ಮೇಷ
ತೃಪ್ತಿಕರ ದಿನ. ನಿಮ್ಮ ವ್ಯವಹಾರ ಸುಗಮ. ಉದ್ದೇಶವೊಂದು ಈಡೇರಿಕೆ. ಆರೋಗ್ಯ ಪರಿಸ್ಥಿತಿ ಸಮಾಧಾನ ತರುವುದು. ಧನಾಗಮ.
ವೃಷಭ
ಸುಗಮ ದಿನ. ಯಾವುದೇ ಕಷ್ಟಕೋಟಲೆ ಬಾರದು. ಆತ್ಮೀಯ ಬಂಧುಗಳ ಭೇಟಿ.ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ.
ಮಿಥುನ
ಪ್ರತಿಕೂಲ ಸನ್ನಿವೇಶ ಎದುರಾದರೆ ಸ್ಥೈರ್ಯ ಕಳಕೊಳ್ಳದಿರಿ. ಎಲ್ಲ ಸರಿಯಾಗಲಿದೆ. ವಿರೋಧಿಗಳು ನಿಮ್ಮ ದಾರಿಗೆ ಬರುವರು.
ಕಟಕ
ಆರ್ಥಿಕ ಲಾಭ. ವ್ಯವಹಾರದಲ್ಲಿ ಉಂಟಾಗಿದ್ದ ಅಡ್ಡಿ ನಿವಾರಣೆ. ಕುಟುಂಬ ಸದಸ್ಯರ ಜತೆ ಆತ್ಮೀಯ ಒಡನಾಟ. ಸಿಂಹ
ಭಾವನಾತ್ಮಕ ಸನ್ನಿವೇಶ ಎದುರಿಸುವಿರಿ. ದುರ್ಬಲ ಮನಸ್ಸು ನಿಮ್ಮದೆಂದು ತೋರಿಸಿ ಕೊಡಬೇಡಿ. ಆತ್ಮೀಯರ ಸಾಂತ್ವನ.
ಕನ್ಯಾ
ಆಪ್ತರ ಜತೆ ಮೂಡಿದ್ದ ಭಿನ್ನಮತ ಬೇಗ ನಿವಾರಿಸಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಹಣದ ಒತ್ತಡ ಕಾಡಬಹುದು.
ತುಲಾ
ನಿಮ್ಮ ಸುತ್ತಮುತ್ತ ಸಂತೋಷದ ಪರಿಸ್ಥಿತಿ. ಉತ್ಸಾಹಪೂರ್ಣ ದಿನ. ಆಹಾರ ಸೇವನೆಯಲ್ಲಿ ಹಿತಮಿತ ಅನುಸರಿಸಿ. ಆರ್ಥಿಕ ಉನ್ನತಿ.
ವೃಶ್ಚಿಕ
ಭಾವನಾತ್ಮಕ ಏರುಪೇರು ನಿವಾರಣೆ. ಮನಸ್ಸು ತಹಬಂದಿಗೆ ಬರಲಿದೆ. ಆತ್ಮೀಯರ ಸಂಗದಲ್ಲಿ ದಿನ ಕಳೆಯಿರಿ. ಹೂಡಿಕೆಯಿಂದ ಲಾಭ.
ಧನು
ಮಹತ್ವದ ಕೆಲಸ ಸಾಧಿಸಲು ಇಂದು ಸೂಕ್ತ ದಿನ. ಎಲ್ಲವೂ ನಿಮಗೆ ಪೂರಕವಾಗಿ ಸಾಗಲಿದೆ. ಆತ್ಮೀಯರ ಜತೆ ಪ್ರವಾಸದ ಅವಕಾಶವಿದೆ.
ಮಕರ
ಉಲ್ಲಾಸದ ದಿನ. ಜೀವನವೆಷ್ಟು ಸುಂದರ ಎಂಬ ಭಾವ ಮೂಡಬಹುದು. ಅದಕ್ಕೆ ಕಾರಣ ನಿಮ್ಮ ಮನಸ್ಥಿತಿ ಮತ್ತು ಕೆಲ ಸಾಧನೆಗಳು.
ಕುಂಭ
ವ್ಯವಹಾರ ಸುಗಮವಾಗಿ ಸಾಗಲಿದೆ. ವಿಘ್ನಗಳು ಬಾಧಿಸವು. ಹಣದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳದಿರಿ. ಸಾಲ ನೀಡಲು ಹೋಗಬೇಡಿ.
ಮೀನ
ಅತಿಯಾದ ಭಾವುಕತೆ ಒಳಿತಲ್ಲ. ಅದು ನಿಮ್ಮ ನೆಮ್ಮದಿ ಕಸಿಯಬಹುದು. ಸಣ್ಣ ವಿಷಯ ಅತಿಯಾಗಿ ಹಚ್ಚಿಕೊಳ್ಳದಿರಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ