February 14, 2026
Saturday, February 14, 2026
spot_img

ದಿನಭವಿಷ್ಯ: ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ಇಂದು ಸಕಾಲ, ವ್ಯವಹಾರದಲ್ಲಿ ಜಯಭೇರಿ!

ಮೇಷ
ಎಂದಿನಂತಲ್ಲದೆ ವಿಭಿನ್ನ ರೀತಿ ದಿನ ಕಳೆಯಲು ಯೋಚನೆ. ಹೊಸತನಕ್ಕೆ  ತುಡಿತ. ನಿಮ್ಮ ಯೋಚನೆ ಜಾರಿಗೆ ತರಲು ಅಡ್ಡಿಗಳು ಬರಲಾರವು.                
ವೃಷಭ
ನಿಮಗೆ ಪೂರಕ ದಿನ. ತ್ವರಿತ ಕಾರ್ಯಸಿದ್ಧಿ. ವೈಯಕ್ತಿಕ ಬದುಕಲ್ಲಿ ಸಂತೋಷ, ನೆಮ್ಮದಿ. ವೃತ್ತಿಯಲ್ಲೂ ಬಯಸಿದ ಗುರಿ ನೆರವೇರುವುದು.        
ಮಿಥುನ
  ನಿಮ್ಮ ವ್ಯವಹಾರದಲ್ಲಿ ದೊಡ್ಡ ಹೆಜ್ಜೆ ಇಡಲು ಸಕಾಲ. ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಕೌಟುಂಬಿಕ ಸಹಕಾರ. ಆರ್ಥಿಕ ಸಬಲತೆ.    
ಕಟಕ
ಶಾಂತ ಮನಸ್ಸು. ಹಾಗಾಗಿ ಸೂಕ್ತ ನಿರ್ಧಾರ ತಾಳಲು ಪೂರಕ ಪರಿಸ್ಥಿತಿ. ಹಣದ ವ್ಯವಹಾರ ಲಾಭ ತರುವುದು.
ಸಿಂಹ
ಮಹತ್ವದ ಕಾರ್ಯ ಮಾಡಬೇಕಾದ ಹೊಣೆ. ಆರಂಭಿಕ ಅಡ್ಡಿ ಬಂದರೂ ಬಳಿಕ ಎಲ್ಲ ಸುಗಮ. ಪ್ರೀತಿಯ ಅಹವಾಲಿಗೆ ಪೂರಕ ಸ್ಪಂದನೆ ಲಭ್ಯ.
ಕನ್ಯಾ
ನಿಮ್ಮ ಬದುಕಲ್ಲಿ ಕೆಲವಾರು ಬೆಳವಣಿಗೆ ಸಂಭವಿಸಬಹುದು. ಅನಿರೀಕ್ಷಿತ ಧನಲಾಭ. ಹಳೆ ಸ್ನೇಹಿತರ ಭೇಟಿ. ಏಕಾಂಗಿಗಳಿಗೆ ಸಂಗಾತಿ ಪ್ರಾಪ್ತಿ.  
ತುಲಾ
ಎಂದಿಗಿಂತ ಕಡಿಮೆ ಕಾರ್ಯದೊತ್ತಡ. ನಿಮ್ಮ ನಿರ್ವಹಣೆಗೆ ಶ್ಲಾಘನೆ. ಆದರೆ ಖಾಸಗಿ ಚಿಂತೆ ಕಾಡಲಿದೆ.  ಆರೋಗ್ಯ ಸಮಸ್ಯೆ ಕಡೆಗಣಿಸಬೇಡಿ.      
ವೃಶ್ಚಿಕ
  ಹಣದ ಕೊರತೆ ಎದುರಿಸುವಿರಿ. ಕೆಲಸ ವಿಳಂಬ. ಒತ್ತಡ ಅಽಕ. ಇದರಿಂದ ದೇಹಾಲಸ್ಯ. ಧ್ಯಾನ, ದೇವರ ಪ್ರಾರ್ಥನೆ ನೆಮ್ಮದಿ ತಂದೀತು.  
ಧನು
  ಕೆಲವು ವಿಷಯ ಚಿಂತೆಗೆ ಕಾರಣವಾಗಲಿದೆ. ಸಣ್ಣ ವಿಷಯವನ್ನೂ ಅಽಕವಾಗಿ  ಚಿಂತಿಸುವಿರಿ. ಗುರಿಯಿಂದ ಲಕ್ಷ್ಯ ವಿಚಲಿತವಾಗದಿರಲಿ.
ಮಕರ
 ನಿಮ್ಮ ಕೆಲಸದಲ್ಲಿ ಸ್ವಂತ ಛಾಪೊತ್ತಲು ಸೂಕ್ತ ಅವಕಾಶ ಸಿಗಲಿದೆ. ಇತರರ ಹಂಗಿಗೆ ಬೀಳದಂತೆ ವರ್ತಿಸಿ. ಕೆಲವರ ಅಸಹಕಾರ.
ಕುಂಭ
 ಇಂದು ಸುಗಮವಾಗಿ ಕಾರ್ಯ ಸಾಗದು. ಪದೇಪದೇ ಅಡ್ಡಿ. ಮುಖ್ಯ ನಿರ್ಧಾರ ತಾಳದಿರಿ. ದಂಪತಿಗಳಿಗೆ ಶುಭ ಬೆಳವಣಿಗೆ. ಧನಪ್ರಾಪ್ತಿ.      
ಮೀನ
ನಿಮ್ಮ ಕಾರ್ಯದ ಮೇಲೆ ನಂಬಿಕೆ ಇರಲಿ. ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನ ಬಿಡಿ. ಮನೆಯಲ್ಲಿ ವಾಗ್ವಾದಕ್ಕೆ ಅವಕಾಶ ಕೊಡದಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !