September 19, 2026
Saturday, September 19, 2026
spot_img

ದಿನಭವಿಷ್ಯ| ಉದಾಸೀನತೆ ದೂರವಿಡಿ, ಏಕಾಂಗಿಗಳಿಗೆ ಸಿಗಲಿದ್ದಾರೆ ಮನಸಿಗೆ ಒಪ್ಪುವ ಸಂಗಾತಿ!

ಮೇಷ
ಉದಾಸೀನತೆ ಕಾಡಬಹುದು. ಕೆಲಸ ನಿಧಾನ. ಏಕಾಂಗಿಗಳಿಗೆ ಸಂಗಾತಿ ಲಭ್ಯ. ಹೊಸ ವ್ಯವಹಾರದಲ್ಲಿ ಹಣ ಹೂಡಿದರೆ ಲಾಭ.
ವೃಷಭ
ದೃಢ ಮನಸ್ಸು, ಆತ್ಮವಿಶ್ವಾಸದ ನಡೆ ನಿಮ್ಮನ್ನು ಪ್ರಗತಿಗೆ ಕೊಂಡೊಯ್ಯಬಲ್ಲುದು. ಅಹಂಕಾರದ ಪ್ರದರ್ಶನ ಪ್ರತಿಕೂಲವಾದೀತು.  
ಮಿಥುನ
 ಕಠಿಣ ಶ್ರಮ ಇಂದು ಅಗತ್ಯ. ನಿಮ್ಮ ನಿರ್ಲಕ್ಷ್ಯ ಟೀಕೆಗೆ ಗುರಿಯಾದೀತು. ಅವಸರದಿಂದ ಹಣ ಹೂಡಬೇಡಿ. ಯೋಚಿಸಿ ನಿರ್ಧರಿಸುವುದೊಳಿತು.        
ಕಟಕ
ನಿಮ್ಮ ಇತ್ತೀಚಿನ ವರ್ತನೆಯ ಆತ್ಮವಿಮರ್ಶೆ ಮಾಡಿಕೊಳ್ಳಿ. ತಪ್ಪಿದ್ದರೆ ತಿದ್ದಿಕೊಳ್ಳಿ. ಎಲ್ಲರ ವಿರೋಧ ಕಟ್ಟಿಕೊಳ್ಳದಿರಿ. ಕೌಟುಂಬಿಕ ಬಿಕ್ಕಟ್ಟು.        
ಸಿಂಹ
 ಹೊಸ ಉದ್ಯೋಗ ಅವಕಾಶ ಉಜ್ವಲ. ಕೆಟ್ಟ ದೆಸೆ ಪರಿಹಾರ. ಆಪ್ತ ಸಂಬಂಧ ಹೊಸ ಆಯಾಮ ಪಡೆದೀತು. ಬಂಧುಗಳ ನೆರವು.  
ಕನ್ಯಾ
ಆತ್ಮೀಯರ ಜತೆ ನಿಮ್ಮ ಅಳಲು ಹಂಚಿಕೊಳ್ಳಿ. ಅವರಿಂದ ಪರಿಹಾರ ದೊರಕಬಹುದು. ಕೌಟುಂಬಿಕ ಬಿಕ್ಕಟ್ಟು ಬೇಗ ಪರಿಹರಿಸಿಕೊಳ್ಳಿ.      
ತುಲಾ
ನಿಮ್ಮ ಗುರಿ ಸಾಽಸಲು ಕಠಿಣ ಪರಿಶ್ರಮ ಅಗತ್ಯ. ಅನವಶ್ಯ ವೆಚ್ಚ ನಿಯಂತ್ರಿಸಿ. ವ್ಯವಹಾರದಲ್ಲಿ ತುಸು ಹಿನ್ನಡೆ ಕಂಡೀತು.      
ವೃಶ್ಚಿಕ
ವ್ಯವಹಾರದಲ್ಲಿ ತುಸು ಎಚ್ಚರ ವಹಿಸಿ. ವಂಚನೆಗೆ ಗುರಿಯಾಗುವ ಸಾಧ್ಯತೆ. ಆರೋಗ್ಯ ಸಮಸ್ಯೆ ಕಾಡಬಹುದು. ವಿಶ್ರಾಂತಿ ಅವಶ್ಯ.  
ಧನು
 ನೌಕರಿಗೆ ಸಂಬಂಽಸಿ ಶುಭ ಸುದ್ದಿ. ಆರ್ಥಿಕ ಉತ್ತೇಜನ. ಬಂಧು ಜತೆಗಿನ ವಿರಸ ಶಮನ. ಸಂಗಾತಿಯ ಬೆಂಬಲ ದೊರಕಲಿದೆ.    
ಮಕರ
ನಿಮ್ಮ ಸುತ್ತ ಇಂದು ಪ್ರಶಾಂತ ವಾತಾವರಣ. ಒತ್ತಡವಿಲ್ಲದ ದಿನ. ಆಹಾರ ಸೇವನೆಯಲ್ಲಿ ಕಾಳಜಿ ವಹಿಸಿ. ಹೊಟ್ಟೆ ಕೆಡುವ ತಿನಿಸು ದೂರವಿಡಿ.    
ಕುಂಭ
ಒತ್ತಡ ತರುವ ವಿಷಯಗಳಿಂದ ದೂರ ಇರಿ. ಸ್ಥಿರತೆಯಿಲ್ಲದ ವ್ಯವಹಾರದಲ್ಲಿ ಹಣ ಹೂಡಬೇಡಿ. ವಿವಾಹ ಸಂಬಂಧ ಕುದುರೀತು.
 ಮೀನ
ಭಾವನಾತ್ಮಕ ಸನ್ನಿವೇಶಕ್ಕೆ ತುತ್ತಾಗುವಿರಿ. ಆರ್ಥಿಕ ಉನ್ನತಿ. ಹಿಡಿದ ಗುರಿ ಸಾಧಿಸುವ ನಿಮ್ಮ ಛಲ ಈಡೇರಲಿದೆ. ಸಾಂಸಾರಿಕ ನೆಮ್ಮದಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !