ಮೇಷ
ನಿಮ್ಮ ಪಾಲಿಗೆ ಅನಿರೀಕ್ಷಿತ ಬದಲಾವಣೆ ಸಂಭವ. ಹೊಂದಿಕೊಳ್ಳಿ. ಕೆಲವರ ಹಿತವಚನಕ್ಕೆ ಆಕ್ಷೇಪ ಸೂಚಿಸದಿರಿ. ಅದನ್ನು ಒಪ್ಪಿಕೊಳ್ಳಿ.
ವೃಷಭ
ನಿಮ್ಮ ಸುತ್ತಲಿನವರ ವರ್ತನೆಯು ಕೆಲವು ಪಾಠ ಕಲಿಸಲಿದೆ. ಯಾವುದೋ ವಿಷಯ ಚಿಂತೆಗೆ ಕಾರಣ ವಾಗಲಿದೆ. ಸಮಚಿತ್ತದ ವ್ಯವಹಾರ ಅಗತ್ಯ.
ಮಿಥುನ
ಕಾರ್ಯದಲ್ಲಿ ಸುಧಾರಣೆ. ಅಡ್ಡಿಗಳು ನಿವಾರಣೆ. ಖಾಸಗಿ ಬದುಕಲ್ಲಿ ಹಿತಕರ ವಾತಾವರಣ. ಪ್ರೀತಿಯಲ್ಲಿ ಯಶಸ್ಸು, ಸಂತೋಷ.
ಕಟಕ
ವೃತ್ತಿಕ್ಷೇತ್ರದಲ್ಲಿ ನಿಮ್ಮನ್ನು ತುಳಿಯಲು ಕೆಲವರ ಪ್ರಯತ್ನ. ಎದುರಿಸಿ ಹೋರಾಡಿ. ಮನೆಯಲ್ಲಿ ಅಶಾಂತ ವಾತಾವರಣ.
ಸಿಂಹ
ಗುಣಾತ್ಮಕ ಧೋರಣೆ ಉತ್ತಮ ಫಲ ನೀಡಲಿದೆ. ಪ್ರೀತಿಪಾತ್ರರಲ್ಲಿ ನಿಮ್ಮ ಭಾವನೆ ಹಂಚಿಕೊಳ್ಳಿ. ಸೂಕ್ತ ಪ್ರತಿಸ್ಪಂದನೆ ಸಿಗಲಿದೆ. ಆರ್ಥಿಕ ಸ್ಥಿತಿ ತೃಪ್ತಿಕರ.
ಕನ್ಯಾ
ಎಂದಿಗಿಂತ ಹೆಚ್ಚು ಒತ್ತಡ ಎದುರಿಸುವಿರಿ. ಗುರಿ ಸಾಧನೆ ಕಷ್ಟ. ಪಾಲಿಸಲಾಗದ ಮಾತು ಕೊಡಲು ಹೋಗಬೇಡಿ. ಬಂಧುಗಳ ಕಿರಿಕಿರಿ.
ತುಲಾ
ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಅವಕಾಶ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರ. ಆರೋಗ್ಯ ಸಮಸ್ಯೆ ಪರಿಹಾರ. ಕೌಟುಂಬಿಕ ಸಹಕಾರ.
ವೃಶ್ಚಿಕ
ಸವಾಲಿನ ದಿನ. ಪ್ರತಿ ಕೆಲಸಕ್ಕೂ ಅಡ್ಡಿ ತೋರಲಿದೆ. ದಿನದ ಅಂತ್ಯಕ್ಕೆ ಬೇಸರದ ಮನಸ್ಥಿತಿ. ದೇವರನ್ನು ಪ್ರಾರ್ಥಿಸಿ.
ಧನು
ಬಿಡುವಿಲ್ಲದ ದಿನ. ಏನಾದರೊಂದು ಕಾರ್ಯ ಹೆಗಲೇರುವುದು. ಕೆಲವರ ಅಸಹಕಾರ ಅಸಹನೆ ತರಲಿದೆ. ತಾಳ್ಮೆಯಿಂದ ವ್ಯವಹರಿಸಿರಿ.
ಮಕರ
ಅತ್ಯತ ಫಲಪ್ರದ ದಿನ. ಆತ್ಮೀಯರ ಮನ ಗೆಲ್ಲಲು ಸಫಲರಾಗುವಿರಿ. ಟೀಕಾಕಾರರು ಮೌನವಾಗುವರು. ಕೌಟುಂಬಿಕ ನೆಮ್ಮದಿ.
ಕುಂಭ
ಏನೋ ಕಳಕೊಂಡ ಭಾವದಲ್ಲಿ ಮರುಗುವಿರಿ. ಸಕಾರಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳಿ. ಆರ್ಥಿಕ ಹಾನಿ ಉಂಟಾದೀತು. ಆರೋಗ್ಯ ಏರುಪೇರು.
ಮೀನ
ಯಾವುದೇ ಪ್ರತಿಕೂಲ ಪರಿಸ್ಥಿತಿ ಒದಗಿದರೂ ತಾಳ್ಮೆಯಿಂದ ವ್ಯವಹರಿಸಿ. ಕೆಲಕಾಲ ಮಾನಸಿಕ ಅಸಹನೆ ನಿಮ್ಮನ್ನು ಕಾಡಲಿದೆ.



