಬಿಕ ಸೌಹಾರ್ದ. ಆರೋಗ್ಯ ಸಮಸ್ಯೆ.

ಮಕರ
ಆರ್ಥಿಕ ಉನ್ನತಿ, ಉದ್ಯಮದಲ್ಲಿ ಯಶಸ್ಸು. ಅತಿಯಾದ ದೈಹಿಕ ಶ್ರಮ ಮೈನೋವಿಗೆ ಕಾರಣವಾದೀತು. ಶಾಂತ ಕೌಟುಂಬಿಕ ಪರಿಸರ.

ಕುಂಭ
ನಿಮ್ಮ ಕೆಲಸದ ಮೇಲೆ ಹೆಚ್ಚು ಆಸ್ಥೆ ಇರಲಿ. ಇತರ ವಿಷಯಗಳತ್ತ ಗಮನ ಹರಿದು ನಿಮ್ಮ ಗುರಿ ತಪ್ಪದಿರಲಿ.  ಆಹಾರ ಸೇವನೆ ಹಿತಮಿತವಿರಲಿ.

ಮೀನ
ಮಾನಸಿಕ ಒತ್ತಡ ದಿಂದಾಗಿ ನಿದ್ರಾಹೀನತೆ. ಸಂಗಾತಿ ಜತೆಗೆ ವಿರಸ. ತಾಳ್ಮೆ ಕಳಕೊಳ್ಳದಿರಿ. ವೃತ್ತಿಯಲ್ಲಿ ಗುರಿ ಸಾಧನೆ. ಖರ್ಚು ಅಧಿಕ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!