ಮೇಷ
ನಿಮ್ಮ ಕೆಲಸ ವಿಳಂಬವಿಲ್ಲದೆ ಮುಗಿಯಲಿದೆ.ಆದರೂ ಒತ್ತಡ ತಪ್ಪದು. ಆರ್ಥಿಕ ಪರಿಸ್ಥಿತಿ ಉತ್ತಮ. ಆದರೆ ಖರ್ಚು ಕೂಡಾ ಅಧಿಕ.
ವೃಷಭ
ಸಹೋದ್ಯೋಗಿಗಳು ಸಮಸ್ಯೆ ಸೃಷ್ಟಿಸುವರು. ಸಂಘರ್ಷ ತಪ್ಪಿಸಿ. ಮನಶ್ಯಾಂತಿ ಕಾಪಾಡಿ. ಸಂಬಂಧ ಉಳಿಸಲು ಮುಕ್ತ ಮಾತುಕತೆ ಮುಖ್ಯ.
ಮಿಥುನ
ಮಾನಸಿಕ ಒತ್ತಡ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಕಡಿಮೆ ಆಗಲಿದೆ. ಸಂಗಾತಿ ಜತೆಗೆ ಭಿನ್ನಮತ ಸಂಭವ. ಅನವಶ್ಯ ಖರ್ಚು ಹೆಚ್ಚಳ.
ಕಟಕ
ಪ್ರೀತಿಪಾತ್ರರ ಜತೆ ಸಂಬಂಧ ಕೆಡಬಹುದು. ನಿಮ್ಮ ಕೋಪತಾಪ ಬಿಟ್ಟು ವ್ಯವಹರಿಸಬೇಕು. ಇತರರ ಭಾವನೆಗೆ ಸ್ಪಂದಿಸಿರಿ. ವೃತ್ತಿಯಲ್ಲಿ ಒತ್ತಡ ಹೆಚ್ಚಳ.
ಸಿಂಹ
ವೃತ್ತಿಯಲ್ಲಿ ಮಹತ್ವದ ಬೆಳವಣಿಗೆ. ಅದೃಷ್ಟವನ್ನೆ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನವೂ ಅಗತ್ಯ. ಕಠಿಣ ಕಾರ್ಯ ಸಫಲ. ಹಣ ಗಳಿಕೆ ಹೆಚ್ಚಲಿದೆ.
ಕನ್ಯಾ
ಆಪ್ತ ಸಂಬಂಧ ಕಾಯುವಲ್ಲಿ ನಿಮ್ಮ ಅಹಂ ಅಡ್ಡಿ ಬಾರದಿರಲಿ. ಖರ್ಚಿನ ದಾರಿ ಹೆಚ್ಚು ವುದು. ಆದಾಯ ಗಳಿಕೆಯ ಸಾಧ್ಯತೆ ಕಡಿಮೆ.
ತುಲಾ
ವೃತ್ತಿಯಲ್ಲಿ ಯಶಸ್ಸು. ಆದಾಯ ಹೆಚ್ಚಳ. ವೃತ್ತಿ ಸಮಸ್ಯೆ ಪರಿಹಾರದಿಂದ ನೆಮ್ಮದಿ. ಕುಟುಂಬದ ಹೊಣೆಯೊಂದು ಹೆಚ್ಚು ಒತ್ತಡ ಹೇರಲಿದೆ.
ವೃಶ್ಚಿಕ
ಮನೆಯ ಕಾರ್ಯ ಮತ್ತು ವೃತ್ತಿ ಕಾರ್ಯದ ಮಧ್ಯೆ ಅಸಮತೋಲನ ಕಂಡುಬಂದೀತು. ಇದರಿಂದ ಎಲ್ಲವೂ ಅಸ್ತವ್ಯಸ್ತ. ಸಹನೆಯಿರಲಿ.
ಧನು
ನಿಮಗಿಂದು ಪೂರಕ ದಿನ. ನಿಮ್ಮ ಕಾರ್ಯ ಸಫಲ. ಆತ್ಮೀಯರಿಂದ ಭಾವನಾತ್ಮಕ ಬೆಂಬಲ.ಕೌಟುಂಬಿಕ ಉದ್ವಿಗ್ನತೆ ಶಮನಗೊಳ್ಳುವುದು.
ಮಕರ
ಚಿಂತೆಗೆ ಕಾರಣವಾದ ವಿಷಯಗಳೆಲ್ಲ ಇತ್ಯರ್ಥ ಕಂಡು ನಿರಾಳತೆ. ಮುನಿಸಿಕೊಂಡವರು ಸಮೀಪವಾಗುತ್ತಾರೆ. ಕೌಟುಂಬಿಕ ಸಾಮರಸ್ಯ.
ಕುಂಭ
ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಎಚ್ಚರಿಕೆ ವಹಿಸಿ. ನಿರ್ಲಕ್ಷ್ಯವು ಹಾನಿ ತರಬಹುದು. ಇತರರ ಮೇಲೆ ಜವಾಬ್ದಾರಿ ದಾಟಿಸಬೇಡಿ.
ಮೀನ
ಖಾಸಗಿ ವಿಷಯದಲ್ಲಿ ಪೂರಕ ಬೆಳವಣಿಗೆ. ಪ್ರೀತಿ ಯಲ್ಲಿ ಯಶಸ್ಸು. ನಿಮ್ಮ ಭಾವನೆಗೆ ಸೂಕ್ತ ಸ್ಪಂದನೆ ಪಡೆಯುವಿರಿ. ವಿವಾದಕ್ಕೆ ಆಸ್ಪದ ನೀಡದಿರಿ.



