April 19, 2026
Sunday, April 19, 2026
spot_img

ದಿನ ಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ ತಿಳಿದುಕೊಳ್ಳಿ

ಮೇಷ
ಸಕಾರಾತ್ಮಕ ಬೆಳವಣಿಗೆ ಇಂದು ನೀವು ಕಾಣುವಿರಿ. ಭಾವುಕ ಪ್ರಸಂಗದಲ್ಲಿ ಮನಸ್ಸು ದೃಢವಾಗಿರಲಿ. ನಿಮ್ಮ ದೌರ್ಬಲ್ಯ ಪ್ರದರ್ಶಿಸದಿರಿ.                  
ವೃಷಭ
ಬಾಕಿ ಇರುವ ಕೆಲಸ ಪೂರೈಸಿ ಸಮಾಧಾನ ಪಟ್ಟುಕೊಳ್ಳುವಿರಿ. ಹಣದ ಕೊರತೆ ನೀಗಲಿದೆ. ಬಂಧುಮಿತ್ರರ ಭೇಟಿ. ಆರೋಗ್ಯ ಚಿಂತೆ ಮಾಯ.            
ಮಿಥುನ
  ಒತ್ತಡ ಹೆಚ್ಚು. ಕೆಲವು ಕಿರಿಕಿರಿಗೆ ಒಳಗಾಗುವಿರಿ.  ಮನೆಯಲ್ಲಿ ಸಂಗಾತಿ ಜತೆ ವಾಗ್ವಾದ ನಡೆದೀತು. ತಾಳ್ಮೆಯಿಂದ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ಯಶ.        
ಕಟಕ
ಮನೆಯವರ ಜತೆ ಹೆಚ್ಚು ಸೂಕ್ಷ್ಮವಾಗಿ ವರ್ತಿಸುವಿರಿ. ಅವರ ಭಾವನೆಗೆ ಸ್ಪಂದಿಸುವಿರಿ. ಖರೀದಿ ಉತ್ಸಾಹದಲ್ಲಿ ಜೇಬಿಗೆ ತೂತು ಬಿದ್ದೀತು.  
ಸಿಂಹ
ದಿನದ ಆರಂಭ ಉತ್ಸಾಹದಿಂದ.  ಆದರೆ ಸಂಜೆ ವೇಳೆಗೆ ಬೇಸರದ ಬೆಳವಣಿಗೆ ನಡೆದೀತು. ಕೆಲವರನ್ನು ಅತಿಯಾಗಿ ಹಚ್ಚಿಕೊಳ್ಳದಿರಿ.    
ಕನ್ಯಾ
ಹೆಚ್ಚು ಪರಿಶ್ರಮ ಬೇಡುವ ದಿನ. ಏಕೆಂದರೆ ಯಾವುದೂ ಸುಲಭದಲ್ಲಿ ಸಾಧ್ಯವಾಗದು. ಆಪ್ತರು ಮುನಿಸಿಕೊಳ್ಳಬಹುದು. ಆರ್ಥಿಕ ವ್ಯಯ ಹೆಚ್ಚು.  
ತುಲಾ
ಪ್ರವಾಸದ ಸಾಧ್ಯತೆ. ಹೊಸ ವ್ಯವಹಾರದಲ್ಲಿ ಹಣ ಹೂಡದಿರಿ. ಬಾಕಿ ಇರುವ ಕಾರ್ಯ ಮುಗಿಸಿ. ಇಲ್ಲವಾದರೆ ಒತ್ತಡ ಎದುರಿಸುವಿರಿ.        
ವೃಶ್ಚಿಕ
  ಮಾನಸಿಕ ಒತ್ತಡವು ನಿಮ್ಮ ಕಾರ್ಯದಲ್ಲಿ ಪ್ರತಿ-ಲಿಸಬಹುದು. ನಿಮ್ಮ ಮಿತಿಯಲ್ಲೆ ಕಾರ್ಯಾಚರಿಸಿ. ಕೈಗೆ ಎಟುಕದ ವಿಷಯ ಬಿಡಿ.      
ಧನು
  ನಿಮ್ಮ ಯಾವುದೋ ಕೆಲಸ ಅರ್ಧದಲ್ಲೆ ನಿಂತು ಬಿಟ್ಟಿದೆ. ಅದರ ವ್ಯಾಕುಲ ಕಾಡುವುದು. ಇನ್ನೂ ಕೆಲವು ದಿನ ನೀವು ಕಾಯಬೇಕಾಗುವುದು.    
ಮಕರ
 ವೃತ್ತಿಯಲ್ಲಿ ಉನ್ನತಿ. ಉದ್ದೇಶಿತ ಕಾರ್ಯ ಪೂರ್ಣ. ಆದರೆ ಕೌಟುಂಬಿಕ ಅಸಹನೆ. ಶಾಂತಿ, ಸೌಹಾರ್ದತೆ ದೂರ. ಧನವ್ಯಯ ಅಽಕ.        
ಕುಂಭ
 ಸಮಸ್ಯೆ ಪರಿಹಾರಕ್ಕೆ ಆತುರ ತೋರಬೇಡಿ. ಸಾವಧಾನವಾಗಿ ಯೋಚಿಸಿ ನಿರ್ಧಾರ ತಾಳಿ. ಅವಶ್ಯ ಸಹಕಾರ ಪಡೆಯಿರಿ.  ಬಂಧು ಭೇಟಿ.            
ಮೀನ
ನಿರಾಳ ದಿನ. ಕಾಡುತ್ತಿದ್ದ ಚಿಂತೆ ಪರಿಹಾರ. ಉತ್ಸಾಹ ತುಂಬುವ ಕಾರ್ಯದಲ್ಲಿ ತೊಡಗಿ. ಬಂಧುಮಿತ್ರರ ಭೇಟಿ ಸಂತೋಷ ತರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !