ಮೇಷ
ಸಣ್ಣ ವಿಷಯಕ್ಕೂ ಹೆಚ್ಚು ಗಮನ ಕೊಡಿ. ನಿಮ್ಮ ಮೇಲೆ ಪರಿಣಾಮ ಬೀರಬಹುದು. ಕೆಲಸ ವಿಳಂಬಕ್ಕೆ ಅಸಹನೆ ಬೇಡ. ತಾಳ್ಮೆಯಿಂದ ಕಾಯಿರಿ.
ವೃಷಭ
ನಿಮ್ಮ ಪ್ರಯತ್ನದಿಂದ ಉದ್ದೇಶ ಸಾಧನೆ. ಧನ ಪ್ರಾಪ್ತಿ. ಅನಿರೀಕ್ಷಿತ ಲಾಭ ಖುಷಿ ತರಲಿದೆ. ಕೌಟುಂಬಿಕ ಅಸಹಕಾರ ನಿವಾರಣೆ, ನೆಮ್ಮದಿ.
ಮಿಥುನ
ಎಲ್ಲರ ದೃಷ್ಟಿ ನಿಮ್ಮ ಮೇಲೆ. ನಿರ್ವಹಣೆಯಲ್ಲಿ ಸೋಲಬೇಡಿ. ನಿಮ್ಮ ಸೋಲನ್ನೆ ಕೆಲವರು ಬಯಸುವರು. ಆಪ್ತ ಸಂಬಂಧದಲ್ಲಿ ಒಡಕು.
ಕಟಕ
ಎಂದಿನಂತೆ ಸಹಜ ದಿನವಾಗಿ ಕಂಡರೂ ಬಳಿಕ ಕೆಲವು ಪ್ರಮುಖ ಬೆಳವಣಿಗೆ ಆಗಲಿದೆ. ಅದಕ್ಕೆ ಹೊಂದಿಕೊಳ್ಳಿ. ವಿರೋಧಿಸಿದರೆ ತೊಡಕು.
ಸಿಂಹ
ವೃತ್ತಿಯಲ್ಲಿ ಏನೋ ಅಸಹಜ ಬೆಳವಣಿಗೆ ಸಂಭವಿಸಬಹುದು. ಆ ಬಗ್ಗೆ ಎಚ್ಚರದಿಂದಿರಿ. ಆರೋಗ್ಯ ಕಾಳಜಿ ವಹಿಸಿ. ಕೌಟುಂಬಿಕ ಸಹಕಾರ.
ಕನ್ಯಾ
ಬಂಧುಗಳ ಭೇಟಿ ನಿಮ್ಮ ದಿನದ ಸಂತೋಷ ಹೆಚ್ಚಿಸಲಿದೆ. ಆರ್ಥಿಕ ಬೆಳವಣಿಗೆ. ನಿಮ್ಮ ಕಾರ್ಯದಲ್ಲಿ ತೃಪ್ತಿಕರ ಫಲಿತಾಂಶ ಕಾಣುವಿರಿ.
ತುಲಾ
ಜವಾಬ್ದಾರಿ ಹೆಚ್ಚಳ. ಇಷ್ಟವಿಲ್ಲದಿದ್ದರೂ ಮಾಡಲೇ ಬೇಕು. ಆತ್ಮೀಯರ ಜತೆ ಭಾವನೆ ಹಂಚಿಕೊಳ್ಳಿ. ಹಿರಿಯರಿಗೆ ಆರೋಗ್ಯ ಸಮಸ್ಯೆ.
ವೃಶ್ಚಿಕ
ವೃತ್ತಿಯಲ್ಲಿ ಒತ್ತಡ. ಸಹನೆಯ ವರ್ತನೆ ನಿಮ್ಮ ನೆರವಿಗೆ ಬರಲಿದೆ. ಆರ್ಥಿಕ ಲಾಭ. ಆರೋಗ್ಯ ಸಮಸ್ಯೆ ಕಾಡಬಹುದು. ಮಿತಾಹಾರ ಒಳಿತು.
ಧನು
ಒತ್ತಡ ತುಂಬಿದ ದಿನ. ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕು. ಆಪ್ತರ ಜತೆಗಿನ ಭಿನ್ನಮತ ನಿವಾರಿಸಿಕೊಳ್ಳಿ. ದೈಹಿಕ ಆಲಸ್ಯ ಕಾಡಬಹುದು.
ಮಕರ
ನಿಮ್ಮ ಪಾಲಿಗೆ ಉತ್ತಮ ದಿನ. ಆರ್ಥಿಕ ಅಭಿವೃದ್ಧಿ. ಮಹತ್ವದ ಉದ್ದೇಶ ಸಾಧಿಸುವಿರಿ. ವಿರೋಧಿಗಳು ಮೌನ. ಆಪ್ತರಿಂದ ಸಹಕಾರ.
ಕುಂಭ
ಎಲ್ಲವೂ ಕೃತಕ, ಭಾವನೆಗೆ ಬೆಲೆಯಿಲ್ಲ ಎಂಬಂತಹ ಅನಿಸಿಕೆ ಉಂಟಾದೀತು. ವಾಸ್ತವದ ಜತೆ ಹೊಂದಿಕೊಂಡು ಬಾಳುವುದೇ ಒಳಿತು.
ಮೀನ
ಸವಾಲಿನ ದಿನ. ಏಳು-ಬೀಳು ಎರಡನ್ನೂ ಎದುರಿಸುವಿರಿ. ಆಪ್ತರ ಜತೆ ಭಾವನೆ ಹಂಚಿಕೊಂಡು ಸಮಾಧಾನ ಪಡೆಯುವಿರಿ.



