August 21, 2026
Friday, August 21, 2026
spot_img

ದಿನಭವಿಷ್ಯ: ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಗುವ ಕಾಲ, ಅನಿರೀಕ್ಷಿತ ಧನಲಾಭ

ಮೇಷ
ಪರಿಶ್ರಮದ ಫಲ ನಿಮಗೆ ಸಿಗಲಿದೆ. ಮಾಡಿದ ಕೆಲಸ ವ್ಯರ್ಥವಾಯಿತು ಎಂಬ ಖೇದ ಬೇಡ. ಹೊಸ ವ್ಯವಹಾರಕ್ಕೆ ಈಗಲೆ ಕೈ ಹಾಕಬೇಡಿ.
ವೃಷಭ
ಬಹುಕಾಲದಿಂದ ಬಾಕಿ ಉಳಿದ ಯೋಜನೆ ಫಲ ಕಾಣಲಿದೆ. ಹಣ ಗಳಿಕೆಗೆ ಸುಲಭ ದಾರಿ ಹಿಡಿಯಬೇಡಿ. ಆಪ್ತರ ಸಂಗದಲ್ಲಿ ಸಂತೋಷ.
ಮಿಥುನ
ಸಂಗಾತಿ ಜತೆಗೆ ಭಿನ್ನಮತ ಸಂಭವ. ನಿಮ್ಮ ಕಾರ್ಯದ ಬಗ್ಗೆ ಅನುಮಾನ ಬೇಡ. ಸರಿದಾರಿಯಲ್ಲೆ ನೀವು ನಡೆಯುತ್ತಿದ್ದೀರಿ.
ಕಟಕ
ನಿಮ್ಮ ನಡೆನುಡಿ ಇತರರನ್ನು ಆಕರ್ಷಿಸಲಿದೆ. ಪ್ರೀತಿಯಲ್ಲಿ ಯಶಸ್ಸು. ವ್ಯವಹಾರದ ತೊಡಕು ಪರಿಹಾರ. ಬಂಧುಗಳ ಭೇಟಿಯಿಂದ ಖುಷಿ.
ಸಿಂಹ
ಅನಿರೀಕ್ಷಿತ ಧನಲಾಭ. ಬಾಕಿ ಸಂದಾಯ ಮಾಡಲು ಸಫಲರಾಗುವಿರಿ. ಮನೆಯ ವಾತಾವರಣ ತುಸು ಬಿಗುವೆನಿಸಲಿದೆ.
ಕನ್ಯಾ
ನಿಮ್ಮ ವೃತ್ತಿ ಗುರಿ ಸಾಧಿಸಲು ಆದ್ಯತೆ ಕೊಡಿ. ಮನಸ್ಸು ಇತರೆಡೆಗೆ ಹರಿಯದಿರಲಿ. ಕ್ಷುಲ್ಲಕ ವಿಷಯಗಳಿಗೆ ಚಿಂತೆ ಮಾಡುತ್ತಾ ಕೂರಬೇಡಿ.
ತುಲಾ
ವ್ಯವಹಾರ ಸಂಬಂಧ ಪ್ರವಾಸ. ವೆಚ್ಚಕ್ಕೆ ಸಂಬಂಽಸಿ ತುಸು ಗೊಂದಲ ಸೃಷ್ಟಿ. ಚರ್ಮದ ಅಲರ್ಜಿ ಸಂಭವ. ಹಳೆಯ ಸ್ನೇಹಿತರ ಭೇಟಿ.
ವೃಶ್ಚಿಕ
ಕೌಟುಂಬಿಕ ವ್ಯವಹಾರ ಇಂದು ಆದ್ಯತೆ ಪಡೆಯಲಿದೆ. ವಾಗ್ವಾದ ನಡೆದೀತು. ತಾಳ್ಮೆ ಕಾಯ್ದುಕೊಳ್ಳಿ. ವೃತ್ತಿಯಲ್ಲಿ ಆರ್ಥಿಕ ಕೊರತೆ.
ಧನು
ಉದ್ದೇಶ ಸಾಧಿಸಲು ಹೆಚ್ಚುವರಿ ಶ್ರಮದ ಅಗತ್ಯವಿದೆ. ಕೌಟುಂಬಿಕ ಕಿರಿಕಿರಿ. ಏನೇ ಮಾಡಿದರೂ ಸಣ್ಣ ಕೊರತೆ ಉಳಿದೇ ಉಳಿಯುವುದು.
ಮಕರ
ನಿಮ್ಮ ಕೌಶಲ ಮತ್ತು ಅನುಭವವು ಕ್ಷಿಪ್ರ ಹಣ ಗಳಿಕೆಗೆ ನೆರವು ನೀಡಲಿದೆ. ಒತ್ತಡದ ಬದುಕು ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಬಹುದು.
ಕುಂಭ
ನಿಮ್ಮ ಶೀಘ್ರಕೋಪ ನಿಯಂತ್ರಿಸಿ. ಇತರರು ಅದರ ದುರುಪಯೋಗ ಮಾಡಿಕೊಂಡಾರು. ವೃಥಾ ಆರೋಪಕ್ಕೆ ಗುರಿಯಾಗುವ ಸಾಧ್ಯತೆ.
ಮೀನ
ದಿನಕ್ಕೊಂದು ಸಮಸ್ಯೆ ಸುತ್ತಿಕೊಳ್ಳುತ್ತಿದೆ ಎಂಬ ಬೇಸರ. ಶನಿಪ್ರಭಾವ ಇದಕ್ಕೆ ಕಾರಣ. ಸ್ವಲ್ಪ ಕಾಲ ಇದನ್ನು ತಾಳಿಕೊಳ್ಳಲೇ ಬೇಕಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !