March 17, 2026
Tuesday, March 17, 2026
spot_img

ದಿನಭವಿಷ್ಯ: ಅನ್ಕೊಂಡಿರೋ ಕೆಲಸ ಖಂಡಿತ ಆಗುತ್ತೆ, ಆಪ್ತರ ಜೊತೆಗಿನ ಮುನಿಸು ಮಾಯ

ಮೇಷ.
ಪ್ರಗತಿಪರ ದಿನ. ಉದ್ದೇಶಿಸಿದ ಕಾರ್ಯ ಪೂರ್ಣ. ಪ್ರೀತಿಯ ವಿಷಯದಲ್ಲಿ ಸಫಲತೆ. ವೃತ್ತಿಯಲ್ಲಿ ಉನ್ನತಿ, ಕೌಟುಂಬಿಕ ಸಾಮರಸ್ಯ.
ವೃಷಭ
ಕೆಲ ದಿನಗಳ ಪ್ರಕ್ಷುಬ್ಧತೆ ಕಳೆದು ಮನಸ್ಸು ಶಾಂತವಾಗಲಿದೆ. ಕಾರ್ಯ ಸಾಫಲ್ಯದಿಂದ ವಿಶ್ವಾಸ ವೃದ್ಧಿ. ಎಲ್ಲ ಸರಿಯಾಗಿ ನಿಭಾಯಿಸುವಿರಿ.
ಮಿಥುನ
ನೆಮ್ಮದಿ ಕಲಕುವ ಬೆಳವಣಿಗೆ. ನಿಮಗೆ ಧೈರ್ಯ ಕಡಿಮೆ, ಅದರಿಂದ ಗುರಿ ಸಾಧನೆ ಕಷ್ಟ. ಸ್ನೇಹಿತರಿಂದ ಹಣ ವಂಚನೆ ನಡೆದೀತು.
ಕಟಕ
ಕೆಲಸದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿ. ಚಂಚಲಚಿತ್ತ ಒಳಿತಲ್ಲ. ಅನಿರೀಕ್ಷಿತ ಧನಲಾಭ. ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ.
ಸಿಂಹ
ನಿರ್ವಹಣೆ ಉತ್ತಮ. ಹಾಗಾಗಿ ಒಳ್ಳೆ ಫಲ ಸಿಗುವುದು. ಆದರೂ ಕೆಲವರ ಅವಕೃಪೆಗೆ ತುತ್ತಾಗುವಿರಿ. ಕೌಟುಂಬಿಕ ಭಿನ್ನಮತ, ಉದ್ವಿಗ್ನತೆ.
ಕನ್ಯಾ
ಉದ್ದೇಶಿಸಿದ ಕಾರ್ಯಕ್ಕೆ ವಿಘ್ನಗಳು. ಪ್ರಯತ್ನ ವಿಫಲ. ಮನಸ್ಸಿಗೆ ನಿರಾಶೆ. ಅತಿಯಾಗಿ ವಿಶ್ವಾಸವಿಟ್ಟವರೇ ಕೇಡು ಬಗೆಯುತ್ತಾರೆ.
ತುಲಾ
ಮಾಡಿದ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಗದಿದ್ದರೂ ನಿರಾಶೆ ಆಗದು. ಹಣದ ಹರಿವು ಸುಗಮ. ಉಳಿತಾಯವೂ ಸಾಧ್ಯ. ಮನಸ್ಸು ನಿರಾಳ.
ವೃಶ್ಚಿಕ
ಒತ್ತಡದ ದಿನ. ಅಧಿಕ ಹೊಣೆಗಾರಿಕೆ. ನಿಮ್ಮನ್ನು ದ್ವೇಷಿಸುವವರಿಂದ ದೂರ ಇರಿ. ಅನವಶ್ಯ ವೆಚ್ಚದ ಮೇಲೆ ನಿಯಂತ್ರಣ ಇಡಿ. ಕೌಟುಂಬಿಕ ಸಹಕಾರ.
ಧನು
ಯಾವುದೇ ವಿಷಯಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ. ಅದು ನಿಮ್ಮ ಘನತೆ ಉಳಿಸುವುದು. ಗುರಿ ಸಾಧನೆ ನಿಮಗೆ ಕಷ್ಟವಾಗಲಾರದು.
ಮಕರ
ಇತ್ತೀಚಿನ ಹಿನ್ನಡೆ ಗಳಿಂದ ನೊಂದಿದ್ದರೆ ಇಂದು ನಿರಾಳತೆ ಸಿಗಲಿದೆ. ನಿಮಗೆ ಪೂರಕವಾದ ಬೆಳವಣಿಗೆ. ಆಪ್ತರ ಜತೆಗಿನ ಮುನಿಸು ಮಾಯ.
ಕುಂಭ
ವಿಶ್ವಾಸ ವೃದ್ಧಿಯ ಬೆಳವಣಿಗೆ. ಮನೆಯಲ್ಲಿ ಅಧಿಕ ಹೊಣೆಯ ಹೊರೆ. ಹಿರಿಯರಿಗೆ ಸಂಧಿ ನೋವಿನಿಂದ ನೆಮ್ಮದಿ ಸಿಗಬಹುದು.
ಮೀನ
ಇತರರ ಜತೆ ಸರಿಯಾಗಿ ವ್ಯವಹರಿಸಿ. ತಪ್ಪು ಕಲ್ಪನೆ ಮೂಡದಂತೆ ಎಚ್ಚರ ವಹಿಸಿ. ಸಣ್ಣ ಸಮಸ್ಯೆ ಕಡೆಗಣಿಸಬೇಡಿ, ಅದೇ ದೊಡ್ಡದಾದೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !