January14, 2026
Wednesday, January 14, 2026
spot_img

ದಿನಭವಿಷ್ಯ: ಇಂದು ಕಷ್ಟವಾದರೂ ಸಂತೋಷದಿಂದ ಕೆಲಸ ಮಾಡುವಿರಿ, ಕಾರ್ಯದಲ್ಲಿ ಸಿದ್ದಿ

ಮೇಷ
ಸಮಸ್ಯೆಯಿಂದ  ಕಂಗಾಲಾಗಬೇಡಿ. ಅದರ ಪರಿಹಾರವನ್ನೂ ನಿಮ್ಮ  ಗ್ರಹಗತಿ ಸೂಚಿಸುತ್ತಿದೆ. ಪರಿಹಾರಕ್ಕೆ ಪೂರಕ ಪರಿಸ್ಥಿತಿ ಸೃಷ್ಟಿಸಿಕೊಳ್ಳಿ.
ವೃಷಭ
ಸಾಂಸಾರಿಕ  ಸಮಸ್ಯೆ ಪರಿಹಾರ. ನಿಮ್ಮ ಸಾಧನೆ ಇತರರನ್ನು ಪ್ರೇರೇಪಿಸಲಿದೆ. ಕಠಿಣ ಕಾರ್ಯ ಸುಗಮವಾಗಿ ಮುಗಿಯುವುದು.
ಮಿಥುನ
ಮನೆಯಲ್ಲಿ ಉತ್ತಮ  ಹೊಂದಾಣಿಕೆ.   ಸೌಹಾರ್ದದಾಯಕ. ಆದರೆ ವೃತ್ತಿಯಲ್ಲಿ ತೊಡಕು ಎದುರಿಸುವಿರಿ. ಅಶಾಂತ ಮನಸ್ಸು.
ಕಟಕ
ನಿಮ್ಮ ಕಾರ್ಯದಲ್ಲಿ ಏರುಪೇರು. ಆದರೆ ಅಂತಿಮವಾಗಿ ಎಲ್ಲವೂ ಸುಸೂತ್ರವಾಗುವುದು. ಧನಪ್ರಾಪ್ತಿ. ಬಂಧುಗಳ ಸಹಕಾರ.
ಸಿಂಹ
ಆತ್ಮೀಯರ ಜತೆ ಸಂಬಂಧ ಹಳಸಿದ್ದರೆ ಅದನ್ನು ಸರಿಪಡಿಸಲು ನೀವೇ ಮುಂದಾಗಿ. ವಿರಸ ಮುಂದುವರಿಸದಿರಿ. ವೃತ್ತಿಯಲ್ಲಿ ಒತ್ತಡ ಹೆಚ್ಚು.
ಕನ್ಯಾ
ನಿಮಗಿಂದು ನಿರಾಳ ದಿನ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ. ಬಂಧುಗಳಿಂದ ನಿಮಗೆ ಹಿತವೆನಿಸುವ ಸುದ್ದಿ.  ಧನಪ್ರಾಪ್ತಿ ಸಂಭವ.
ತುಲಾ
ನೀವು ಬಯಸಿದ್ದೆಲ್ಲ ನೆರವೇರುವುದು. ಆದರೂ ಕೊರಗು ಏಕೆ? ಯಾವುದೋ ಚಿಂತೆ ಮನವನ್ನು ಕಾಡುವುದು. ಧ್ಯಾನ ಸಹಕಾರಿ,
ವೃಶ್ಚಿಕ
ವ್ಯವಹಾರಕ್ಕೆ  ಸಂಬಂಽಸಿ ಇಂದು ನಿಮಗೆ ಪೂರಕ ಪರಿಸ್ಥಿತಿಯಿಲ್ಲ.  ಮನೆಯಲ್ಲಿ  ಸಣ್ಣ ವಿಷಯಕ್ಕೆ ಮನಸ್ತಾಪ.  ಧನು
ನಿಮ್ಮ ಉದ್ದೇಶ ಈಡೇರುವ ತನಕ ನಿಮ್ಮ ಪ್ರಯತ್ನ ನಿಲ್ಲಿಸದಿರಿ. ಹಿನ್ನಡೆಗಳಿಗೆ ಅಂಜದಿರಿ. ದಿನದಂತ್ಯಕ್ಕೆ ನಿಮಗೆ ಸಮಾಧಾನಕರ ಫಲ.
ಮಕರ
ನಿಮ್ಮ ಪಾಲಿಗೆ ಮಹತ್ವದ ಬೆಳವಣಿಗೆ. ತುರ್ತು ನಿರ್ಧಾರ ತಾಳಬೇಕಾದೀತು. ನಿಮ್ಮ ನಿರ್ಧಾರ ಯುಕ್ತ ಫಲವನ್ನೆ ನೀಡುವುದು.
ಕುಂಭ
ಒತ್ತಡಪೂರ್ಣ ದಿನ. ಕೆಲವಾರು ಕಾರ್ಯ ಒಮ್ಮೆಗೇ ಮುಗಿಸಬೇಕಾದ ಒತ್ತಡ. ದೈಹಿಕ ಅನಾರೋಗ್ಯ, ಮೈ ನೋವು ಬಾಽಸಬಹುದು.
ಮೀನ
ಖಾಸಗಿ ಬದುಕಿನಲ್ಲಿ ನಿಮಗೆ  ಪೂರಕವಾದ ಬೆಳವಣಿಗೆ. ಭವಿಷ್ಯದ ಕುರಿತು ಯೋಚಿಸಿ ಚಿಂತಿಸುವುದನ್ನು ಬಿಡಿ. ಧನವ್ಯಯ ಹೆಚ್ಚು.

Most Read

error: Content is protected !!