ಮೇಷ
ಕಳೆದ ಕೆಲದಿನಗಳ ಗೊಂದಲ ಪರಿಹಾರ. ಎಲ್ಲವೂ ನಿಚ್ಚಳ. ನಿಮ್ಮ ಕಾರ್ಯ ಸಲೀಸು. ಸಂತಾನಾಪೇಕ್ಷಿ ದಂಪತಿಗೆ ಶುಭ ಬೆಳವಣಿಗೆ.
ವೃಷಭ
ವ್ಯವಹಾರ ಪ್ರಗತಿ. ಆರ್ಥಿಕ ಅಡಚಣೆ ನಿವಾರಣೆ. ಸಂಗಾತಿ ಜತೆ ಸೌಹಾರ್ದ ಪರಿಸರ. ಮನಸ್ತಾಪ ಅಂತ್ಯ. ದೈಹಿಕ ನೋವು ಪರಿಹಾರ.
ಮಿಥುನ
ಎಲ್ಲ ವ್ಯವಹಾರದಲ್ಲಿ ಎಚ್ಚರ ಅವಶ್ಯ. ಜಡತ್ವ ಬಿಟ್ಟು ಕಾರ್ಯವೆಸಗಿ. ಕೋಪದ ವರ್ತನೆ ಹಾನಿ ತಂದೀತು. ಆರೋಗ್ಯ ಸಮಸ್ಯೆ ಪರಿಹಾರ.
ಕಟಕ
ವೃತ್ತಿಕ್ಷೇತ್ರದಲ್ಲಿ ಉನ್ನತಿಯ ಅವಕಾಶ. ಅನಿರೀಕ್ಷಿತ ಬದಲಾವಣೆ. ಅದಕ್ಕೆ ಒಗ್ಗಿಕೊಳ್ಳಿ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ.
ಸಿಂಹ
ಉದ್ದೇಶಿತ ಫಲ ದೊರಕದೆ ನಿರಾಶೆ. ಕೆಲ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕು. ವೃತ್ತಿ ಒತ್ತಡದಿಂದ ಹೊರಬಂದು ಆಪ್ತರ ಜತೆ ಕಳೆಯಿರಿ.
ಕನ್ಯಾ
ಸಕಾಲದಲ್ಲಿ ನಿಮ್ಮ ಕಾರ್ಯ ಪೂರೈಕೆ. ಮನೆಯಲ್ಲಿ ಸಮರಸದ ವಾತಾವರಣ. ಆರ್ಥಿಕ ಪರಿಸ್ಥಿತಿ ಆಶಾದಾಯಕ. ಒಟ್ಟಿನಲ್ಲಿ ಪೂರಕ ದಿನ.
ತುಲಾ
ದಿನವಿಡೀ ಕಾರ್ಯ. ವಿರಾಮಕ್ಕೆ ಸಮಯ ಸಿಗದು. ಆದರೆ ತೃಪ್ತಿಕರ ಫಲಿತಾಂಶ. ಅನ್ಯರ ಮನವೊಲಿಕೆ ಕಾರ್ಯ ಸಫಲ. ಧನ ಪ್ರಾಪ್ತಿ.
ವೃಶ್ಚಿಕ
ಪ್ರಗತಿಗೆ ತೊಡಕು. ಸಮಾಧಾನದ ಹೆಜ್ಜೆ ಇಡಿ. ಧಾವಂತ ಬೇಡ. ನಿಷಲ ಮಾತುಕತೆ ತ್ಯಜಿಸಿ. ಶೇರು ಹೂಡಿಕೆಯಿಂದ ಹೆಚ್ಚಿನ ಲಾಭ ಸಿಗಲಾರದು.
ಧನು
ಧನಹಾನಿ ಉಂಟಾದೀತು. ಇದರಿಂದ ನೆಮ್ಮದಿ ಹಾಳಾದೀತು. ಕಿವಿನೋವು ಸಂಭವ. ಮನಶ್ಯಾಂತಿ ಸಾಧಿಸಲು ಧ್ಯಾನದಲ್ಲಿ ತೊಡಗಿ.
ಮಕರ
ಎಂದಿನಂತೆ ಸಹಜ ದಿನ. ಮಹತ್ವದ ಬೆಳವಣಿಗೆ ಕಾಣದು. ಆಪ್ತರ ಜತೆಗಿನ ಭಿನ್ನಮತ ಪರಿಹಾರ. ವೃತ್ತಿ ಸಮಸ್ಯೆಯೊಂದು ಇತ್ಯರ್ಥ ಕಾಣಲಿದೆ.
ಕುಂಭ
ದಿನವಿಡೀ ಕಾರ್ಯವ್ಯಸ್ತ. ಕೆಲವು ಬಗೆಯ ಒತ್ತಡ. ಆಪ್ತರ ಜತೆ ವಾಗ್ವಾದವೂ ನಡೆದೀತು. ಖರ್ಚು ಕಡಿಮೆ ಮಾಡಲೆತ್ನಿಸಿ.
ಮೀನ
ಬದುಕಲ್ಲಿ ಮಹತ್ವದ ಬದಲಾವಣೆ ಆದೀತು. ಸಂಬಂಧ ವೃದ್ಧಿ. ಉದ್ಯಮದಲ್ಲಿ ಪ್ರಗತಿ. ಆರೋಗ್ಯ ಸಮಸ್ಯೆ ನಿವಾರಣೆ. ನಿರಾಳತೆ.



