ಮೇಷ
ದಿನದ ಆರಂಭದಲ್ಲಿ ಸಂಕಷ್ಟ ಎದುರಿಸಿದರೂ ಬಳಿಕ ಎಲ್ಲವೂ ಸರಿಯಾಗುವುದು. ನಿಮ್ಮ ಉದ್ದೇಶ ಈಡೇರುವುದು. ಆರ್ಥಿಕ ಉನ್ನತಿ.
ವೃಷಭ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಹಣದ ನಿಭಾವಣೆಯಲ್ಲಿ ಒತ್ತಡ. ವದಂತಿಯ ಮಾತು ನಂಬಿ ಕೆಡದಿರಿ. ವಿವೇಚನೆಯಿರಲಿ.
ಮಿಥುನ
ಸಂಗಾತಿ ಜತೆ ಉತ್ತಮ ಹೊಂದಾಣಿಕೆ. ಮನೆಯಲ್ಲಿ ಸೌಹಾರ್ದ ಪರಿಸ್ಥಿತಿ. ಆರ್ಥಿಕ ಪ್ರಗತಿ ತೃಪ್ತಿದಾಯಕ. ಭಾವುಕ ಸನ್ನಿವೇಶ ಎದುರಿಸುವಿರಿ.
ಕಟಕ
ಆರ್ಥಿಕ ಪರಿಸ್ಥಿತಿ ಸುಧಾರಿಸಲು ಗಮನ ಕೊಡಿ. ಖರ್ಚು ಕಡಿಮೆ ಮಾಡುವುದೂ ಅದರಲ್ಲಿ ಒಂದು ದಾರಿ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.
ಸಿಂಹ
ಹೆಚ್ಚಿನ ಚಟುವಟಿಕೆ ಇಲ್ಲದ ಉದಾಸ ದಿನ. ಕೆಲವು ವಿಷಯಗಳಲ್ಲಿ ತಾಳ್ಮೆ ಆಗತ್ಯ. ದೈಹಿಕ ಆಲಸ್ಯ, ಮೈಕೈ ನೋವು ಉಂಟಾದೀತು.
ಕನ್ಯಾ
ಇತರರ ಜತೆ ಉತ್ತಮ ಸಂವಹನ ಸಾಹಿಸಲಾಗದೆ ಸಮಸ್ಯೆ. ಮೊದಲು ಮನಸಿನ ಗೊಂದಲ ನಿವಾರಿಸಿ. ನಿಶ್ಚಿತ ನಿರ್ಧಾರ ತಾಳಿ. ಸಹಕಾರ ಲಭ್ಯ.
ತುಲಾ
ನೀವು ಇತ್ತೀಚೆಗೆ ಕೈಗೊಂಡ ಕಾರ್ಯದ ಪರಾಮರ್ಶೆ ನಡೆಸಿ. ನಿಮ್ಮ ಸಮಸ್ಯೆಗೆ ಕಾರಣ ತಿಳಿದು ಸೂಕ್ತ ನಿರ್ಧಾರ ತಾಳಿ. ಕೌಟುಂಬಿಕ ಸಹಕಾರ.
ವೃಶ್ಚಿಕ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ನಿಮ್ಮ ಅಭೀಷ್ಟ ಈಡೇರಿಕೆ. ಖಾಸಗಿ ಬದುಕಿನಲ್ಲೂ ನಿಮ್ಮ ಇಷ್ಟಾರ್ಥ ಪೂರೈಸುವುದು.
ಧನು
ವೃತ್ತಿ ಬದುಕಿನಲ್ಲಿ ಸಫಲತೆ. ನೀವು ಬಯಸಿದ ಉದ್ದೇಶ ಈಡೇರುವುದು. ನಿಮ್ಮ ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯಲು ಗಮನ ಕೊಡಿ.
ಮಕರ
ನೀವು ಬಯಸಿದ ವ್ಯಕ್ತಿ ನಿಮಗೆ ಹತ್ತಿರವಾಗು ತ್ತಾರೆ. ಆತ್ಮೀಯ ಸಂಬಂಧ ಬೆಳೆಯಬಹುದು. ಬಾಕಿ ಇರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ.
ಕುಂಭ
ಆದಾಯ ಹೆಚ್ಚಿಸುವ ಪ್ರಯತ್ನ ಯಶ. ಯೋಜನೆ ಸರಿಯಾಗಿರಲಿ. ಇತರರ ಸಹಕಾರ ಪಡೆಯಿರಿ. ಕೌಟುಂಬಿಕ ವಾಗ್ವಾದಕ್ಕೆ ಆಸ್ಪದ ಕೊಡದಿರಿ.
ಮೀನ
ನಿಮ್ಮಲ್ಲಿ ಇಂದು ಗುಣಾತ್ಮಕ ಬದಲಾವಣೆ ಆಗಲಿದೆ. ಅದರಿಂದ ನಿಮ್ಮ ಆಪ್ತರಿಗೆ ಸಂತೋಷ. ನಿಮ್ಮ ಇಷ್ಟದ ವ್ಯಕ್ತಿಯನ್ನು ಭೇಟಿ ಆಗುವ ಅವಕಾಶ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ