ಮೇಷ: ಜವಾಬ್ದಾರಿ ಹೆಚ್ಚಾದರೂ ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ.
ವೃಷಭ: ಆರಂಭದಲ್ಲಿ ಕೆಲವು ಅಡಚಣೆ ಎದುರಾದರೂ ಬಳಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಂಸಾರಿಕ ವಿಚಾರಗಳಲ್ಲಿ ಸಹನೆಯಿಂದ ವರ್ತಿಸಿ. ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಮಿಥುನ: ಇತರರ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳಬೇಕಾಗಬಹುದು. ಕುಟುಂಬದಲ್ಲಿ ಭಿನ್ನಮತ ನಿವಾರಣೆಯಾಗಲಿದೆ. ಹಣಕಾಸಿನ ಅಡಚಣೆ ದೂರವಾಗುವ ಲಕ್ಷಣವಿದೆ.
ಕಟಕ: ಭಾವುಕತೆ ನಿಯಂತ್ರಿಸಿ. ಮನೆಯಲ್ಲಿ ಶಾಂತಿ, ವೃತ್ತಿಯಲ್ಲಿ ಸಮಾಧಾನದ ಬೆಳವಣಿಗೆ ಕಂಡುಬರಲಿದೆ. ಟೀಕೆಗಳಿಗೆ ಹೆಚ್ಚು ಮಹತ್ವ ನೀಡದಿರಿ.
ಸಿಂಹ: ವೃತ್ತಿಯ ಒತ್ತಡ ಕಾಡಬಹುದು. ಕುಟುಂಬದ ನೆಮ್ಮದಿಗೆ ಧಕ್ಕೆ ತರುವ ವಿಚಾರಗಳಿಂದ ದೂರವಿರಿ. ಹವ್ಯಾಸಗಳಿಗೆ ಸಮಯ ಮೀಸಲಿಡಿ.
ಕನ್ಯಾ: ಹಳೆಯ ಕಾರ್ಯವೊಂದರ ಪರಿಣಾಮ ಎದುರಾಗಬಹುದು. ತಪ್ಪಿದ್ದರೆ ಸರಿಪಡಿಸಲು ಪ್ರಯತ್ನಿಸಿ. ಹೊಂದಾಣಿಕೆಯಿಂದ ಕಾರ್ಯಸಿದ್ಧಿ ಹಾಗೂ ಆರ್ಥಿಕ ಸಂಕಷ್ಟ ನಿವಾರಣೆಯಾಗಲಿದೆ.
ತುಲಾ: ಮನಸ್ಸಿನಲ್ಲಿ ಅಶಾಂತಿ ಕಾಡಬಹುದು. ಆಪ್ತರ ವರ್ತನೆಯಿಂದ ಬೇಸರವಾಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಲಾಭ-ನಷ್ಟದ ಮಿಶ್ರ ಫಲ.
ವೃಶ್ಚಿಕ: ನಿಮ್ಮ ವ್ಯವಹಾರದಲ್ಲಿ ಅನಗತ್ಯ ಹಸ್ತಕ್ಷೇಪಕ್ಕೆ ಅವಕಾಶ ನೀಡದಿರಿ. ಹಠ ಬಿಟ್ಟು ಕೆಲವು ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ.
ಧನು: ಅಪನಿಂದೆ ಅಥವಾ ಸಹೋದ್ಯೋಗಿಗಳೊಂದಿಗೆ ಸಂವಹನ ಸಮಸ್ಯೆ ಎದುರಾಗಬಹುದು. ಧೈರ್ಯದಿಂದ ಪರಿಸ್ಥಿತಿ ಎದುರಿಸಿ.
ಮಕರ: ಗುರಿ ಸನಿಹವಾಗಲಿದೆ. ಕಷ್ಟಗಳು ಹಂತಹಂತವಾಗಿ ಪರಿಹಾರ ಕಾಣಲಿವೆ. ಹಣಕಾಸಿನಲ್ಲಿ ಚೇತರಿಕೆ ಹಾಗೂ ಆತ್ಮೀಯರ ಸಹಕಾರ ದೊರೆಯಲಿದೆ.
ಕುಂಭ: ಒಂದು ಚಿಂತೆ ಮುಗಿದ ಬಳಿಕ ಮತ್ತೊಂದು ಕಾಡಬಹುದು. ಕುಟುಂಬದಲ್ಲಿ ಭಿನ್ನಮತ, ವಾಗ್ವಾದ ಸಂಭವ. ಆರೋಗ್ಯದ ಕಡೆ ಗಮನ ನೀಡಿ.
ಮೀನ: ಕೆಲಸದ ಒತ್ತಡ ಹೆಚ್ಚಾಗಬಹುದು. ಅನ್ಯರ ಸಹಕಾರದಿಂದ ಕಠಿಣ ಜವಾಬ್ದಾರಿಯೂ ಪೂರ್ಣಗೊಳ್ಳಲಿದೆ. ಹಣದ ಬಿಕ್ಕಟ್ಟು ನಿವಾರಣೆಯಾಗುವ ಸಾಧ್ಯತೆ ಇದೆ.



