August 31, 2026
Monday, August 31, 2026
spot_img

ದಿನಭವಿಷ್ಯ: ಧನಾತ್ಮಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ.. ಯಶಸ್ಸು, ಧನಲಾಭದ ಶುಭ ದಿನ

ಮೇಷ
ಬೇಗುದಿ ನಿಮ್ಮನ್ನು ಕಾಡುತ್ತಿದೆ. ಶಾಂತವಾಗಿ ಯೋಚಿಸಿ. ನೆಗೆಟಿವ್ ಚಿಂತನೆ ಬಾಧಿಸದಂತೆ ಗುಣಾತ್ಮಕ ಕಾರ್ಯದಲ್ಲಿ ತೊಡಗಿಕೊಳ್ಳಿ.
ವೃಷಭ
ನಿಮ್ಮ ಪ್ರಗತಿಗೆ ಅಡ್ಡಿ. ದೃಢ ಮನದಿಂದ ಅದನ್ನು ನಿವಾರಿಸಲು ಸಾಧ್ಯ. ಸಂಗಾತಿ ಜತೆ ಭಿನ್ನಮತ. ಭವಿಷ್ಯದ ಕುರಿತು ಚಿಂತೆ ಕಾಡಬಹುದು.
ಮಿಥುನ
ಯಶಸ್ವಿ ದಿನ. ಗುರಿ ಸಾಧನೆ. ಧನಪ್ರಾಪ್ತಿ. ಹೊಸ ಯೋಜನೆಗೆ ಕೈ ಹಾಕಲು ಕಾಲ ಪ್ರಶಸ್ತ. ವ್ಯಕ್ತಿಯೊಬ್ಬರ ಜತೆ ಸ್ನೇಹ ವೃದ್ಧಿ. ಕೌಟುಂಬಿಕ ಸಮಾಧಾನ.  
ಕಟಕ
ದಿನದ ಆರಂಭದಲ್ಲಿ ಕಾರ್ಯಕೆ ಅಡ್ಡಿ. ಬಳಿಕ  ಅದನ್ನು ನಿವಾರಿಸಲು ಶಕ್ತ. ದೊಡ್ಡ ಚಿಂತೆ ಪರಿಹಾರ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ.
ಸಿಂಹ
ಆತ್ಮೀಯರ ಕುರಿತು ಮಮತೆ ಹೆಚ್ಚಲಿದೆ. ಅವರ ಸಂಗದಲ್ಲಿ ನೆಮ್ಮದಿ ಪಡೆಯುವಿರಿ. ಹಣದ ಹೂಡಿಕೆ ಲಾಭ ತರುವುದು. ಧನಪ್ರಾಪ್ತಿ.  
ಕನ್ಯಾ
ನಿಮಗಿಂದು ಪೂರಕ ದಿನ. ಆತ್ಮವಿಶ್ವಾಸ ಹೆಚ್ಚು. ಅನಿರೀಕ್ಷಿತ ಧನಲಾಭ. ಆರೋಗ್ಯ ಸಮಸ್ಯೆ ಪರಿಹಾರ. ಕೌಟುಂಬಿಕ ಸಹಕಾರ, ಸಮಾಧಾನ.
ತುಲಾ
ಮಿಶ್ರ-ಲ. ಪ್ರತಿಕೂಲ ಸನ್ನಿವೇಶ ಎದುರಾದರೂ ತಾಳ್ಮೆ ಕಳಕೊಳ್ಳದಿರಿ. ಆಪ್ತರ ಜತೆ ವಾಗ್ವಾದ ನಡೆದೀತು. ಹಣದ ವ್ಯವಹಾರ ಸುಲಲಿತವಾಗಲಿದೆ.      
ವೃಶ್ಚಿಕ
ನಿಮ್ಮ ನಿಲುವಿನ ಜತೆ  ರಾಜಿ ಮಾಡಿಬೇಕಾದಿತು.  ನಿಮ್ಮದೇ ಧೋರಣೆಗೆ ಅಂಟಿಕೊಳ್ಳದಿರಿ. ಹಣ ಗಳಿಕೆಯ ವಿಚಾರದಲ್ಲಿ ಯೋಜನೆ ಫಲಿಸಲಿದೆ.
ಧನು
ಸಂತೋಷ ಪಡುವ ಅವಕಾಶ ಕಳಕೊಳ್ಳದಿರಿ. ಆಗಿಹೋದುದಕ್ಕೆ ಕೊರಗುತ್ತಾ ಕೂರಬೇಡಿ. ಕಷ್ಟ ನಿವಾರಣೆಯ ಕಾಲ ಸಮೀಪ ಬಂದಿದೆ.    
ಮಕರ
ನಿಮ್ಮ ಹಾದಿಯಲ್ಲಿ ಅಡ್ಡಿ ತೋರಿಬಂದೀತು. ಕಠಿಣ ಪರಿಶ್ರಮದಿಂದ ಅದಕ್ಕೆ ಪರಿಹಾರ ಸಿಗಲಿದೆ.  ನಿರೀಕ್ಷಿಸಿದಷ್ಟು ಹಣಪ್ರಾಪ್ತಿ ಆಗಲಾರದು.    
ಕುಂಭ
 ಹೆಚ್ಚು ಕೆಲಸ. ವಿರಾಮಕ್ಕೆ ಅವಕಾಶ ಸಿಗದು. ಶಾಂತತೆ ಕಾಯ್ದುಕೊಳ್ಳುವ ಕಲೆ ಅರಿಯಿರಿ. ಇಲ್ಲವಾದರೆ ಉದ್ವಿಗ್ನ ಸ್ಥಿತಿ ಸಂಭವ.      
 ಮೀನ
ಸವಾಲಿನ ದಿನ. ಪ್ರತಿಕೂಲ ಫಲಿತಾಂಶ, ನೆಗೆಟಿವ್ ಚಿಂತನೆ ನಿಮ್ಮ ಕಾರ್ಯದ ಮೇಲೂ ಪರಿಣಾಮ ಬೀರಲಿದೆ. ಧ್ಯಾನ ಸಹಕಾರಿ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !