ಮೇಷ
ಹಲವಾರು ದಿಕ್ಕು ಗಳಲ್ಲಿ ನಿಮ್ಮ ಮನಸ್ಸು ಹರಿದಾಡುವುದು. ಕೆಲಸಕ್ಕೆ ಅಡ್ಡಿ. ಮನ ನಿಯಂತ್ರಣ ಅವಶ್ಯ. ಅನ್ಯರು ನಿಮ್ಮಡೆಗೆ ಆಸಕ್ತಿ ತೋರುವರು.
ವೃಷಭ
ಹರ್ಷದ ಮನಸ್ಥಿತಿ. ಇತರರ ಜತೆ ಚೆನ್ನಾಗಿ ಬೆರೆಯುವಿರಿ. ಮನದ ದುಗುಡ ಕಳೆದು ನಿರಾಳತೆ. ಆಪ್ತ ಸಂಬಂಧವೊಂದು ಇನ್ನೂ ಆಳವಾಗಲಿದೆ.
ಮಿಥುನ
ನಿಮ್ಮ ಜಢ ಸ್ವಭಾವ ದಿನವನ್ನು ಕೆಡಿಸಲು ಅವಕಾಶ ಕೊಡದಿರಿ. ಹುರುಪು ತುಂಬಿಕೊಳ್ಳಿ. ಹೊಟ್ಟೆ ಸಂಬಂಽತ ಅನಾರೋಗ್ಯ ಸಂಭವ.
ಕಟಕ
ಬಿಡುವಿಲ್ಲದ ದಿನ. ಸಂಜೆ ವೇಳೆಗೆ ಬಳಲಿಕೆ, ನಿರುತ್ಸಾಹ ಕಾಡಲಿದೆ. ಆರ್ಥಿಕ ವಿಚಾರದ ಚಿಂತೆಗೆ ಕಾರಣವಾಗಲಿದೆ. ಸಾಲ ತೆಗೆದುಕೊಳ್ಳದಿರಿ.
ಸಿಂಹ
ಕಾಡುತ್ತಿದ್ದ ದೈಹಿಕ ನೋವು ಇಂದು ಶಮನ. ಪ್ರೀತಿಯ ವಿಷಯದಲ್ಲಿ ಮಹತ್ವದ ತಿರುವು. ಆಪ್ತರ ಜತೆಗಿನ ಸಂಬಂಧ ಜತನದಿಂದ ಕಾಯ್ದುಕೊಳ್ಳಿ.
ಕನ್ಯಾ
ಕಚೇರಿ ರಾಜಕೀಯ ಮನಸ್ಸು ಕೆಡಿಸಬಹುದು. ದುಡುಕಿನ ವರ್ತನೆ ತೋರಬೇಡಿ. ಕೌಟುಂಬಿಕ ಹೊಣೆಯನ್ನು ಸರಿಯಾಗಿ ನಿಭಾಯಿಸಿರಿ.
ತುಲಾ
ಕುಟುಂಬ ಸದಸ್ಯರ ಅವಶ್ಯಕತೆ ಮೊದಲು ಪೂರೈಸಿ. ಬಳಿಕ ವೃತ್ತಿಗೆ ಗಮನ ಕೊಡಿ. ಮನಸ್ಸು ಕೆಡಿಸುವ ಸಣ್ಣ ಪ್ರಸಂಗ ಸಂಭವಿಸಬಹುದು.
ವೃಶ್ಚಿಕ
ಮನದಲ್ಲಿ ಹಲವಾರು ತಾಕಲಾಟಗಳು. ಚಿಂತೆ ಮಾಡುತ್ತಾ ಕೂರಬೇಡಿ. ಪಾಸಿಟಿವ್ ಆಗಿ ಕೆಲಸ ನಿರ್ವಹಿಸಿ. ಎಲ್ಲವೂ ಸರಿಹೋಗಲಿದೆ.
ಧನು
ವ್ಯವಹಾರದಲ್ಲಿ ಹಣ ಹೂಡಿಕೆ ಲಾಭ ತರಲಿದೆ. ಉದ್ವಿಗ್ನತೆ ಕಳೆದು ಮನದಲ್ಲಿ ಶಾಂತಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.
ಮಕರ
ಕೆಲವರ ಜತೆ ತಪ್ಪು ಭಾವನೆ ಬೆಳೆದೀತು. ಅದರಿಂದ ಸಂಬಂಧಕ್ಕೆ ಹಾನಿ. ವದಂತಿ ನಂಬಬೇಡಿ. ಆರ್ಥಿಕ ಒತ್ತಡ ಹೆಚ್ಚಲಿದೆ.
ಕುಂಭ
ಕ್ಲಿಷ್ಟಕರ ಎಂದು ಭಾವಿಸಿದ್ದ ಪರಿಸ್ಥಿತಿ ತಿಳಿಯಾಗಲಿದೆ. ಅಡ್ಡಿ ನಿವಾರಣೆ. ನಿಮ್ಮ ಪ್ರಗತಿಗೆ ಹಾದಿ ಮುಕ್ತವಾಗಿದೆ. ಸಹನೆ ಕಾಯ್ದುಕೊಳ್ಳಿ.
ಮೀನ
ಆವೇಶದಿಂದ ಕಾರ್ಯಾಚರಿಸಬೇಡಿ. ದಿನ ಕೆಡಬಹುದು. ಬೆನ್ನ ಹಿಂದೆ ಟೀಕಿಸುವವರನ್ನು ನಿರ್ಲಕ್ಷಿಸಿ. ಆತ್ಮೀಯರ ಬೆಂಬಲ ಉಳಿಸಿಕೊಳ್ಳಿ.



