ಮೇಷ
ತೃಪ್ತಿಕರ ದಿನ. ಕಾರ್ಯಸಿದ್ಧಿ. ಇತರರ ಮೆಚ್ಚುಗೆ ಗಳಿಸುವ ನಿರ್ವಹಣೆ. ಸಾಂಸಾರಿಕ ಸಮಸ್ಯೆ ನಿವಾರಣೆ. ಆರೋಗ್ಯ ಸುಸ್ಥಿರ.
ವೃಷಭ
ಎಲ್ಲ ಒತ್ತಡ ಕಳಚಿ ಪ್ರಕೃತಿ ವೀಕ್ಷಣೆಯ ತುಡಿತ ಕಾಡಬಹುದು. ಎಲ್ಲ ಕೆಲಸ ಮುಗಿಸಿಯೇ ಅದಕ್ಕೆ ಹೊರಡಿ. ಖರ್ಚು ಹೆಚ್ಚಳ ಚಿಂತೆಗೆ ಕಾರಣವಾದೀತು.
ಮಿಥುನ
ವೃತ್ತಿಯಲ್ಲಿ ಎಲ್ಲ ಕೆಲಸ ಸುಗಮ. ಅಡ್ಡಿ ನಿವಾರಣೆ. ವಾಹನ ಖರೀದಿಗೆ ದಿನ ಪ್ರಶಸ್ತ. ಮನೆಯವರ ಒಳಿತಿಗೆ ಸೂಕ್ತ ನಿರ್ಧಾರ ತಾಳಿರಿ.
ಕಟಕ
ಸಿಹಿ-ಕಹಿ ನೆನಪು ಕಾಡಬಹುದು. ಹಳೆಯ ಸ್ನೇಹಿತರ ಭೇಟಿ ಇದಕ್ಕೆ ಕಾರಣವಾದೀತು. ಉದ್ಯೋಗ ಬದಲಾವಣೆ ಸಂಕೇತ ತೋರುತ್ತಿದೆ.
ಸಿಂಹ
ಈ ದಿನ ತೃಪ್ತಿಕರ ಫಲಿತಾಂಶ ನೀಡಲಾರದು. ಹೆಚ್ಚುವರಿ ಪ್ರಯತ್ನ ಅಗತ್ಯ. ಧಾರ್ಮಿಕ ಭಾವ ಸಮಾಧಾನ ತಂದೀತು. ಕಾಲು ನೋವಿನ ಬಾಧೆ.
ಕನ್ಯಾ
ಮನೆ ಅಥವಾ ವೃತ್ತಿ ಯಲ್ಲಿ ಹೆಚ್ಚು ಹೊಣೆ ಇರದೆ ನಿರಾಳತೆ. ಆಪ್ತರ ಜತೆ ಕಾಲ ಕಳೆಯಲು ಬಯಸುವಿರಿ. ಆರೋಗ್ಯದ ಕಡೆ ಕಾಳಜಿಯಿರಲಿ.
ತುಲಾ
ಅದೃಷ್ಟ, ಪ್ರಗತಿ, ಸಂತೋಷ ಇಂದು ನಿಮ್ಮದಾಗಲಿದೆ.ಪ್ರಮುಖ ಕಾರ್ಯ ಸಾಽತ. ಆತ್ಮೀಯರ ಭೇಟಿ ಹರ್ಷ ಹೆಚ್ಚಿಸಲಿದೆ.
ವೃಶ್ಚಿಕ
ಹಣದ ಕೊರತೆ. ಮುಖ್ಯ ಕಾರ್ಯಕ್ಕೆ ಅಡ್ಡಿ ಬಂದೀತು. ಒತ್ತಡದಿಂದ ಆರೋಗ್ಯ ಸಮಸ್ಯೆ. ಸಮಾಧಾನದಿಂದ ವ್ಯವಹರಿಸಿರಿ.
ಧನು
ಖಾಸಗಿ ಬದುಕಲ್ಲಿ ಏರುಪೇರು ಸಂಭವ. ಅನಿರೀಕ್ಷಿತ ಧನಪ್ರಾಪ್ತಿ. ಹಲವಾರು ಕೆಲಸದ ಒತ್ತಡ ಬಾಽಸುವುದು. ಸಂಯಮ ಪಾಲಿಸಿರಿ.
ಮಕರ
ಸಮುದಾಯದ ಹಿತಕ್ಕೆ ಗಮನ ಕೊಡುವಿರಿ. ನಿಮ್ಮ ಕಾರ್ಯಕ್ಕೆ ಶ್ಲಾಘನೆ. ವೈಯಕ್ತಿಕ ಉದ್ದೇಶಕ್ಕೆ ಮಾತ್ರ ಹಿನ್ನಡೆ ಉಂಟಾದೀತು.
ಕುಂಭ
ನಿಮಗೆ ಪೂರಕವಾದ ದಿನ. ಗುರಿ ಸಾಧನೆ. ಬಂಧುಗಳಿಂದ ಧನ ಪ್ರಾಪ್ತಿ ಸಂಭವ. ಆರೋಗ್ಯ ಸ್ಥಿರ. ನವವಿವಾಹಿತರಿಗೆ ಶುಭ ಬೆಳವಣಿಗೆ.
ಮೀನ
ಮನೆಯಲ್ಲಿ ಹೊಣೆಗಾರಿಕೆ ಹೆಚ್ಚಳ. ಆದನ್ನು ಸರಿಯಾಗಿ ನಿಭಾಯಿಸಲು ಶಕ್ತ. ಸಣ್ಣ ಸಂಘರ್ಷಗಳಿಂದ ದೂರವಿರಿ.



