ಮೇಷ
ಕಚೇರಿ ಕೆಲಸದಲ್ಲಿ ಹೆಚ್ಚು ಎಚ್ಚರ ವಹಿಸಿ. ಲೋಪ ಆಗದಿರಲಿ. ಸಂಜೆ ವೇಳೆಗೆ ತೃಪ್ತಿಯ ಭಾವ. ತಾಳ್ಮೆಯ ನಡೆ ನಿಮ್ಮನ್ನು
ಮುನ್ನಡೆಸುವುದು.
ವೃಷಭ
ನಿಮ್ಮ ನಿರ್ವಹಣೆ ಇತರರಿಗೆ ಅಸೂಯೆ ತರಬಹುದು. ವೃತ್ತಿ ಸಂಬಂಧ ಪ್ರಯಾಣ. ಬೆನ್ನು ನೋವಿದ್ದವರಿಗೆ ಉಪಶಮನ ಸಿಗಲಿದೆ.
ಮಿಥುನ
ನಿಮ್ಮ ಯೋಜನೆ ಸ-ಲ. ಆರ್ಥಿಕ ಲಾಭ. ಪ್ರಮುಖ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ. ಭಾವನಾತ್ಮಕ ಏರುಪೇರು. ದೃಢ ಮನಸ್ಸಿರಲಿ.
ಕಟಕ
ವೃತ್ತಿಯಲ್ಲಿ ಮತ್ತು ಪ್ರೀತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ. ಹಳೆಯ ಮಿತ್ರರ ಭೇಟಿ. ಅತಿಯಾದ ಕೆಲಸ ಬಳಲಿಕೆ ತರಲಿದೆ. ಖರ್ಚು ಅಽಕ.
ಸಿಂಹ
ಆಶಾವಾದದಿಂದ ದಿನ ಆರಂಭಿಸಿ. ಸಣ್ಣ ಹಿನ್ನಡೆಗಳಿಗೆ ಅಂಜದಿರಿ. ಕ್ರೀಡಾಳುಗಳಿಗೆ ಶುಭದಿನ. ಕೌಟುಂಬಿಕ ವ್ಯಾಜ್ಯ ಪರಿಹಾರದ ಸಂಕೇತ.
ಕನ್ಯಾ
ಜನರ ಜತೆ ಸಂವಹನ ಸಾಽಸಲು ಹಿಂಜರಿಕೆ ಬೇಡ. ನಿಮ್ಮ ವೃತ್ತಿ ಉನ್ನತಿಗೆ ಅದು ಅಗತ್ಯ. ಆತ್ಮೀಯರು ಮನಸ್ಸಿಗೆ ಬೇಸರ ತರುವರು.
ತುಲಾ
ವೃತ್ತಿ ಕಾರ್ಯದಲ್ಲೇ ಇಂದು ದಿನ ಕಳೆಯಲಿದೆ. ಉಳಿದ ವಿಚಾರಗಳಿಗೆ ವೇಳೆ ಸಾಲದು. ಶಾಪಿಂಗ್ ಹೊರಟರೆ ಜೇಬು ಖಾಲಿಯಾದೀತು.
ವೃಶ್ಚಿಕ
ಸ್ನೇಹವೊಂದು ಪ್ರೀತಿಗೆ ತಿರುಗಬಹುದು. ವೃತ್ತಿಪರರು ಹೊಸ ವ್ಯವಹಾರ ಆರಂಭಿಸಲು ಸಕಾಲ. ಕೌಟುಂಬಿಕ ಭಿನ್ನಮತ ನಿವಾರಣೆ.
ಧನು
ಕೆಲಸದಲ್ಲಿ ನಿರಾಸಕ್ತಿ. ವಿರಾಮ ಬಯಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಂಸಾರಿಕ ಸಮಸ್ಯೆಗೆ ಪರಿಹಾರ ತುಸು ಕಷ್ಟ , ತಾಳ್ಮೆ ವಹಿಸಿ.
ಮಕರ
ನಿಮ್ಮ ಸುತ್ತ ಒಂದು ಬಗೆಯ ಅಸಹನೆ, ಉದ್ವಿಗ್ನತೆ ಆವರಿಸುವುದು. ಅನ್ಯರ ಜತೆ ವಿನಯದಿಂದ ವ್ಯವಹರಿಸಿ. ನಿಮ್ಮ ಕೋಪ ನಿಯಂತ್ರಿಸಬೇಕು.
ಕುಂಭ
ಪ್ರತಿಯೊಂದು ವಿಷಯವನ್ನು ಗುಣಾತ್ಮಕ ದೃಷ್ಟಿಯಿಂದ ನೋಡಿ. ನೆಗೆಟಿವ್ ಚಿಂತನೆ ಬಿಡಿ. ಹಳೆಯ ಹೂಡಿಕೆ ಲಾಭ ತರಲಿದೆ.
ಮೀನ
ಖಾಸಗಿ ಸಮಸ್ಯೆ ಕಿರಿಕಿರಿ ತರುವುದು. ಸಣ್ಣ ವಿಷಯದಲ್ಲೂ ತಪ್ಪು ಹುಡುಕುವಿರಿ. ಅತಿಥಿ ಆಗಮನದಿಂದ ಮನೆಯ ವಾತಾವರಣ ಬದಲು.



