ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಕೌಟುಂಬಿಕ ಕರ್ತವ್ಯಕ್ಕೆ ಅದ್ಯತೆ ಕೊಡಿ.  ನಿಮ್ಮನ್ನು ಕಡೆಗಣಿಸುವ ವ್ಯಕ್ತಿಯ ಕುರಿತು ಭಾವುಕರಾಗಬೇಕಾಗಿಲ್ಲ. ವಾಸ್ತವಕ್ಕೆ ಇಳಿಯಿರಿ.
ವೃಷಭ
ಕಲಾವಿದರಿಗೆ ಹೆಚ್ಚಿನ ಮನ್ನಣೆ ದೊರಕಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಕೌಟುಂಬಿಕ ಸಮರಸತೆ, ಸೌಹಾರ್ದ.   ಅನವಶ್ಯ ಖರ್ಚು ಅಽಕ.
ಮಿಥುನ
ಕಾರ್ಯದಲ್ಲಿ ಯಶಸ್ಸು. ಆದರೆ ಸಣ್ಣಪುಟ್ಟ ಅಡ್ಡಿಗಳೂ ಒದಗಲಿದೆ. ಮುಂದೇನು ಆಗಲಿದೆ ಎಂಬ ಬಗ್ಗೆ ಹೆಚ್ಚು ಆತಂಕ ಪಡುವ ಹವ್ಯಾಸ ಬಿಡಿ.
ಕಟಕ
ಎಲ್ಲರನ್ನು ಕಣ್ಣುಮುಚ್ಚಿ ನಂಬದಿರಿ. ಕೆಲವರು ಬಗಲಲ್ಲಿ ಚೂರಿ ಹಿಡಕೊಂಡಿರುತ್ತಾರೆ.  ನಿಮ್ಮ ಕಾರ್ಯಕ್ಕೆ ಇತರರನ್ನೆ ಹೆಚ್ಚು ಅವಲಂಬಿಸಬೇಡಿ.
ಸಿಂಹ
ನಿಮ್ಮ ಸ್ವಭಾವಕ್ಕೆ ಪೂರಕವಾದ ವ್ಯಕ್ತಿಯ ಭೇಟಿ ಸಂಭವ. ಸಂಬಂಧ ದೀರ್ಘವಾದೀತು. ಸಣ್ಣ ಅವಘಡ ಸಂಭವ,  ಎಚ್ಚರಿಕೆ ವಹಿಸಿರಿ.
ಕನ್ಯಾ
ಸುಲಭದಲ್ಲಿ ಹಣ ಮಾಡುವ ಯೋಚನೆ ನಿಮ್ಮದು. ಆದರೆ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಕೌಟುಂಬಿಕ ಒತ್ತಡ ಹೆಚ್ಚು. ಖರ್ಚೂ ಹೆಚ್ಚಳ.
ತುಲಾ
ಸಕಾಲದಲ್ಲಿ ಕಾರ್ಯ  ಮುಗಿಸಿ. ಅನವಶ್ಯ ವಾಗ್ವಾದ ತಪ್ಪಿಸಿ. ಕೌಟುಂಬಿಕ ಸಂತೋಷಕ್ಕೆ ಯೋಜನೆ ಹಾಕಿಕೊಳ್ಳಿ. ಆಹಾರ ಕ್ರಮ ತಪ್ಪಿಸದಿರಿ.
ವೃಶ್ಚಿಕ
ಉತ್ಸಾಹದ ದಿನ. ನಿಮ್ಮ ಯೋಜನೆ -ಲ ನೀಡಲಿದೆ. ಬಂಧುಗಳ ಭೇಟಿ. ಮಾನಸಿಕ ನೆಮ್ಮದಿ ಕಾಣುವುದು ಇಂದಿನ ನಿಮ್ಮ ಮುಖ್ಯ ಗುರಿ.
ಧನು
ನಿಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ಆಗಬಹುದು. ಹಣಕ್ಕೆ ಸಂಬಂಽಸಿ ಮುಖ್ಯ ನಿರ್ಧಾರ ತಾಳದಿರಿ. ಪ್ರೀತಿಪಾತ್ರರ ಭೇಟಿ.
ಮಕರ
ಈಗ ನೀವು ಕೈಗೆತ್ತಿಕೊಂಡಿರುವ ವ್ಯವಹಾರ ಸುಗಮವಾಗಿ ಸಾಗಲಿದೆ. ಅನವಶ್ಯ ಚಿಂತೆ ಬಿಡಿ. ವಿಘ್ನ ತರುವವರು ಸೋಲು ಕಾಣುವರು.
ಕುಂಭ
ನಿಮ್ಮ ಪಾಲಿಗೆ ಪೂರಕ ದಿನ. ಈ ದಿನ ಏನು ಯೋಜನೆ ಹಾಕಿಕೊಂಡಿದ್ದೀರೋ ಅದು ಸ-ಲವಾಗಲಿದೆ. ಆರ್ಥಿಕ ಉನ್ನತಿ.
ಮೀನ
ಬದುಕಿನಲ್ಲಿ ಹೊಸತನಕ್ಕೆ ತುಡಿಯುವಿರಿ. ಬದುಕಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!