ದಿನಭವಿಷ್ಯ: ಇಂದಿನ ದಿನ ಯಾವ ರಾಶಿಗೆ ಯಾವ ಫಲ ತಿಳಿದುಕೊಳ್ಳಿ

ಮೇಷ
ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಅದನ್ನು ನಿಭಾಯಿಸಲು ಕಠಿಣ ನಿಲುವು ತಳೆಯಲು ಸಿದ್ಧರಾಗಿ. ಧನವ್ಯಯ ಹೆಚ್ಚಲಿದೆ.
ವೃಷಭ
ಚಿಂತೆ ಹುಟ್ಟಿಸಿದ ಕೌಟುಂಬಿಕ ವಿಷಯ ಇತ್ಯರ್ಥವಾಗುವುದು. ವೃತ್ತಿಯಲ್ಲಿ ಪ್ರತಿಸ್ಪರ್ಧೆ ಹೆಚ್ಚಳ. ಬಂಧುಗಳ ಸಮಾಗಮ.
ಮಿಥುನ
ಕೆಲಸದಿಂದ ವಿರಾಮ ಪಡೆಯುವ ಮನಸ್ಸಿದ್ದರೂ ಅದು ಸಾಧ್ಯವಿಲ್ಲ. ಹೆಚ್ಚುವರಿ ಕೆಲಸ. ಸುಲಭವಾಗಿ ಕಂಡ ಕಾರ್ಯವೊಂದು ಕಠಿಣವಾಗಲಿದೆ.
ಕಟಕ
ಹೆಚ್ಚು ಕ್ರಿಯಾಶೀಲ ದಿನ. ಜಡತ್ವ ಬಿಟ್ಟು ಚುರುಕಾಗಿ. ನಿಮ್ಮ ಕ್ಷೇತ್ರದಲ್ಲಿ ಪ್ರತಿಸ್ಪರ್ಧೆ ಹೆಚ್ಚು. ಸ್ಪರ್ಧೆಯಲ್ಲಿ ಹಿಂದೆ ಬೀಳದಿರಿ.  ಕೌಟುಂಬಿಕ ಶಾಂತಿ.
ಸಿಂಹ
ಆಹಾರದ ಸೇವನೆಯಲ್ಲಿ ಹೆಚ್ಚು ಎಚ್ಚರ ವಹಿಸಿ. ಅಜೀರ್ಣದಂಥ ಸಮಸ್ಯೆ ಉಂಟಾದೀತು. ಮನೆಯಲ್ಲಿ ವಾಗ್ವಾದ ಸಂಭವ.
ಕನ್ಯಾ
ನಿಮಗೆ ಪೂರಕವಾದ ಬೆಳವಣಿಗೆ. ಕೌಟುಂಬಿಕ ಪರಿಸರ ತಿಳಿಯಾಗಿ ಮನಸಿಗೆ ನೆಮ್ಮದಿ. ವೃತ್ತಿ ಹಿನ್ನಡೆ ನಿವಾರಣೆ, ಉನ್ನತಿಯ ಹಾದಿ.
ತುಲಾ
ಯೋಜಿಸಿದ ಕಾರ್ಯವಿಂದು ಸಫಲ ವಾಗದು. ಅಸಹನೆ ಹೆಚ್ಚಳ. ಪ್ರತಿಕೂಲ ಸ್ಥಿತಿಯನ್ನು ಸಹನೆಯಿಂದ ಪರಾಮರ್ಶಿಸಿರಿ.
ವೃಶ್ಚಿಕ
ಕೆಲಸದಲ್ಲಿ ಸವಾಲು ಹೆಚ್ಚು. ಇತರರಿಂದ ಟೀಕೆ. ಇದು ನಿಮ್ಮ ನಿರ್ವಹಣೆ ಮೇಲೆ ಪರಿಣಾಮ ಬೀರದಿರಲಿ.
ಧನು
ಕಳಾಹೀನ ದಿನ. ಉತ್ಸಾಹಹೀನತೆ. ಹತಾಶೆ, ಕೋಪ ಆವರಿಸಬಹುದು. ವಾಗ್ವಾದಕ್ಕೆ ಇಳಿಯದಿರಿ. ಬಂಧುಗಳಿಗಾಗಿ ಹಣ ವ್ಯಯ.
ಮಕರ
ಪ್ರತಿಕೂಲ ಪರಿಸ್ಥಿತಿ ಉಂಟಾದೀತು. ಜಿಗುಟು ನಿಲುವು ತಳೆದು ಕಷ್ಟಕ್ಕೆ ಸಿಲುಕದಿರಿ. ಹೊಂದಿ ಕೊಂಡು ಹೋಗುವುದು ಮುಖ್ಯ. ತಾಳ್ಮೆಯಿರಲಿ.
ಕುಂಭ
ಕೆಲದಿನಗಳ ಒತ್ತಡ, ಉದ್ವಿಗ್ನತೆ ಇಂದು ನಿವಾರಣೆ. ಇದರಿಂದ ಸಂತೋಷದ ಮನಸ್ಥಿತಿ. ಬಂಧುಗಳ ಕಿರಿಕಿರಿ ತಪ್ಪುವುದು. ಧನಲಾಭ.
ಮೀನ
ಇಂದು ಭಾವನಾತ್ಮಕ ದೃಢತೆ ಪ್ರದರ್ಶಿಸಿ. ಸಣ್ಣ ಹಿನ್ನಡೆಗೆ ಅಂಜಿ ಕೂರದಿರಿ. ಕೆಲವರು ನಿಮ್ಮನ್ನು ದೂರ ಮಾಡಿದರೂ ಅವರಿಲ್ಲದೆ ಬದುಕಲು ಕಲಿಯಿರಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!