ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಖಾಸಗಿ ಬದುಕಲ್ಲಿ ಭಾವನಾತ್ಮಕ ಏರುಪೇರು. ಆಪ್ತರಿಂದ  ನಿಮ್ಮ ಅಹವಾಲು ನಿರಾಕರಣೆ. ವೃತ್ತಿಯಲ್ಲಿ ಮಿಶ್ರ ಫಲ. ಲಾಭ- ನಷ್ಟದ ಸಮ್ಮಿಶ್ರಣ.
ವೃಷಭ
ಬಿಗುಮಾನ, ಜಡತ್ವ ಬಿಟ್ಟು ವ್ಯವಹರಿಸಿದರೆ ಕಾರ್ಯದಲ್ಲಿ ಸಫಲತೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಆರ್ಥಿಕ ಸಂಕಷ್ಟ ನಿವಾರಣೆ.
ಮಿಥುನ
ವೃತ್ತಿಯ ಒತ್ತಡ. ಅದರಿಂದ ಹೊರಬಂದು ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಬಿಡುವು ಮಾಡಿಕೊಳ್ಳಿ. ಅದರಲ್ಲಿ ಸಂತೋಷ ಕಾಣುವಿರಿ.
ಕಟಕ
ಸಾಧಿಸಬಯಸುವ ಗುರಿ ಸನಿಹವಾಗಲಿದೆ. ಕಷ್ಟಗಳು ಎದುರಾದರೂ ಅವು ಪರಿಹಾರ ಕಾಣುವವು. ಹಣದ ಬಿಕ್ಕಟ್ಟು ನಿವಾರಣೆ. ಆತ್ಮೀಯರ ಸಹಕಾರ.
ಸಿಂಹ
ಕಠಿಣ ಹೊಣೆಗಾರಿಕೆ ಹೆಗಲೇರಿದರೂ ಅನ್ಯರ  ಸಹಕಾರದಿಂದ ಕಾರ್ಯ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಬೆಳವಣಿಗೆ. ಹಣದ ಬಿಕ್ಕಟ್ಟು ಪರಿಹಾರ.
ಕನ್ಯಾ
ಸಹೋದ್ಯೋಗಿಗಳ ಜತೆ ಸಂವಹನ ಕೊರತೆ. ಬಾಂಧವ್ಯದಲ್ಲಿ ಬಿಕ್ಕಟ್ಟು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಧೈರ್ಯದಿಂದ ಎದುರಿಸಿ.
ತುಲಾ
ಕುಟುಂಬ ಸದಸ್ಯರ ಜತೆ ಭಿನ್ನಮತ. ವಾಗ್ವಾದ ಸಂಭವ. ವಿಕೋಪಕ್ಕೆ ಕೊಂಡೊಯ್ಯದಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.
ವೃಶ್ಚಿಕ
ಸಾಂಸಾರಿಕ ವಿಷಯದಲ್ಲಿ ತುಸು ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ನಿಭಾಯಿಸಿ. ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ.
ಧನು
ವೃತ್ತಿಯಲ್ಲಿ ಹೆಚ್ಚು ಜವಾಬ್ದಾರಿ. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಸ್ನೇಹಿತರ ಜತೆ ಕಾಲ ಕಳೆಯುವ ಅವಕಾಶ.
ಮಕರ
ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.
ಕುಂಭ
ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಜಿಗುಟುತನ ಬಿಡಿ. ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಬೇಕು. ಹಣಕಾಸು ಸಮಸ್ಯೆ.
ಮೀನ
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಂಡುಬಂದ ಬಿಕ್ಕಟ್ಟಿಗೆ ಪರಿಹಾರದ ಲಕ್ಷಣ ತೋರಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!