July 12, 2026
Sunday, July 12, 2026
spot_img

ದಿನಭವಿಷ್ಯ: ಅಂದುಕೊಂಡ ಕೆಲಸಗಳು ಯಶಸ್ವಿಯಾಗಲಿವೆ, ಧನ ಲಾಭದ ಯೋಗವಿದೆ

ಮೇಷ
ವಿಶೇಷ ಘಟಿಸದು. ನಗು ಲೇಪಿಸಿಕೊಂಡು ಕಾರ್ಯವೆಸಗಿ. ನೀವೂ ಸಂತೋಷಪಡಿ, ಇತರರನ್ನೂ ಸಂತೋಷ ಗೊಳಿಸಿ. ಆರ್ಥಿಕ ಉನ್ನತಿ.
ವೃಷಭ
ಫಲಪ್ರದ ದಿನ. ಯೋಜಿತ ಕಾರ್ಯದಿಂದ ಯಶ. ಮನೆಯಲ್ಲಿ ಸೌಹಾರ್ದ ಪರಿಸರ. ಸಣ್ಣಪುಟ್ಟ ತಿಕ್ಕಾಟಕ್ಕೆ ತಲೆ ಕೆಡಿಸಿಕೊಳ್ಳದಿರಿ.
ಮಿಥುನ
ಎಲ್ಲರೂ ನಿಮ್ಮನ್ನು ಮೆಚ್ಚಿಕೊಳ್ಳಬೇಕು ಎಂಬ ಭಾವನೆ ಬಿಡಿ. ಅದು ಅಸಾಧ್ಯ. ಭಾವುಕ ಸನ್ನಿವೇಶ ಎದುರಿಸುವಿರಿ. ದೃಢಮನಸ್ಸು ಅಗತ್ಯ.
ಕಟಕ
ನಿಮ್ಮ ಕಾರ್ಯ ಸಾಧಿಸಲು ಹೆಚ್ಚಿನ ಪ್ರಯತ್ನ ಬೇಕು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಕೆಲಸದ ಹೊರೆ. ಬಯಸಿದ ವಿರಾಮ ಸಿಗಲಾರದು.
ಸಿಂಹ
ಅರ್ಧಕ್ಕೆ ನಿಲ್ಲಿಸಿದ ಕಾರ್ಯ ಸಂಪೂರ್ಣ ಆಗಲಿದೆ. ಕೌಟುಂಬಿಕ ಸಹಕಾರ. ವೃತ್ತಿಗೆ ಸಂಬಂಧಿಸಿ ವಿವೇಕದ ನಿರ್ಧಾರ ತೆಗೆದುಕೊಳ್ಳಿ.
ಕನ್ಯಾ
ಗಮನವಿಟ್ಟು ಕಾರ್ಯ ಎಸಗಿ. ತಪ್ಪು ಆಗುವ ಸಾಧ್ಯತೆಗಳಿವೆ. ಪ್ರೀತಿಪಾತ್ರರ ಕಾಳಜಿ ನೋಡಿಕೊಳ್ಳಿ. ಅನಿರೀಕ್ಷಿತ ಖರ್ಚು ಒದಗುವುದು.
ತುಲಾ
ಖಾಸಗಿ ಬದುಕಲ್ಲಿ ಪ್ರಮುಖ ನಿರ್ಧಾರ ತಾಳಲು ಸಕಾಲ. ನಿಮ್ಮ ಅಭಿಪ್ರಾಯ ಸೂಚಿಸಲು ಹಿಂಜರಿಕೆ ಬೇಡ. ಆರ್ಥಿಕ ಒತ್ತಡ ಹೆಚ್ಚಲಿದೆ.
ವೃಶ್ಚಿಕ
ಹೆಚ್ಚು ಪ್ರಯಾಣದ ಸಾಧ್ಯತೆ. ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ. ಆಪ್ತರಿಂದ ವಿಶೇಷ ಸುದ್ದಿ ಕೇಳಿಸೀತು. ಮಕ್ಕಳು ಹರಿತ ವಸ್ತುವಿನಲ್ಲಿ ಆಡಬಾರದು.
ಧನು
ಇತರರ ಕುರಿತಾದ ನಿಮ್ಮ ಕಾಳಜಿ ತೋರಲು ಅವಕಾಶ ಒದಗಲಿದೆ. ನಿಮ್ಮ ಕುರಿತಾದ ತಪ್ಪು ಕಲ್ಪನೆ ನಿವಾರಣೆ. ಬಂಧುಭೇಟಿಯ ಖುಷಿ.
ಮಕರ
ಕೆಲ ವಿಚಾರದಲ್ಲಿ ಕ್ಷಿಪ್ರ ನಿರ್ಧಾರ ತಾಳಿ. ಇತರರಿಗೆ ನೋವಾದೀತೆಂಬ ಹಿಂಜರಿಕೆ ಬೇಡ. ವ್ಯವಹಾರದಲ್ಲಿ ಸಣ್ಣ ತೊಡಕು ಬರಲಿದೆ.
ಕುಂಭ
ಸಮಸ್ಯೆ ಮರೆತು ನೆಮ್ಮದಿಯಿಂದ ಕಳೆಯಲು ಬಯಸುವಿರಿ. ಆದರೆ ಕೆಲಸದ ಒತ್ತಡ ಬೆನ್ನು ಬಿಡದು. ಬಂಧುಗಳ ಸಹಕಾರದಿಂದ ಸಾಂತ್ವನ.
ಮೀನ
ಆತ್ಮವಿಶ್ವಾಸ ಹೆಚ್ಚುವ ಬೆಳವಣಿಗೆ. ಹೆಚ್ಚುವರಿ ಹೊಣೆ ಹೊತ್ತುಕೊಂಡು ಬಳಲಬೇಡಿ. ಹಿಡಿದ ಕೆಲಸದಲ್ಲಿ ಉತ್ತಮ ಪ್ರಗತಿ ಉಂಟಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !