ದಿನಭವಿಷ್ಯ: ಕಷ್ಟ ಏನೇ ಬರಲಿ ಇಂದು ಮನಸ್ಸನ್ನು ಕಲ್ಲಾಗಿಸಿ!

ಮೇಷ
ನಿಮ್ಮ ಪ್ರಗತಿಗೆ ಇರುವ ಅಡ್ಡಿಗಳನ್ನು ನಿವಾರಿಸಲು  ಯೋಜನೆ ಹಾಕಿ. ಅವನ್ನು ಅದರಷ್ಟಕ್ಕೇ ಬಿಡದಿರಿ. ಪ್ರಯತ್ನವಿಲ್ಲದೆ ಫಲವಿಲ್ಲ ಎಂದು ಅರಿಯಿರಿ.

ವೃಷಭ
ವ್ಯವಹಾರದಲ್ಲಿ ಲಾಭ. ವೃತ್ತಿಯಲ್ಲಿನ ಚಿಂತೆ ಪರಿಹಾರ. ಆತ್ಮೀಯ ಸಂಬಂಧ ಗಟ್ಟಿಯಾಗುವುದು. ಸಾಮಾಜಿಕ ಚಟುವಟಿಕೆ ಹೆಚ್ಚುವುದು.

ಮಿಥುನ
ಅಶಾಂತ ಮನಸ್ಸು. ಕೆಲಸದಲ್ಲಿ ಏಕಾಗ್ರಚಿತ್ತ ಕಷ್ಟವಾದೀತು. ಸಣ್ಣ ವಿಷಯಕ್ಕೂ ರೇಗುವುದನ್ನು ಬಿಟ್ಟುಬಿಡಿ. ಕೌಟುಂಬಿಕ ಸಾಂತ್ವನ.

ಕಟಕ
ನಿಮ್ಮ ಕಾರ್ಯ ನಿರ್ವಹಣೆಗಾಗಿ ವೇತನ ಹೆಚ್ಚಳವಾದೀತು. ವೃತ್ತಿಯ ಒತ್ತಡ ಹೆಚ್ಚಿದರೂ  ಅದು ನಿಮಗೆ ತೃಪ್ತಿಯನ್ನೂ ನೀಡುವುದು.

ಸಿಂಹ
ಭಾವನಾತ್ಮಕವಾಗಿ ಇಂದು ದೃಢತೆ ಪ್ರದರ್ಶಿಸುವಿರಿ. ಯಾವುದೇ ಪರಿಸ್ಥಿತಿ ಎದುರಿಸಲು ಶಕ್ತರಾಗುವಿರಿ. ಸಂಬಂಧ ದಲ್ಲಿ ಏರುಪೇರು.

ಕನ್ಯಾ
ನಿಮ್ಮ ಸುತ್ತಲಿನ ಪರಿಸರ ನಿಮ್ಮ ಮನಸ್ಸಿನ ಮೇಲೂ ಪರಿಣಾಮ ಬೀರಲಿದೆ. ಕೆಲವು ಬದಲಾವಣೆ ನಿಮಗೆ ಅಸಹನೀಯ ಎನಿಸೀತು. ಅದಕ್ಕೆ ಹೊಂದಿಕೊಳ್ಳಿರಿ.

ತುಲಾ
ಸಮಸ್ಯೆಯನ್ನು ದಿಟ್ಟವಾಗಿ ಎದುರಿಸಿ. ಅದೃಷ್ಟವನ್ನೆ ನಂಬಿ ಕೂರಬೇಡಿ. ಮನಸ್ಸಿಗೆ ನೋವು ತರುವ ವ್ಯಕ್ತಿಗಳನ್ನು ಕಡೆಗಣಿಸಿದರೆ ಕ್ಷೇಮ.

ವೃಶ್ಚಿಕ
ಹಳೆಯ ವಿಷಯ ನಿಮ್ಮ ಮನಸ್ಸು ಕದಡಲು ಅವಕಾಶ ಕೊಡದಿರಿ. ಅವನ್ನು ಅಲ್ಲಿಗೇ ಮುಚ್ಚಿಬಿಡಿ. ವೃತ್ತಿಯಲ್ಲಿ ಆತ್ಮವಿಶ್ವಾಸದಿಂದ ಕಾರ್ಯವೆಸಗುವಿರಿ.

ಧನು
ನಿಮ್ಮ ಕಾರ್ಯವೈಖರಿ ಇತರರ ಗಮನ ಸೆಳೆಯುವುದು. ಸಾಂಸಾರಿಕ ಪರಿಹಾರ ನಿವಾರಣೆಯಾಗಿ ನಿರಾಳತೆ. ಆರ್ಥಿಕ ಸ್ಥಿತಿ ಸುಧಾರಣೆ.

ಮಕರ
ಆತ್ಮೀಯ ಸಂಬಂಧದಲ್ಲಿ ಭಿನ್ನಮತ  ಉಂಟಾದೀತು. ಅದನ್ನು ಕೌಶಲದಿಂದ ನಿಭಾಯಿಸಿ. ತಪ್ಪು ಕಲ್ಪನೆ ಮೊದಲು ನಿವಾರಿಸಿರಿ. ಆರ್ಥಿಕ ವ್ಯಯ.

ಕುಂಭ
ಕೆಲವು ಖಾಸಗಿ ವಿಚಾರಗಳು ನಿಮ್ಮನ್ನು ಖಿನ್ನತೆಗೆ ತಳ್ಳುತ್ತವೆ. ಬಳಿಕ ಪ್ರೀತಿಪಾತ್ರರ ಸಂಗದಲ್ಲಿ ಉಲ್ಲಾಸ ಪಡೆಯುವಿರಿ. ಆರೋಗ್ಯ ಪರಿಸ್ಥಿತಿ ಸುಸ್ಥಿರ .

ಮೀನ
ವೃತ್ತಿಯಲ್ಲೂ  ಖಾಸಗಿ ಬದುಕಲ್ಲೂ ಸವಾಲು ಎದುರಿಸುವಿರಿ. ಅದನ್ನು ನಿಭಾಯಿಸಲು ನಿಮಗೆ ಸೂಕ್ತ ಸಹಕಾರ ಒದಗುವುದು. ದಿನದಂತ್ಯಕ್ಕೆ ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!