April 30, 2026
Thursday, April 30, 2026
spot_img

ದಿನಭವಿಷ್ಯ: ಇಂದು ನಿಮಗೆ ಯಶಸ್ಸಿನ ದಿನ, ಕೈಗೆತ್ತಿಕೊಂಡ ಕೆಲಸಗಳಲ್ಲಿ ಜಯ ಸಿಗಲಿದೆ

ಮೇಷ
ಇಂದು ನಿಮಗೆ ಯಶಸ್ಸಿನ ದಿನ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಜಯ ಸಿಗಲಿದೆ. ದೀರ್ಘಕಾಲದ ಚಿಂತೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆದರೆ, ನೆರೆಹೊರೆಯವರೊಂದಿಗೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಇರುವುದರಿಂದ ಸಂಯಮದಿಂದಿರಿ.

ವೃಷಭ
ಹೊಸ ಉದ್ಯಮ ಅಥವಾ ಕೆಲಸಗಳಿಗೆ ಅಡೆತಡೆಗಳು ಎದುರಾಗಬಹುದು. ನಂಬಿಕಸ್ಥ ವ್ಯಕ್ತಿಗಳೊಂದಿಗೆ ಮಾತ್ರ ವ್ಯವಹಾರ ನಡೆಸಿ. ಆಪ್ತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು, ಹೊಂದಾಣಿಕೆ ಮಂತ್ರ ಜಪಿಸುವುದು ಉತ್ತಮ. ಅನಗತ್ಯ ಖರ್ಚುಗಳ ಬಗ್ಗೆ ಎಚ್ಚರವಿರಲಿ.

ಮಿಥುನ
ಮನಸ್ಸಿನಲ್ಲಿರುವ ಗೊಂದಲಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ ನೆಮ್ಮದಿ ಸಿಗಲಿದೆ. ಒಂಟಿಯಾಗಿ ಕೊರಗುವ ಬದಲು ಮನಬಿಚ್ಚಿ ಮಾತನಾಡಿ. ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕಟಕ
ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು. ಅವರ ಭಾವನೆಗಳಿಗೂ ಗೌರವ ನೀಡುವುದು ಮುಖ್ಯ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರ್ಥಿಕವಾಗಿ ಸ್ವಲ್ಪ ಬಿಗುವಿನ ವಾತಾವರಣ ಇರಲಿದೆ.

ಸಿಂಹ
ಅನಗತ್ಯ ವಿವಾದಗಳಿಂದ ದೂರವಿರಿ, ಇಲ್ಲದಿದ್ದರೆ ಮಾನಸಿಕ ಶಾಂತಿ ಕಳೆದುಕೊಳ್ಳಬೇಕಾದೀತು. ವೃತ್ತಿಜೀವನದಲ್ಲಿ ಹೊಸ ಮತ್ತು ಉತ್ತಮ ಅವಕಾಶಗಳು ಅರಸಿ ಬರಲಿವೆ. ಸ್ನೇಹ ಸಂಬಂಧದಲ್ಲಿ ಸ್ವಲ್ಪ ಜಾಗರೂಕತೆ ಇರಲಿ.

ಕನ್ಯಾ
ಹೆಚ್ಚುವರಿ ಜವಾಬ್ದಾರಿಗಳು ನಿಮ್ಮ ಮೇಲೆ ಒತ್ತಡ ಹೇರಬಹುದು. ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಿ.

ತುಲಾ
ಸರಿಯಾದ ಸಮಯಕ್ಕೆ ಕೆಲಸ ಮುಗಿಸಲು ಸಾಧ್ಯವಾಗದೆ ಅಸಮಾಧಾನ ಉಂಟಾಗಬಹುದು. ಬೇರೆಯವರಿಂದ ಬರಬೇಕಾದ ಬಾಕಿ ಹಣ ಅಥವಾ ಸಹಾಯವನ್ನು ಕೇಳಿ ಪಡೆದುಕೊಳ್ಳಿ. ಸಮಯ ನಿರ್ವಹಣೆಯತ್ತ ಗಮನಹರಿಸಿ.

ವೃಶ್ಚಿಕ
ಕಾರ್ಯಕ್ಷೇತ್ರದಲ್ಲಿನ ಅಡೆತಡೆಗಳು ನಿವಾರಣೆಯಾಗಲಿವೆ. ಕೆಲಸಗಳು ಸುಸೂತ್ರವಾಗಿ ನಡೆಯುವುದರಿಂದ ವೃತ್ತಿಜೀವನದ ಒತ್ತಡ ಕಡಿಮೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿದೆ.

ಧನು
ಕುಟುಂಬದೊಂದಿಗೆ ಕಾಲ ಕಳೆಯಲು ಇದು ಸೂಕ್ತ ಸಮಯ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕಲಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಗೌರವ ಮತ್ತು ಸಾಧನೆಯ ತೃಪ್ತಿ ಸಿಗಲಿದೆ.

ಮಕರ
ಮನೆಯಲ್ಲಿನ ಭಿನ್ನಾಭಿಪ್ರಾಯಗಳು ಸುಖಾಂತ್ಯಗೊಳ್ಳಲಿವೆ. ಸದಸ್ಯರ ನಡುವೆ ಉತ್ತಮ ಬಾಂಧವ್ಯ ಮೂಡಲಿದೆ. ಗಾಳಿಸುದ್ದಿಗಳಿಗೆ ಕಿವಿಗೊಡದೆ ನಿಮ್ಮ ಗುರಿಯತ್ತ ಗಮನ ಹರಿಸುವುದು ಶ್ರೇಯಸ್ಕರ.

ಕುಂಭ
ಆಸ್ತಿ ಖರೀದಿ ವಿಚಾರದಲ್ಲಿ ಅಂದುಕೊಂಡಷ್ಟು ಯಶಸ್ಸು ಸಿಗದಿರಬಹುದು. ಆದರೆ ಕುಟುಂಬದಲ್ಲಿ ಶಾಂತಿಯುತ ವಾತಾವರಣ ಇರಲಿದೆ. ಮಕ್ಕಳ ಪ್ರಗತಿ ಕಂಡು ಹೆಮ್ಮೆ ಪಡುವಿರಿ.

ಮೀನ
ನಿಗದಿಪಡಿಸಿದ ಸಮಯದೊಳಗೆ ನಿಮ್ಮ ಗುರಿಗಳನ್ನು ತಲುಪುವಿರಿ. ಯಾವುದೇ ದೊಡ್ಡ ವಿಘ್ನಗಳಿಲ್ಲದೆ ಕೆಲಸಗಳು ಪೂರ್ಣಗೊಳ್ಳಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ ಮತ್ತು ವಿದ್ಯಾರ್ಥಿಗಳ ಆಸೆಗಳು ಈಡೇರಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !