ಮೇಷ
ಸಂಗಾತಿ ಜತೆ ಮುನಿಸು ನಿವಾರಿಸಿ. ಪರಸ್ಪರ ಅರಿತುಕೊಳ್ಳಿ. ಅಲ್ಲಿಗೆ ಎಲ್ಲ ಸಂಘರ್ಷ ಮುಕ್ತಾಯ. ವೃತ್ತಿಯ ಒತ್ತಡ ನಿವಾರಣೆ.
ವೃಷಭ
ಎಲ್ಲೆಡೆ ನಿಯಮ ಪಾಲಿಸಿ. ಗ್ರಹಗತಿ ಪೂರಕವಾಗಿಲ್ಲದ ಕಾರಣ ಸಮಸ್ಯೆಗೆ ಸಿಲುಕುವಿರಿ. ಜಗಳ, ವಾಗ್ವಾದ ನಡೆದೀತು. ಧನವ್ಯಯ.
ಮಿಥುನ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ಸೂಕ್ತ ಯೋಜನೆಯೊಂದಿಗೆ ಹೆಜ್ಜೆಯಿಡಿ. ಇಲ್ಲವಾದರೆ ಬಿಕ್ಕಟ್ಟು ಹೆಚ್ಚಳ. ಅಽಕ ಖರ್ಚು ಚಿಂತೆಗೆ ಕಾರಣ.
ಕಟಕ
ಕೆಲಸ ಪೂರೈಸಲು ಕಠಿಣ ಪರಿಶ್ರಮ ಅಗತ್ಯ. ಮನೆಯವರ ಭಾವನೆ ಅರಿತು ವ್ಯವಹರಿಸಿ. ನಿಮ್ಮದೇ ಅಭಿಪ್ರಾಯ ಹೇರಲು ಹೋಗದಿರಿ.
ಸಿಂಹ
ಸಮಸ್ಯೆ ಉಂಟಾದರೆ ಸಂಗಾತಿಯನ್ನು ದೂರದಿರಿ. ವೃತ್ತಿಯ ಸವಾಲು ಭಾವಿಸಿದಷ್ಟು ಕಠಿಣವೆನಿಸದು. ಖರ್ಚು ನಿಯಂತ್ರಣ, ಸಮಾಧಾನ.
ಕನ್ಯಾ
ವೃತ್ತಿಯಲ್ಲಿ ಬಿಕ್ಕಟ್ಟು. ಅದಕ್ಕೆ ಇತರರನ್ನು ದೂರಬೇಡಿ. ನಿಮ್ಮದೇ ಲೋಪ ಇರಬಹುದು. ಮನೆಯಲ್ಲಿ ಉದ್ವಿಗ್ನತೆ. ಸಮಾಧಾನದಿಂದ ವರ್ತಿಸಿ.
ತುಲಾ
ಪರಸ್ಪರ ಗೌರವ ನೀಡುವುದರಿಂದ ಸಂಬಂಧ ಹಾಳಾಗದಂತೆ ನೋಡಿಕೊಳ್ಳಬಹುದು. ಎಲ್ಲರ ಜತೆ ವ್ಯವಹಾರದಲ್ಲಿ ಇದನ್ನು ನೆನಪಿಡಿ.
ವೃಶ್ಚಿಕ
ಮನೆಯಲ್ಲಿ ಶಾಂತಿ, ಸಮಾಧಾನ. ಹೊಸ ಆರ್ಥಿಕ ಯೋಜನೆಗೆ ಈಗಲೇ ಕೈ ಹಾಕಬೇಡಿ. ಸ್ವಂತ ಉದ್ಯಮಿಗಳಿಗೆ ಉತ್ತಮ ವ್ಯವಹಾರ.
ಧನು
ಎಲ್ಲರ ಮೇಲೆ ಅಸಹನೆ ಕಾರುವುದನ್ನು ನಿಲ್ಲಿಸಿ. ಸಮಸ್ಯೆ ಏನೆಂದು ಸರಿಯಾಗಿ ಪರಾಮರ್ಶಿಸಿ. ಸಂಗಾತಿ ಜತೆಗೆ ವಿನಯದ ವರ್ತನೆಯಿರಲಿ.
ಮಕರ
ಹೊಟ್ಟೆ ಕೆಡುವ ಸಂಭವ. ಹಿತಮಿತ ಆಹಾರ ಸೇವಿಸಿ. ಹಣದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ. ಯೋಚಿಸಿ ವ್ಯಯಿಸಿ.
ಕುಂಭ
ಬದಲಾವಣೆ ಜಗದ ನಿಯಮ. ಅದಕ್ಕೆ ಒಗ್ಗಿಕೊಳ್ಳಿ. ಕ್ಷುಲ್ಲಕ ಸಂಘರ್ಷದಲ್ಲಿ ತೊಡಗದಿರಿ. ಕೌಟುಂಬಿಕ ಒತ್ತಡ ನಿವಾರಣೆ.
ಮೀನ
ಮನೆಯವರ ಕಾಳಜಿಯ ಪರಿಚಯ ನಿಮಗೆ ಆಗಲಿದೆ. ಸಂಗಾತಿ ಜತೆಗಿನ ಭಿನ್ನಮತ ಉದ್ವಿಗ್ನತೆ ಸೃಷ್ಟಿಸೀತು. ಸಹನೆಯಿಂದ ವರ್ತಿಸಿ.



