June 27, 2026
Saturday, June 27, 2026
spot_img

ದಿನಭವಿಷ್ಯ: ಯಾವುದೇ ವಿಘ್ನವಿಲ್ಲದೆ ಅಂದುಕೊಂಡ ಗುರಿ ತಲುಪುವಿರಿ, ಕುಟುಂಬದಲ್ಲಿ ತೃಪ್ತಿ ಸಿಗಲಿದೆ

ಮೇಷ
ಪ್ರಮುಖ ಕಾರ್ಯ ಯೋಜಿಸಿದ್ದರೆ ಇಂದು ಪೂರ್ಣ ಯಶ ಸಿಗದು. ಕೌಟುಂಬಿಕ ಪರಿಸರ ಶಾಂತ. ಮಕ್ಕಳ ಸಾಧನೆಯಿಂದ ತೃಪ್ತಿ.
ವೃಷಭ
ನಿಶ್ಚಿತ ಸಮಯದಲ್ಲಿ ಕೆಲಸ ಪೂರೈಸಲು ವಿಫಲ. ಇದರಿಂದ ಒತ್ತಡ ಹೆಚ್ಚಳ. ವಿದ್ಯಾರ್ಥಿಗಳಿಗೆ ಈ ದಿನ ಕಠಿಣವಾದೀತು. ಹೆಚ್ಚು ಪರಿಶ್ರಮ ಅಗತ್ಯ.
ಮಿಥುನ
ಕಾಲಮಿತಿಯಲ್ಲಿ ನಿಮ್ಮ ಗುರಿ ಸಾಧಿಸುವಿರಿ. ಯಾವುದೇ ವಿಘ್ನ ಬಾಧಿಸದು. ಕೌಟುಂಬಿಕ ಸಂತೃಪ್ತಿ. ವಿದ್ಯಾರ್ಥಿಗಳ ಆಶಯ ಪೂರೈಸಲಿದೆ.
ಕಟಕ
ಮನೆಯವರ ಜತೆ ಉತ್ತಮ ಹೊಂದಾಣಿಕೆ. ಭಿನ್ನಮತ ನಿವಾರಣೆ. ವದಂತಿಗಳಿಗೆ ಹೆಚ್ಚು ಕಿವಿಗೊಡಬೇಡಿ. ನಿಮ್ಮ ಕೆಲಸ ಮಾಡುತ್ತಿರಿ.
ಸಿಂಹ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ. ವೃತ್ತಿಯಲ್ಲಿ ಸಾಧನೆಯ ತೃಪ್ತಿ. ಕಾರ್ಯ ಸಿದ್ಧಿ.
ಕನ್ಯಾ
ಹೆಚ್ಚುವರಿ ಹೊಣೆಗಾರಿಕೆ ಒತ್ತಡ ಸೃಷ್ಟಿಸಲಿದೆ. ದುಡುಕಿನ ನಿರ್ಧಾರ ತಾಳದಿರಿ. ಖರೀದಿಯ ಉತ್ಸಾಹಕ್ಕೆ ಕಡಿವಾಣ ಹಾಕಿ.
ತುಲಾ
ಅಧ್ಯಾತ್ಮದ ಆಸಕ್ತಿ ಉಂಟಾದೀತು. ಸಮಸ್ಯೆ ಮುಗಿಯುತ್ತಿಲ್ಲ ಎಂಬ ಭಾವವೇ ಅದಕ್ಕೆ ಕಾರಣ. ಸ್ನೇಹದಲ್ಲಿ ಬಿರುಕು. ಆರ್ಥಿಕ ಒತ್ತಡ ಹೆಚ್ಚು.
ವೃಶ್ಚಿಕ
ಅಡ್ಡಿ ನಿವಾರಣೆ. ವಿಳಂಬವಿಲ್ಲದೆ ಕಾರ್ಯ ಎಸಗುವಿರಿ. ಆರ್ಥಿಕ ಸ್ಥಿರತೆ. ವೃತ್ತಿ ಒತ್ತಡ ನಿವಾರಣೆಯಾಗಲಿದೆ.ಬಂಧುತ್ವ ವೃದ್ಧಿ.
ಧನು
ನಿಮ್ಮ ಭಾವನೆ, ಮನಸ್ಥಿತಿ ಆಪ್ತರ ಜತೆ ಹಂಚಿಕೊಳ್ಳಿ. ಇದರಿಂದ ಮನಸ್ಸು ಹಗುರ. ಸುಮ್ಮನೇ ಕೊರಗುತ್ತಾ ಕೂರಬೇಡಿ.
ಮಕರ
ಸಾಧನೆಯ ದಿನ. ವ್ಯವಹಾರದಲ್ಲಿ ಸ-ಲತೆ. ಕೆಲಕಾಲದಿಂದ ಕಾಡುತ್ತಿದ್ದ ಚಿಂತೆ ಪರಿಹಾರ. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.
ಕುಂಭ
ಹೊಸ ಪಾಲುದಾರಿಕೆ ಲಾಭ ತಂದೀತು. ಆದರೆ ನಂಬಿಗಸ್ಥರ ಜತೆ ವ್ಯವಹಾರ ನಡೆಸಿ. ಸಂಬಂಧದಲ್ಲಿ ಉದ್ವಿಗ್ನತೆ. ಹೊಂದಾಣಿಕೆ ಮುಖ್ಯ.
ಮೀನ
ಸಂಗಾತಿ ಜತೆ ಸಂಘರ್ಷ ನಡೆದೀತು. ಅವರ ದೃಷ್ಟಿಕೋನ ಕೂಡಾ ಪರಾಮರ್ಶಿಸಿ. ಸ್ನೇಹಿತರ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಒತ್ತಡ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !