ಮೇಷ
ಆದಾಯ ಗಳಿಕೆಯ ಹೊಸ ದಾರಿ ತೋರಲಿದೆ. ಜತೆಗೇ ಖರ್ಚು ಕಡಿಮೆ ಮಾಡಿ. ನಿಮ್ಮ ಕಾರ್ಯಕ್ಕೆ ಇತರರ ಮೆಚ್ಚುಗೆ ಸಿಗಲಿದೆ. ಕೌಟುಂಬಿಕ ಅಸಮಾಧಾನ.
ವೃಷಭ
ನಿಮ್ಮ ಸುತ್ತಲಿರುವ ನಯವಂಚಕರ ಬಗ್ಗೆ ಎಚ್ಚರ ಇರಲಿ. ಅವರ ಮಾತಿಗೆ ಮರುಳಾಗದಿರಿ. ಪ್ರೀತಿಯ ವ್ಯವಹಾರದಲ್ಲಿ ಬಿಕ್ಕಟ್ಟು ಸಂಭವ.
ಮಿಥುನ
ಒತ್ತಡದ ಬದುಕಿಂದ ವಿರಾಮ ಪಡೆಯಿರಿ. ಮಾನಸಿಕ ನೆಮ್ಮದಿ ಮುಖ್ಯ. ಯುವಕರ ಪ್ರೇಮದ ಅಹವಾಲು ಸ-ಲಗೊಳ್ಳಲಿದೆ.
ಕಟಕ
ಭಾವುಕತೆ ನಿಮ್ಮ ವಿವೇಕ ಮರೆಸಬಹುದು. ವಿವೇಚನೆ ಮುಖ್ಯ. ಆಪ್ತ ಸಂಬಂಧದಲ್ಲಿ ಕೆಲವರು ಹುಳಿ ಹಿಂಡುವರು. ಶೇರು ಹೂಡಿಕೆಯಿಂದ ಲಾಭ.
ಸಿಂಹ
ಇಂದು ಅಚ್ಚರಿಯ ಬೆಳವಣಿಗೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಿ. ಅನ್ಯರ ಜತೆಗಿನ ವೈರವನ್ನು ದೀರ್ಘ ಎಳೆಯಬೇಡಿ. ಸಾಂಸಾರಿಕ ನೆಮ್ಮದಿ ಭಂಗ.
ಕನ್ಯಾ
ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಬೀಳಲಿದೆ. ಮಾನಸಿಕ ಒತ್ತಡದಿಂದ ನೆಮ್ಮದಿ ಹಾಳು. ಪ್ರೀತಿಯ ಬಿಕ್ಕಟ್ಟು ಶಮನದಿಂದ ತುಸು ನಿರಾಳತೆ.
ತುಲಾ
ವೃತ್ತಿ ಒತ್ತಡದಿಂದ ಮುಕ್ತಿ. ಇತರರ ಸಹಕಾರ ನಿಮಗೆ ನಿರಾಳತೆ ತರಲಿದೆ. ಆಪ್ತರ ಜತೆ ಬೆರೆಯುವ ಅವಕಾಶ. ಖಾಸಗಿ ಚಿಂತೆಗೆ ಪರಿಹಾರ.
ವೃಶ್ಚಿಕ
ನಿಮ್ಮ ಶ್ರಮದಿಂದ ಕಾರ್ಯದಲ್ಲಿ ಯಶ. ಆರ್ಥಿಕ ಉನ್ನತಿ. ಪ್ರೀತಿಯ ವಿಷಯದಲ್ಲಿ ಎಚ್ಚರದ ಹೆಜ್ಜೆ ಇಡಿ. ಅಪಸ್ವರ ಏಳದಂತೆ ನೋಡಿಕೊಳ್ಳಿ.
ಧನು
ನಿಮ್ಮ ಗುಣಾತ್ಮಕ ನಡವಳಿಕೆ ಯಶಸ್ಸಿಗೆ ಕಾರಣವಾಗಲಿದೆ. ಎಲ್ಲರಿಂದ ದೂರ ಇರುವ ಅಭ್ಯಾಸ ಬಿಡಿ. ಎಲ್ಲರೊಡನೆ ಸೇರಿ.
ಮಕರ
ಉದ್ಯಮಿಗಳು ಇಂದು ಒಂದು ಹೆಜ್ಜೆ ಹಿಂದಿಡಿ. ಪರಿಸ್ಥಿತಿ ನಿಮಗೆ ಪೂರಕವಾಗಿಲ್ಲ. ಕೆಲ ಬೆಳವಣಿಗೆ ವೈರಾಗ್ಯ ಭಾವ ಮೂಡಿಸಬಹುದು.
ಕುಂಭ
ವ್ಯಕ್ತಿಯೊಬ್ಬರ ಜತೆ ಬಾಂಧವ್ಯ ಗಟ್ಟಿಯಾದೀತು. ಆದಾಯದಲ್ಲಿ ಹೆಚ್ಚಳ. ಮನೆಯ ಸಮಸ್ಯೆ ಪರಿಹಾರದಿಂದ ನೆಮ್ಮದಿ.
ಮೀನ
ಎಲ್ಲರ ಜತೆ ಮುಕ್ತವಾಗಿ ಬೆರೆಯಿರಿ. ಎಲ್ಲರನ್ನು ಸಂಶಯದಿಂದ ನೋಡಬೇಡಿ. ನಿಮ್ಮ ವೈ-ಲ್ಯಕ್ಕೆ ಅನ್ಯರನ್ನು ದೂರುತ್ತಾ ಕೂರದಿರಿ.



