ಮೇಷ
ಸಾಂಸಾರಿಕ ಸಮಸ್ಯೆ ಪರಿಹಾರ. ಮನೆಯಲ್ಲಿ ಸಂಭ್ರಮದ ವಾತಾವರಣ. ಕಠಿಣ ಕಾರ್ಯವೊಂದು ಸುಗಮವಾಗಲಿದೆ. ಬಂಧು ಭೇಟಿಯ ಸಂತೋಷ.
ವೃಷಭ
ನಿಮ್ಮ ಗ್ರಹಗತಿ ಪರಿಹಾರವನ್ನೂ ಸೂಚಿಸುತ್ತಿದೆ. ನಿಮಗೆ ಪೂರಕ ಸನ್ನಿವೇಶ ತಾನಾಗಿ ಸೃಷ್ಟಿಯಾಗಲಿದೆ.
ಮಿಥುನ
ನಿಮ್ಮ ಗುರಿ ಈಡೇರುವ ತನಕ ಪ್ರಯತ್ನ ನಿಲ್ಲಿಸದಿರಿ. ಹಿನ್ನಡೆಗಳಿಗೆ ಅಂಜದಿರಿ. ಮನೆಯಲ್ಲಿ ಉಲ್ಲಾಸದ ವಾತಾವರಣ.
ಕಟಕ
ಇಂದು ಏರುಪೇರು ಎದುರಿಸುವಿರಿ. ದಿನದ ಆರಂಭದಲ್ಲಿ ಹಿನ್ನಡೆ. ಬಳಿಕ ಎಲ್ಲವೂ ಸುಸೂತ್ರವಾಗುವುದು. ಬಂಧುಗಳ ಸಹಕಾರ.
ಸಿಂಹ
ಆತ್ಮೀಯರ ಜತೆ ಸಂಬಂಧ ಹಳಸಿದ್ದರೆ ಅದನ್ನು ಸರಿಪಡಿಸಲು ನೀವೇ ಮುಂದಾಗಿ. ವೃತ್ತಿಯಲ್ಲಿ ಒತ್ತಡ ಹೆಚ್ಚು. ಬಂಧು ಅಸಹಕಾರ.
ಕನ್ಯಾ
ನಿಮಗಿಂದು ನಿರಾಳ ದಿನ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ. ಬಂಧುಗಳಿಂದ ನಿಮಗೆ ಹಿತವೆನಿಸುವ ಸುದ್ದಿ. ಧನಪ್ರಾಪ್ತಿ ಸಂಭವ.
ತುಲಾ
ವ್ಯವಹಾರಕ್ಕೆ ಸಂಬಂಽಸಿ ಎಲ್ಲವೂ ನಿಮಗೆ ಪೂರಕ. ಕೆಲವರ ಅಸಹಕಾರ ಅಂತ್ಯ. ಮನೆಯಲ್ಲಿನ ಮನಸ್ತಾಪ ನಿವಾರಣೆ, ಸೌಹಾರ್ದ.
ವೃಶ್ಚಿಕ
ನೀವು ಬಯಸಿದ್ದೆಲ್ಲ ನೆರವೇರುವುದು. ಆದರೂ ಯಾವುದೋ ಚಿಂತೆ ಕಾಡುವುದು. ಸಿಗದ ವಿಷಯದ ಕುರಿತು ಮೋಹ ಬಿಟ್ಟುಬಿಡಿ.
ಧನು
ಮನೆಯಲ್ಲಿ ಉತ್ತಮ ಹೊಂದಾಣಿಕೆ. ಸೌಹಾರ್ದ ವಾತಾವರಣ. ಆದರೆ ವೃತ್ತಿಯಲ್ಲಿ ತೊಡಕು ಎದುರಿಸುವಿರಿ. ಸರಿಯಾಗಿ ನಿಭಾಯಿಸಿ.
ಮಕರ
ನಿಮ್ಮ ಪಾಲಿಗೆ ಮಹತ್ವದ ಬೆಳವಣಿಗೆ. ನೀವು ಕೈಗೊಂಡ ನಿರ್ಧಾರ ಯುಕ್ತ ಫಲವನ್ನೆ ನೀಡುವುದು. ಕೆಲವರ ಅಸಹಕಾರ ಎದುರಿಸುವಿರಿ.
ಕುಂಭ
ಒತ್ತಡಪೂರ್ಣ ದಿನ. ಕೆಲವಾರು ಕಾರ್ಯ ಒಮ್ಮೆಗೇ ಮುಗಿಸಬೇಕಾದ ಒತ್ತಡ. ದೈಹಿಕ ಅನಾರೋಗ್ಯ, ಮೈ ನೋವು ಬಾಽಸಬಹುದು.
ಮೀನ
ಭವಿಷ್ಯದ ಕುರಿತು ಅತಿಯಾಗಿ ಚಿಂತಿಸುವುದನ್ನು ಬಿಡಿ. ಖಾಸಗಿ ಬದುಕಿನಲ್ಲಿ ಪೂರಕ ಬೆಳವಣಿಗೆ. ಧನವ್ಯಯ ಹೆಚ್ಚು.



