ದಿನಭವಿಷ್ಯ: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ತಿಳಿದುಕೊಳ್ಳಿ

ಮೇಷ
ಮನೆಯ ಹೊಣೆ ಮತ್ತು ವೃತ್ತಿಯ ಮಧ್ಯೆ ಅಸಮತೋಲನ ಉಂಟಾದೀತು. ಇದರಿಂದ ಎಲ್ಲವೂ ಅಸ್ತವ್ಯಸ್ತ. ಹೊಂದಾಣಿಕೆ ಮುಖ್ಯ.
ವೃಷಭ
ಸಹೋದ್ಯೋಗಿಗಳು ಸಮಸ್ಯೆ ಸೃಷ್ಟಿಸುವರು. ಆಪ್ತ ಸಂಬಂಧ ಏರುಪೇರು.  ಸಂಜೆ ವೇಳೆ ಎಲ್ಲವೂ ಸರಿಯಾಗಲಿದೆ.  ಆರ್ಥಿಕ ಬಿಕ್ಕಟ್ಟು ನಿವಾರಣೆ.
ಮಿಥುನ
ವ್ಯವಹಾರದಲ್ಲಿ  ಕೆಲವು ಮಹತ್ವದ ಬೆಳವಣಿಗೆ. ಅದೃಷ್ಟವನ್ನೆ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನವೂ ಅಗತ್ಯ. ಬಂಧುಮಿತ್ರರ ಸಹಕಾರ.
ಕಟಕ
ವೃತ್ತಿಯಲ್ಲಿ ಯಶಸ್ಸು. ಆದಾಯ ಹೆಚ್ಚಳ. ಸಮಸ್ಯೆಯೊಂದು ಪರಿಹಾರ, ನೆಮ್ಮದಿ. ಕುಟುಂಬ ಸದಸ್ಯರ ಸಹಕಾರ, ಬೆಂಬಲ.
ಸಿಂಹ
ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಎಚ್ಚರಿಕೆ ವಹಿಸಿ. ನಿರ್ಲಕ್ಷ್ಯವು ಹಾನಿ ತರಬಹುದು. ಇತರರ ಮೇಲೆ ಜವಾಬ್ದಾರಿ ದಾಟಿಸಬೇಡಿ.
ಕನ್ಯಾ
ಮಾನಸಿಕ ಒತ್ತಡ. ನಿಮ್ಮ ಕೆಲಸದ ಮೇಲೆ ಗಮನ ಕಡಿಮೆಯಾಗಲಿದೆ. ಸಂಗಾತಿ ಜತೆಗೆ ಭಿನ್ನಮತ. ಅನವಶ್ಯ ಖರ್ಚು.
ತುಲಾ
ನಿಮಗಿಂದು ಪೂರಕ ದಿನ. ಕಾರ್ಯ ಸಫಲ. ಆತ್ಮೀಯರಿಂದ ಭಾವನಾತ್ಮಕ ಬೆಂಬಲ.ಕೌಟುಂಬಿಕ ಉದ್ವಿಗ್ನತೆ ಶಮನಗೊಳ್ಳುವುದು.
ವೃಶ್ಚಿಕ
ಕೊರಗೊಂದು ಕಾಡುತ್ತಿದೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಸೂಕ್ತ ನೆರವು ಬೇಗನೆ ಒದಗಲಿದೆ. ಆ ಬಳಿಕ ಮನಶ್ಯಾಂತಿ.
ಧನು
ಚಿಂತೆಗೆ ಕಾರಣವಾದ ವಿಷಯಗಳೆಲ್ಲ ಇತ್ಯರ್ಥ. ಮಾನಸಿಕ  ನಿರಾಳತೆ. ಮುನಿಸಿಕೊಂಡವರು ಸಮೀಪವಾಗುತ್ತಾರೆ. ಕೌಟುಂಬಿಕ ಸಾಮರಸ್ಯ.
ಮಕರ
ಕರ್ತವ್ಯ ಕ್ಷಿಪ್ರವಾಗಿ ನಿಭಾಯಿಸುವಿರಿ. ಅದರಿಂದ ಯಶ. ಆರ್ಥಿಕ ಪರಿಸ್ಥಿತಿ ಉತ್ತಮ. ಬಂಧುಗಳಿಂದ ಪ್ರೀತಿ, ಆದರ ಪಡೆಯುವಿರಿ.
ಕುಂಭ
ಖಾಸಗಿ ವಿಷಯದಲ್ಲಿ ಪೂರಕ ಬೆಳವಣಿಗೆ. ಪ್ರೀತಿ ಯಲ್ಲಿ ಯಶಸ್ಸು. ನಿಮ್ಮ ಭಾವನೆಗೆ ಸೂಕ್ತ ಸ್ಪಂದನೆ ಪಡೆಯುವಿರಿ. ವಿವಾದಕ್ಕೆ ಆಸ್ಪದ ನೀಡದಿರಿ.
ಮೀನ
ಆಪ್ತ ಸಂಬಂಧ ಉಳಿಸಲು ನಿಮ್ಮ ಅಹಂ ಅಡ್ಡಿ ಬಾರದಿರಲಿ. ಖರ್ಚು ಹೆಚ್ಚಲಿದೆ, ಆದರೆ ಆದಾಯ ಕಡಿಮೆ. ಅಸಹನೆ ಹೆಚ್ಚಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!