ದಿನಭವಿಷ್ಯ | ನಿಮಗಿಂದು ಶುಭದಿನ, ಕಾರ್ಯದಲ್ಲಿ ಯಶಸ್ಸು, ವಿಘ್ನ ನಿವಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕೆಲವಾರು ಒತ್ತಡ ಇಂದು ನಿಮ್ಮನ್ನು ಬಾಧಿಸುವುದು. ಸಹನೆಯಿರಲಿ. ಇತರರ ಆಮಿಷಕ್ಕೆ ಬಲಿಯಾಗಿ ನಿಮ್ಮ ಆದರ್ಶ ಬಲಿಗೊಡದಿರಿ.

ವೃಷಭ
ಹೊಸ ಹೊಣೆಗಾರಿಕೆ ಹೆಗಲೇರುವುದು. ಇದರಿಂದ ನೀವು ಅಸಹನೆಗೆ ಒಳಗಾಗುವಿರಿ. ಕೆಲವರ ವರ್ತನೆಯೂ ರೋಷ ಬರಿಸುವುದು.

ಮಿಥುನ
ಒತ್ತಡ, ಉದ್ವಿಗ್ನತೆ ಎಲ್ಲವೂ ಇಂದು ನಿವಾರಣೆಯಾಗಲಿದೆ. ಮನಸ್ಸಿನಲ್ಲಿ ನಿರಾಳತೆ. ಖಾಸಗಿ ಬದುಕಿನಲ್ಲಿ ಸಂತೋಷದ ಬೆಳವಣಿಗೆ. ಪ್ರೇಮ ಸಾಫಲ್ಯ.

ಕಟಕ
ಹಣಕಾಸು ಪರಿಸ್ಥಿತಿ ಉತ್ತಮ. ಖರೀದಿಯ ವ್ಯವಹಾರ. ಉದ್ಯೋಗದಲ್ಲಿ ಹೊಸ ಅವಕಾಶ. ಉದ್ವಿಗ್ನಕಾರಿ ಪರಿಸ್ಥಿತಿಯೊಂದು ಶಮನವಾಗಲಿದೆ.

ಸಿಂಹ
ನಿಮಗಿಂದು ಶುಭದಿನ. ಕಾರ್ಯದಲ್ಲಿ ಯಶಸ್ಸು. ವಿಘ್ನ ನಿವಾರಣೆ. ನೀವು ಪ್ರಮುಖ ವಿಷಯದಲ್ಲಿ ಬಯಸಿದ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಲಾಭ.

ಕನ್ಯಾ
ಮನದೊಳಗಿನ ತೀವ್ರ ಭಾವನೆಯನ್ನು ಇಂದು ವ್ಯಕ್ತಪಡಿಸಲು ಸಕಾಲ. ಪೂರಕ ಸ್ಪಂದನೆ ದೊರಕುವುದು. ಕೆಲವು ನೋವು ಮನದಲ್ಲೆ ಇಟ್ಟು ಕೊರಗದಿರಿ.

ತುಲಾ
ಕೆಲವು ಅನಪೇಕ್ಷಿತ ಬೆಳವಣಿಗೆ ಸಂಭವಿಸ ಬಹುದು. ಕೆಲಸದಲ್ಲಿ ತಪ್ಪು ಘಟಿಸದಂತೆ ನೋಡಿಕೊಳ್ಳಿ.ಇತರರ ಜತೆ ಹೊಂದಾಣಿಕೆ ಇರಲಿ.

ವೃಶ್ಚಿಕ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಹೊಸ ಹೊಣೆಗಾರಿಕೆ ಬೀಳುವುದು. ಅದನ್ನು ಸರಿಯಾಗಿ ನಿಭಾಯಿಸಿ. ತಪ್ಪುಗಳನ್ನು ಎಸಗದಿರಿ. ಕೌಟುಂಬಿಕ ಸಹಕಾರ.

ಧನು
ಇತರರ ಜತೆ ವ್ಯವಹರಿಸುವಾಗ ಹೊಂದಾಣಿಕೆ ಇರಲಿ. ಕಠಿಣ ನಿಲುವು ಸಡಿಲಿಸಿ. ನಿಯಂತ್ರಣ ತಪ್ಪಿ ಮಾತನಾಡಬೇಡಿ. ಭಾವನಾತ್ಮಕ ಸಂಘರ್ಷ.

ಮಕರ
ಕೆಲಸದಲ್ಲಿ ಸರಿಯಾದ  ಯೋಜನೆಯಿರಲಿ. ಬೇಕಾಬಿಟ್ಟಿ ಕೆಲಸವು ಫಲ ನೀಡದು. ನಿಮ್ಮ ಕೆಲಸದ ಸಫಲತೆಗೆ ಇತರರನ್ನೇ ಅವಲಂಬಿಸಿ ಕೂರದಿರಿ. ನಿಮ್ಮ ಪ್ರಯತ್ನ ಮುಖ್ಯ.

ಕುಂಭ
ಕೌಟುಂಬಿಕ ಸಂಘರ್ಷ ಬೆಳೆಯಲು ಬಿಡಬೇಡಿ. ಅದನ್ನು ಬೇಗನೆ ಪರಿಹರಿಸಿಕೊಳ್ಳಿ. ಇತರರ ಹಸ್ತಕ್ಷೇಪಕ್ಕೂ ಅವಕಾಶ ಕೊಡದಿರಿ. ತಾಳ್ಮೆ ಅವಶ್ಯ.

ಮೀನ
ಮನೆಯಲ್ಲಿ ಸೌಹಾರ್ದ ಪರಿಸ್ಥಿತಿ ನೆಲೆಗೊಳಿಸಲು ಕ್ರಮ ತೆಗೆದುಕೊಳ್ಳಿ. ಇತರರ ಭಾವನೆ ಅರಿತು ವ್ಯವಹರಿಸಿ. ನಿಮ್ಮದೇ ನಿಲುವಿಗೆ ಹಠ ಹಿಡಿಯದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!