ಮೇಷ
ವೃತ್ತಿಯಲ್ಲಿ ಹೊಸ ಬೆಳವಣಿಗೆ. ಅದು ನಿಮಗೆ ಪ್ರತಿಕೂಲವೂ ಆದೀತು. ಎಚ್ಚರದಿಂದ ಕಾರ್ಯ ನಿರ್ವಹಿಸಿ. ಕೆಲವರ ಅಸಹಕಾರ ಹೆಚ್ಚಲಿದೆ.
ವೃಷಭ
ಸಮಸ್ಯೆ ಪರಿಹಾರ. ಚಿಂತೆ ಮಾಯ. ಇತರರ ಭಾವನೆ ಅರ್ಥ ಮಾಡಿಕೊಂಡು ವ್ಯವಹರಿಸಿದರೆ ಎಲ್ಲವೂ ಸುಲಲಿತವಾಗಲಿದೆ.
ಮಿಥುನ
ಮನೆಯಲ್ಲೂ ವೃತ್ತಿಯಲ್ಲೂ ಹೊಣೆ ಹೆಚ್ಚುವುದು. ಹಣಕ್ಕೆ ಸಂಬಂಧಿಸಿದ ಚಿಂತೆ ಪರಿಹಾರ. ಕೌಟುಂಬಿಕ ಸಾಮರಸ್ಯ ಹೆಚ್ಚಳ.
ಕಟಕ
ಪ್ರಮುಖ ಕಾರ್ಯ ಸಫಲವಾಗಿ ಮುಗಿದು ಸಮಾಧಾನ. ಬಯಸಿದ ಉದ್ದೇಶ ಈಡೇರಿಕೆ. ಆಪ್ತರ ಅಸಮಾಧಾನ ತಣಿಸುವ ಯತ್ನ ಮಾಡಿ.
ಸಿಂಹ
ವೃತ್ತಿಯಲ್ಲಿ ಹಾಗೂ ಖಾಸಗಿ ಬದುಕಲ್ಲಿ ಹೊಸ ಬೆಳವಣಿಗೆ. ಸಮಾನವಾಗಿ ನಿಭಾಯಿಸಲು ಗಮನ ಕೊಡಿ.ಯಾವುದನ್ನೂ ಕಡೆಗಣಿಸಬೇಡಿ.
ಕನ್ಯಾ
ಋಣಾತ್ಮಕ ಚಿಂತನೆ ತ್ಯಜಿಸಿ. ಇಲ್ಲದ ಆತಂಕ ಮನದಲ್ಲಿ ತುಂಬಿಕೊಳ್ಳದಿರಿ. ಕೆಲಸದಲ್ಲಿ ನಿಮ್ಮ ಹೊಣೆಗಾರಿಕೆ ಸಮರ್ಥವಾಗಿ ನಿರ್ವಹಿಸಿ.
ತುಲಾ
ಅಗತ್ಯಕ್ಕೆ ತಕ್ಕಂತೆ ಕ್ಷಿಪ್ರ ನಿರ್ಧಾರ ತಾಳುವಲ್ಲಿ ಸಫಲರಾಗುವಿರಿ. ಕೆಲಸ ಸಲೀಸು. ಆರ್ಥಿಕ ಉನ್ನತಿ. ಕೌಟುಂಬಿಕ ಭಿನ್ನಾಭಿಪ್ರಾಯ ನಿವಾರಣೆ.
ವೃಶ್ಚಿಕ
ಕಾರ್ಯಗಳೆಲ್ಲ ಸಂಪೂರ್ಣ. ಆದರೂ ನಿಮಗೆ ತೃಪ್ತಿಯಿಲ್ಲ. ಇನ್ನೂ ಸಾಧನೆ ಮಾಡುವ ಹೆಬ್ಬಯಕೆ. ಬಂಧುಗಳಿಂದ ಶ್ಲಾಘನೆ, ಸಹಕಾರ.
ಧನು
ಏರುಪೇರಿನ ದಿನ. ಹೊಣೆಗಾರಿಕೆ ಹೆಚ್ಚಳ. ಅದನ್ನು ಸರಿಯಾಗಿ ನಿಭಾಯಿಸಲು ಸೋಲುವಿರಿ. ಆದರೆ ಕೌಟುಂಬಿಕ ಸಮಾಧಾನ.
ಮಕರ
ಬಾಕಿ ಉಳಿದಿರುವ ಕಾರ್ಯ ಮುಗಿಸಿರಿ. ಬಳಿಕ ನಿರಾಳವಾಗಿರಬಹುದು. ಉದ್ಯೋಗದಲ್ಲಿ ನಿಮಗೆ ಪೂರಕ ಬೆಳವಣಿಗೆ. ಸಾಂಸಾರಿಕ ಸಮಾಧಾನ.
ಕುಂಭ
ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಅದು ನಿಮಗೆ ಪ್ರತಿಕೂಲ ಆದೀತು. ಮನೆಯ ಆವಶ್ಯಕತೆಗೆ ತುರ್ತು ಗಮನ ಕೊಡಿ.
ಮೀನ
ಸಣ್ಣ ವಿಷಯಕ್ಕೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವಿರಿ. ಕೆಲ ವಿಷಯಗಳಲ್ಲಿ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಿ. ಕೌಟುಂಬಿಕ ಸಮಸ್ಯೆ ಪರಿಹಾರ.