ಮೇಷ
ಅದೃಷ್ಟ ನಿಮ್ಮೊಂದಿಗಿದೆ. ವ್ಯವಹಾರದಲ್ಲಿ ಯಶ. ವೃತ್ತಿಯಲ್ಲಿ ಉನ್ನತಿ. ಪ್ರೀತಿಯಲ್ಲಿ ಅಪಸ್ವರ ಸಂಭವ. ಸಣ್ಣ ಕಾರಣಕ್ಕಾಗಿ ಸಂಬಂಧ ಕೆಡಿಸಿಕೊಳ್ಳದಿರಿ.
ವೃಷಭ
ನಿಮ್ಮ ಯಶಸ್ಸಿಗೆ ಇಂದು ಯಾವುದೇ ಅಡ್ಡಿ ಬರದು. ವೃತ್ತಿ, ಹಣದ ವಿಚಾರದಲ್ಲಿ ಯಶಸ್ಸು. ಖಾಸಗಿ ಬದುಕಿನ ಸಮಸ್ಯೆಯನ್ನು ವೃತ್ತಿಗೆ ಎಳೆದು ತರಬೇಡಿ.
ಮಿಥುನ
ವೃತ್ತಿಯಲ್ಲಿ ಉತ್ಸಾಹ. ಖರ್ಚು ನಿಯಂತ್ರಣಕ್ಕೆ ಗಮನ ಕೊಡಿ. ವಾಹನ ಚಾಲನೆಯಲ್ಲಿ ತುಸು ಎಚ್ಚರ ವಹಿಸಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.
ಕಟಕ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ನಿಮಗೆ ಅನುಕೂಲಕರ ಬೆಳವಣಿಗೆ. ಸಂಶಯಾಸ್ಪದ ಕ್ಷೇತ್ರದಲ್ಲಿ ಹಣ ಹೂಡದಿರಿ. ಎಚ್ಚರದಿಂದ ನಡಕೊಳ್ಳಿ.
ಸಿಂಹ
ಉದ್ಯೋಗದಲ್ಲಿ ನೀವು ಬಯಸಿದ ಪ್ರಗತಿ. ಹಣದ ಹೂಡಿಕೆ ಉತ್ತಮ ಫಲ ನೀಡುವುದು. ಸಹೋದ್ಯೋಗಿಯ ಜತೆ ವಿರಸ ಉಂಟಾದೀತು.
ಕನ್ಯಾ
ನಿಮ್ಮ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ. ಅದರಿಂದ ಕೆಲವಾರು ಸಮಸ್ಯೆ ಪರಿಹಾರ ಕಾಣುವುದು. ಹದಗೆಟ್ಟ ಸಂಬಂಧ ಸುಧಾರಿಸುವುದು.
ತುಲಾ
ವೃತ್ತಿಯಲ್ಲಿ ಜನಪ್ರಿಯತೆ ಗಳಿಸುವಿರಿ. ನಿಮ್ಮ ಸಾಧನೆಗೆ ಮೆಚ್ಚುಗೆ. ಮನಸ್ಸಿನ ಬೇಸರ ಕಳೆಯುವ ಬೆಳವಣಿಗೆ ಸಂಭವಿಸುವುದು. ಸ್ನೇಹಿತರ ಭೇಟಿ.
ವೃಶ್ಚಿಕ
ವೃತ್ತಿಯಲ್ಲಿ ಗುರಿ ಸಾಧನೆ. ಅದರಿಂದ ತೃಪ್ತಿ. ಆದರೆ ವೈಯಕ್ತಿಕ ಬದುಕಿನಲ್ಲಿ ಅಸಮಾಧಾನ. ವಾಗ್ವಾದ, ಸಂಘರ್ಷ ಉಂಟಾದೀತು. ನೆಮ್ಮದಿ ಕೆಡಬಹುದು.
ಧನು
ಹರ್ಷ, ಉಲ್ಲಾಸ ತುಂಬಿದ ದಿನ ನಿಮಗೆ ಕಾದಿದೆ. ಕಾರ್ಯವೊಂದು ಸಫಲವಾಗಿ ಮುಗಿದ ಕುರಿತ ಸಮಾಧಾನ. ಸಾಂಸಾರಿಕ ಸಹಕಾರ.
ಮಕರ
ಆರ್ಥಿಕ ಸ್ಥಿತಿಯಲ್ಲಿ ತೃಪ್ತಿಕರ ಬೆಳವಣಿಗೆ. ಆತ್ಮೀಯರ ಜತೆ ಕಾಲಕ್ಷೇಪ. ಕೆಲ ಸಂದರ್ಭದಲ್ಲಿ ನಿಮ್ಮ ಕೋಪ ನಿಯಂತ್ರಿಸಿ. ಬಂಧುತ್ವ ಕೆಡಬಹುದು.
ಕುಂಭ
ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಅದನ್ನು ಧೈರ್ಯದಿಂದ ಎದುರಿಸಿ. ಇತರರ ನೆರವಿಗೆ ಕಾಯಬೇಡಿ. ಕೆಲವರಿಂದ ಟೀಕೆಯೂ ಕೇಳಿಬಂದೀತು.
ಮೀನ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ನಿಮಗೆ ಪೂರಕವಾದ ಬೆಳವಣಿಗೆ. ದುಗುಡ ಸೃಷ್ಟಿಸಿದ್ದ ವಿಷಯ ಪರಿಹಾರ ಕಾಣುವುದು. ನಿಶ್ಚಿಂತೆ.