ಮೇಷ
ಆತ್ಮೀಯರ ಜತೆ ಕಾಲಕ್ಷೇಪ. ಅವರ ಸ್ವಭಾವ ಬದಲಿಸಲು ಯತ್ನಿಸುವುದು ವ್ಯರ್ಥ. ನೀವೇ ಹೊಂದಿಕೊಳ್ಳಲು ಪ್ರಯತ್ನಿಸಬೇಕು.
ವೃಷಭ
ವಿವಾಹಿತರ ಮಧ್ಯೆ ಅಭಿಪ್ರಾಯಭೇದ ಸಂಭವ. ತಕ್ಷಣವೇ ಸರಿಪಡಿಸಿಕೊಳ್ಳಿ. ಇತರ ಸಮಸ್ಯೆಯ ಪರಿಹಾರ ವಿಳಂಬ ಮಾಡಬೇಡಿ.
ಮಿಥುನ
ಕೌಟುಂಬಿಕ ಸಾಮರಸ್ಯ. ಮುನಿಸು ನಿವಾರಣೆ. ಆರೋಗ್ಯ ಸಾಧಾರಣ. ವೃತ್ತಿ ಕಾರ್ಯದಲ್ಲಿ ಹೆಚ್ಚಿನ ಬದ್ಧತೆ ಅಗತ್ಯವಾಗಿದೆ.
ಕಟಕ
ಕುಟುಂಬದ ಜತೆ ಹೆಚ್ಚು ಕಾಲ ಕಳೆಯುವ ಉದ್ದೇಶ ನಿಮ್ಮದು. ಆದರೆ ಅದಕ್ಕೂ ವಿಘ್ನ ಬಂದೀತು. ಕಾರ್ಯದೊತ್ತಡ ಹೆಚ್ಚು.ಸಂಯಮ ಮುಖ್ಯ.
ಸಿಂಹ
ದೈಹಿಕ ಆರೋಗ್ಯದ ಜತೆಗೇ ಮಾನಸಿಕ ದೃಢತೆ ಕೂಡಾ ಕಾಪಾಡಿ. ಸಣ್ಣ ಸಮಸ್ಯೆಗೆ ತತ್ತರಿಸಬೇಡಿ. ದೇವರು ನಿಮ್ಮ ನೆರವಿಗಿದ್ದಾನೆ.
ಕನ್ಯಾ
ಋತುಸಂಬಂಽ ಅನಾರೋಗ್ಯ ಸಂಭವ. ಕೆಟ್ಟ ಪರಿಸರದಿಂದ ದೂರವಿರಿ. ಆದಾಯ- ಖರ್ಚಿನ ಮಧ್ಯೆ ಸಮತೋಲನ ಸಾಽಸಿರಿ.
ತುಲಾ
ಕೌಟುಂಬಿಕ ವಿಷಯ ಇತ್ಯರ್ಥಕ್ಕೆ ನಿಮ್ಮ ಸಮಯ ವ್ಯಯವಾಗಲಿದೆ. ಸಹನೆಯಿಂದ ವರ್ತಿಸಿ. ದುಡುಕಿನ ವರ್ತನೆ ಬೇಡ. ವೃತ್ತಿಯಲ್ಲಿ ಉನ್ನತಿ.
ವೃಶ್ಚಿಕ
ಪ್ರಮುಖ ವಿಷಯ ದಲ್ಲಿ ದ್ವಂದ್ವ ಕಾಡಲಿದೆ. ಸೂಕ್ತ ನಿರ್ಧಾರ ತಾಳಲು ಅಸಮರ್ಥರಾಗುವಿರಿ. ಅನುಭವಿಗಳ ಸಲಹೆ ಪಡೆಯುವುದೊಳಿತು.
ಧನು
ವಾಗ್ವಾದ, ಸಮಾಧಾನ, ಬೇಸರ, ಸಂತೋಷ ಎಲ್ಲವನ್ನು ಅನುಭವಿಸುವಿರಿ. ಯಾವುದನ್ನೂ ಅತಿಯಾಗಿ ಮಾಡಬೇಡಿ.
ಮಕರ
ಸಣ್ಣಪುಟ್ಟ ಸಂಘರ್ಷ ಗಳಿಂದ ದೂರವಿರಿ. ಅದು ನಿಮ್ಮ ಮನಶಾಂತಿ ಕೆಡಿಸಬಹುದು. ಕಷ್ಟಗಳಿಗೆ ಕುಗ್ಗದಿರಿ. ದಿಟ್ಟವಾಗಿ ಎದುರಿಸಿರಿ.
ಕುಂಭ
ನಿಮ್ಮ ಆಪ್ತರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡು ಹೋಗದಿರಿ. ದುಂದು ವೆಚ್ಚದಿಂದ ಜೇಬಿಗೆ ಕತ್ತರಿ.
ಮೀನ
ಇತರರನ್ನು ಸಂತೋಷವಾಗಿಡಲು ಯತ್ನಿಸುವಿರಿ. ನಿಮ್ಮ ಹಿತಾಸಕ್ತಿ ಬಲಿಕೊಡಬೇಡಿ. ಆರೋಗ್ಯ ಸಮಸ್ಯೆ ಕಡೆಗಣಿಸಬೇಡಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ