ದಿನಭವಿಷ್ಯ: ಮಂಗಳವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ತಿಳಿಯಿರಿ

ಮೇಷ
ಕೆಲ ವಿಷಯಗಳನ್ನು ನೀವೇ ದೊಡ್ಡದಾಗಿಸಿ ಸಮಸ್ಯೆ ಸೃಷ್ಟಿ ಮಾಡಿಕೊಳ್ಳುತ್ತೀರಿ. ಬಾಕಿ ಉಳಿದ ಕಾರ್ಯ ಮುಗಿಸಲು ಒತ್ತಡ ಹೆಚ್ಚುವುದು.

ವೃಷಭ
ಬಿಕ್ಕಟ್ಟು ಒದಗಿದಾಗ ಅಧೀರರಾಗಬೇಡಿ. ಶಾಂತವಾಗಿ ಯೋಚಿಸಿ ಪರಿಹಾರದ ದಾರಿ ಹುಡುಕಿ. ಗುಣಾತ್ಮಕ ಚಿಂತನೆ ಅಗತ್ಯ. ನಿರಾಶಾವಾದ ಬಿಡಿ.

ಮಿಥುನ
ಸಾಲ ಪಡೆದಿದ್ದರೆ ಅದನ್ನು ತೀರಿಸುವ  ಅವಕಾಶ ಸಿಗಲಿದೆ. ಉದ್ಯೋಗ ಬದಲಾವಣೆ ಬಯಸುವವರಿಗೆ ಪೂರಕ ಬೆಳವಣಿಗೆ. ಕೌಟುಂಬಿಕ ಸಮಾಧಾನ.

ಕಟಕ
ಕೆಲವು ಅಪ್ರಿಯ ಪ್ರಸಂಗಗಳಿಂದ ನಿಮ್ಮ ವಿಶ್ವಾಸ ಕುಂದುವುದು. ಆದರೆ ಅದು ಅನವಶ್ಯ. ಅಂತಿಮವಾಗಿ ನಿಮಗೆ ಒಳಿತೇ ಆಗುವ ಬೆಳವಣಿಗೆ.

ಸಿಂಹ
ಹದಗೆಟ್ಟ ಸಂಬಂಧ ಸುಧಾರಿಸುವುದು. ಅದಕ್ಕೆ ನಿಮ್ಮಿಂದ ಹೊಂದಾಣಿಕೆಯ ನೀತಿಯೂ ಅವಶ್ಯ. ಬಡ್ತಿಗೆ ಕಾಯುತ್ತಿದ್ದರೆ ಶುಭ ಸುದ್ದಿಯಿದೆ.

ಕನ್ಯಾ
ವೃತ್ತಿ ವ್ಯವಹಾರ,  ಹಣದ ವಿಚಾರ ಎಲ್ಲದರಲ್ಲೂ ನಿಮಗಿಂದು ಒಳಿತಿನ ಬೆಳವಣಿಗೆ. ಒತ್ತಡ ನಿವಾರಣೆ. ಇದರಿಂದ ಆರೋಗ್ಯವೂ ಸುಧಾರಣೆ ಕಾಣಲಿದೆ.

ತುಲಾ
ನಿಮ್ಮ ಹೊಣೆಯನ್ನು ಸಮಾಧಾನದಿಂದ ಪೂರೈಸಿ. ಅನವಶ್ಯ ಒತ್ತಡ ನೀವೇ ತಂದುಕೊಳ್ಳದಿರಿ. ಸಂಗಾತಿಯಿಂದ ನಿಮಗೆ ಉತ್ತಮ ಸಹಕಾರ, ಬೆಂಬಲ ಸಿಗಲಿದೆ.

ವೃಶ್ಚಿಕ
ವೃತ್ತಿಯಲ್ಲಿ ನಿಮ್ಮ ಕೋಪತಾಪ ನಿಯಂತ್ರಿಸಿ. ಅದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಪ್ರೀತಿಪಾತ್ರರ ಜತೆ ಭಾವನಾತ್ಮಕ ಸನ್ನಿವೇಶ ಉಂಟಾದೀತು.

ಧನು
ಕೆಲಸದ ಒತ್ತಡ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಆತುರದ ತೀರ್ಮಾನ ಕೆಟ್ಟ ಫಲ ನೀಡೀತು. ಸಮಾಧಾನಚಿತ್ತ ಒಳ್ಳೆಯದು.

ಮಕರ
ಬಿಡುವಿಲ್ಲದ ದಿನ. ನಿಮ್ಮ ವಿರೋಧಿಗಳನ್ನು  ಬಲವಂತವಾಗಿ ನಿಮ್ಮಡೆಗೆ ಒಲಿಸಿಕೊಳ್ಳುವ ಪ್ರಯತ್ನ ಬಿಡಿ. ಅವರನ್ನು ಬದಲಿಸಲು ಅಸಾಧ್ಯ. ನಿಮ್ಮ ದಾರಿ ನಿಮಗೆ.

ಕುಂಭ
ಕುಟುಂಬ ಸದಸ್ಯರ ಜತೆ ಸಂತೋಷದಿಂದ ಕಳೆಯುವ ದಿನ. ವೃತ್ತಿಯ ಒತ್ತಡ ಇಂದು ಬಾಧಿಸದು.  ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿರಿ.

ಮೀನ
ಕುಟುಂಬ ಸದಸ್ಯರ ಭಾವನೆ, ಬೇಡಿಕೆಗೆ ಗಮನ ಕೊಡಿ. ಅವರನ್ನು ಕಡೆಗಣಿಸಿದ ಅನಿಸಿಕೆ ಮೂಡದಿರಲಿ. ಸಣ್ಣ ವಿವಾದವನ್ನು ಅತಿಯಾಗಿ ಹಿಗ್ಗಿಸಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!