ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ನಿಮ್ಮ ಕಾರ್ಯಶೈಲಿ ಉತ್ತಮಗೊಳ್ಳಲಿದೆ. ಉತ್ಸಾಹಪೂರ್ಣ ದಿನ. ಅದೃಷ್ಟವೂ ನಿಮ್ಮ ಬೆಂಬಲಕ್ಕಿದೆ. ಉದ್ದೇಶ ಸಫಲ. ಆರ್ಥಿಕ ಪರಿಸ್ಥಿತಿ ಉನ್ನತಿ.

ವೃಷಭ
ವೃತ್ತಿಗೆ ಸಂಬಂಧಿಸಿದ ಕೆಲಸ ದಿನವಿಡೀ ನಿಮ್ಮನ್ನು ಬಿಝಿ ಆಗಿಡುತ್ತದೆ. ಉಳಿದ ಕೆಲಸಗಳಿಗೆ ಸಮಯ ಸಾಲದು. ಆರ್ಥಿಕ ಒತ್ತಡ ಕಾಡಲಿದೆ.

ಮಿಥುನ
ತಪ್ಪಭಿಪ್ರಾಯದಿಂದ ಸಂಗಾತಿ ಜತೆಗೆ ವಾಗ್ವಾದ  ಉಂಟಾದೀತು. ಆದಾಯ ನಿಧಾನ. ಖರ್ಚು ಅಧಿಕ. ಇದು ನಿಮ್ಮ ಚಿಂತೆಗೆ ಕಾರಣವಾಗುವುದು.

ಕಟಕ
ನಿಮ್ಮ ನಿರೀಕ್ಷೆಯ ಕಾರ್ಯ ಇಂದು ಈಡೇರದು. ನಿಮ್ಮ ವಿಶ್ವಾಸ ಕುಂದುವುದು. ನಡೆನುಡಿಯಲ್ಲಿ ನಯವಿನಯ ಇರಲಿ.  ಜಗಳ ತಪ್ಪಿಸಿರಿ.

ಸಿಂಹ
ವೃತ್ತಿ ಒತ್ತಡ ಹೆಚ್ಚು.  ಹೆಚ್ಚುವರಿ ಹೊಣೆಗಾರಿಕೆ ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ನೀಡಲಿದೆ. ಆಸ್ತಿ, ವಾಹನ ಖರೀದಿಗೆ ಸೂಕ್ತ ಸಮಯ.

ಕನ್ಯಾ
ಮನಸ್ಸಿಗೆ ತೋಚಿದ್ದನ್ನು ಖರೀದಿಸುವ ಧಾವಂತ ಬಿಟ್ಟು ಖರ್ಚು ಕಡಿಮೆ ಮಾಡಲು ಯೋಚಿಸಿ. ಸುಸ್ಥಿರ ಆರೋಗ್ಯಕ್ಕೆ ಗಮನ ಕೊಡಿ. ಹಿತಮಿತ ಆಹಾರ ಒಳಿತು.

ತುಲಾ
ದಿನದ ಅಂತ್ಯಕ್ಕೆ ಆರೋಗ್ಯದಲ್ಲಿ ಸಮಸ್ಯೆ ಕಂಡೀತು.  ಸೂಕ್ತ ಎಚ್ಚರಿಕೆ ವಹಿಸಿರಿ. ಕೌಟುಂಬಿಕ ಒತ್ತಡ ಹೆಚ್ಚು.  ಸಣ್ಣಪುಟ್ಟ ವಾಗ್ವಾದಕ್ಕೆ ಮನ ಕೆಡಿಸಿಕೊಳ್ಳದಿರಿ.

ವೃಶ್ಚಿಕ
ಹೆಚ್ಚುವರಿ ಹೊಣೆಗಾರಿಕೆ. ದಿನವಿಡೀ ಅದನ್ನು ನಿಭಾಯಿಸುವಲ್ಲಿ ವ್ಯಸ್ತ. ಇತರ ಮನರಂಜನೆಯ ಕಾರ್ಯಕ್ಕೆ ಅವಕಾಶ ಸಿಗದು. ಆರ್ಥಿಕ ಒತ್ತಡ ಹೆಚ್ಚುವುದು.

ಧನು
ಕುಟುಂಬದ ವಿಷಯ ಇಂದು ಆದ್ಯತೆ ಪಡೆಯಲಿದೆ. ಕುಟುಂಬಸ್ಥರ ಹಿತಾಸಕ್ತಿಗೆ ಗಮನ ಕೊಡುವಿರಿ. ಇದರ ಮಧ್ಯೆ ಕರ್ತವ್ಯ ಕಡೆಗಣಿಸಬೇಡಿ.

ಮಕರ
ನಿಮ್ಮ ಉದ್ದೇಶ ಈಡೇರಬೇಕಾದರೆ ಹೆಚ್ಚು ಉತ್ಸಾಹದಿಂದ, ಆಕ್ರಮಣಶೀಲತೆಯಿಂದ  ಕೆಲಸ ಮಾಡಬೇಕು. ಕಠಿಣವಾಗಿ ವರ್ತಿಸಲು ಹಿಂಜರಿಕೆ ಬೇಡ.

ಕುಂಭ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಪೂರಕ ಬೆಳವಣಿಗೆ. ಆರ್ಥಿಕವಾಗಿ ಉನ್ನತಿ. ಭಾವನಾತ್ಮಕ ವಿಷಯ ಮನಶ್ಯಾಂತಿ ಕದಡಲಿದೆ. ದೃಢ ಮನ ಅವಶ್ಯ.

ಮೀನ
ಅಸಾಧ್ಯವಾದುದನ್ನು ಸಾಧಿಸುವಿರಿ. ಸವಾಲನ್ನು ಸಮರ್ಥವಾಗಿ ಎದುರಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಕೌಟುಂಬಿಕ ಸಮಾಧಾನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!