August 24, 2026
Monday, August 24, 2026
spot_img

ದಿನಭವಿಷ್ಯ: ಕೆಲಸಗಳನ್ನು ಮುಂದೂಡದೆ ತಕ್ಷಣ ಪೂರ್ಣಗೊಳಿಸಿ, ಧನಲಾಭದ ಯೋಗವಿದೆ

ಮೇಷ
ಸಕಾಲದಲ್ಲಿ ಕಾರ್ಯ ಮುಗಿಸಿ. ಮುಂದೆ ಮುಂದೆ ಹಾಕುತ್ತಾ ಹೋಗಬೇಡಿ. ಅನಿರೀಕ್ಷಿತ ಧನಗಳಿಕೆ. ಬಂಧು ಜತೆಗಿನ ಮನಸ್ತಾಪ ಅಂತ್ಯ.
ವೃಷಭ
ಹೊಸ ವ್ಯವಹಾರ ಆರಂಭಕ್ಕೆ ಸಕಾಲ. ಪರಿಸ್ಥಿತಿ ನಿಮಗೆ ಪೂರಕ. ಅಜೀರ್ಣ ಸಮಸ್ಯೆ. ಮಿತಾಹಾರ ಒಳ್ಳೆಯದು. ಮಾತಿನ ಚಕಮಕಿ ನಡೆಸದಿರಿ.
ಮಿಥುನ
ವೃತ್ತಿಯಲ್ಲಿ ಅಡ್ಡಿ. ವೃತ್ತಿಗೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ. ಆತ್ಮೀಯರ ಜತೆ ಮನ ಬಿಚ್ಚಿ ಮಾತಾಡಿ. ಮುಚ್ಚುಮರೆ ಬೇಡ.
ಕಟಕ
ನಿಮ್ಮ ಕುರಿತಾಗಿ ಅನ್ಯರಲ್ಲಿ ಮೂಡಿರುವ ತಪ್ಪುಕಲ್ಪನೆ ನೀಗಲು ಆದ್ಯತೆ ಕೊಡಿ. ಇಲ್ಲವಾದರೆ ಅದು ಸಂಬಂಧದ ಮೇಲೆ ಪರಿಣಾಮ ಬೀರಬಹುದು.
ಸಿಂಹ
ಸಹನೆ ಅತಿ ಮುಖ್ಯ. ನಿಮಗೆ ಪಥ್ಯವಾಗದ ಬೆಳವಣಿಗೆ ನಡೆದೀತು. ವಿರೋಧಿಸದೆ ಹೊಂದಿಕೊಂಡು ಸಾಗಿ. ಆಪ್ತರ ಅಸಹಕಾರ.
ಕನ್ಯಾ
ನಿಮ್ಮ ಪಾಲಿಗೆ ಅತ್ಯಂತ ಯಶಸ್ವೀ ದಿನ. ಆಪ್ತರಿಂದ ಅಚ್ಚರಿಯ ವಿಷಯ ಕೇಳುವಿರಿ. ಹಳೆಯ ಹೂಡಿಕೆ ಈಗ ಲಾಭ ತರಬಹುದು.
ತುಲಾ
ವೃತ್ತಿಯೊತ್ತಡ ಹೆಚ್ಚು. ಕೆಲವರ ಅಸಹಕಾರ. ಮನೆಯಲ್ಲಿ ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ಸಹನೆಯಿಂದ ನಡಕೊಳ್ಳಿ. ಧ್ಯಾನ ಸಹಕಾರಿ.
ವೃಶ್ಚಿಕ
ನೀವು ಕೈಗೊಳ್ಳುವ ಕ್ರಮ ಉತ್ತಮ ಫಲ ನೀಡುವುದು. ವೃತ್ತಿಯಲ್ಲಿ ತೃಪ್ತಿ. ಕೌಟುಂಬಿಕ ಭಿನ್ನಮತ ನಿವಾರಣೆ. ಮೆದು ಮಾತು ಒಳಿತು.
ಧನು
ಲಾಭ-ನಷ್ಟ ಎರಡೂ ಉಂಟಾಗಲಿದೆ. ಕೆಲ ವಿಷಯ ಉದ್ವಿಗ್ನತೆ ಸೃಷ್ಟಿಸಲಿದೆ. ಆಪ್ತರ ಅಸಹಕಾರ. ಉಷ್ಣ ಸಂಬಂಽ ಬಾಧೆ.
ಮಕರ
ಮಾನಸಿಕ ಬೇಗುದಿ. ಅದಕ್ಕೆ ನಿರ್ದಿಷ್ಟ ಕಾರಣ ವೆಂಬುದಿಲ್ಲ. ಎಲ್ಲರೂ ನಿಮಗೆ ವಿರೋಽಗಳು ಎಂಬಂಥ ಭಾವನೆ. ಮನೋನಿಗ್ರಹ ಇರಲಿ.
ಕುಂಭ
ವೃತ್ತಿಯಲ್ಲಿ ಸಫಲತೆ. ಹಿರಿಯರು ನಿಮ್ಮ ಕಾರ್ಯ ಮೆಚ್ಚಿಕೊಳ್ಳುವರು. ಮಾನಸಿಕ ತುಮುಲ ಇಂದು ನಿವಾರಣೆ ಕಾಣಲಿದೆ. ನಿರಾಳತೆ.
ಮೀನ
ಕೆಲ ದಿನಗಳ ಅಡೆತಡೆ ಬಳಿಕ ಇಂದು ದಿನವು ಸುಗಮವಾಗಿ ಸಾಗಲಿದೆ. ಕೆಲಸ ನಿರ್ವಿಘ್ನವಾಗಿ ಪೂರ್ಣ. ನಿಮ್ಮ ಸುತ್ತಲಿನ ಪರಿಸರ ಶಾಂತಿಯುತ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !