February 13, 2026
Friday, February 13, 2026
spot_img

ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಈ ದಿನ ಹೆಚ್ಚು ಫಲ ಸಿಗದು. ಉದಾಸೀನತೆ  ಕಾಡಲಿದೆ. ಮಹತ್ವದ ನಿರ್ಧಾರ ತಾಳದಿರಿ. ಆತ್ಮೀಯರ ಜತೆ ಭಿನ್ನಮತ ಉಂಟಾದೀತು.      
ವೃಷಭ
ಈ ದಿನ ನಿಮಗೆ ಕೆಲ ಎಡರುತೊಡರುಗಳು ಬಾಧಿಸಲಿವೆ. ಅಸಹನೆ ಹೆಚ್ಚು. ಹಣದ ವ್ಯವಹಾರ ದಲ್ಲಿ ಹೆಚ್ಚು ಎಚ್ಚರವಿರಲಿ. ದೈಹಿಕ ನೋವು ಸಂಭವ.      
ಮಿಥುನ
ಕೆಲವಾರು ಬಗೆಯ ಒತ್ತಡ ಎದುರಿಸುವಿರಿ. ಖರ್ಚು ಹೆಚ್ಚಾದರೂ ಆದಾಯವೂ ಅಽಕ. ಅಲರ್ಜಿ, ಅಜೀರ್ಣ ಸಮಸ್ಯೆ ಕಾಡಬಹುದು.  
ಕಟಕ
ವೃತ್ತಿಯಲ್ಲಿ ಕೆಲವು ಸವಾಲು ಎದುರಿಸುವಿರಿ. ಪ್ರಗತಿಗೆ ಅಡ್ಡಗಾಲು. ಹೊಸ ವ್ಯವಹಾರಕ್ಕೆ ಹಣ ಹಾಕಲು ಹೋಗಬೇಡಿ.
ಸಿಂಹ
ಅಮೂಲ್ಯ ವಸ್ತುವಿನ ಸುರಕ್ಷತೆಗೆ ಗಮನ ಕೊಡಿ. ಕಳೆದು ಹೋಗುವ ಸಂಭವವಿದೆ. ಅಜೀರ್ಣ ಸಮಸ್ಯೆ ಉಂಟಾದೀತು. ಹಣದ ಕೊರತೆ.    
ಕನ್ಯಾ
ಯಶಸ್ವಿ ದಿನವಲ್ಲ. ಗೊಂದಲದ ಮನಸ್ಥಿತಿ. ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗದು. ಧನಹಾನಿ ಸಂಭವ. ಬಂಧುಗಳ ವಿರೋಧ ಉಂಟಾದೀತು.  
ತುಲಾ
ನಿಮ್ಮ ಬೇಸರ ಕಳೆಯುವಂತಹ ಬೆಳವಣಿಗೆ. ವೃತ್ತಿಯಲ್ಲಿ ಯಶಸ್ಸು. ಆರ್ಥಿಕವಾಗಿ ತೆಗೆದುಕೊಳ್ಳುವ ನಿರ್ಧಾರ ಫಲ ನೀಡಲಿದೆ.  
ವೃಶ್ಚಿಕ
ಅಽಕ ಕೆಲಸ. ಫಲ ಮಾತ್ರ ನಿರೀಕ್ಷೆಗೆ ತಕ್ಕಷ್ಟು ಇರದು. ಸಹನೆ ಕೆಡುವ ಪರಿಸ್ಥಿತಿ, ಇದರಿಂದ ಸಂಬಂಧದಲ್ಲೂ ಒಡಕು. ಹಣದ ಹರಿವು ಸೀಮಿತ.    
ಧನು
 ಸಂತೋಷದ ದಿನ. ವೃತ್ತಿಯಲ್ಲಿ ಇತರರ ಶ್ಲಾಘನೆ. ಆರ್ಥಿಕ ಸಂಕಷ್ಟ ನಿವಾರಣೆ. ಬಂಧುವಿನಿಂದ ಶುಭ ಸುದ್ದಿ. ಸಂಗಾತಿ ಜತೆ ಉತ್ತಮ ಹೊಂದಾಣಿಕೆ.      
ಮಕರ
ಕೆಲಸದ ಒತ್ತಡದಿಂದ ಮುಕ್ತಿ. ಹಾಗಾಗಿ ನಿರಾಳವಾಗಿ ಚಿಂತಿಸಲು ಸಮಯ ಸಿಗಲಿದೆ. ನನೆಗುದಿಯಲ್ಲಿ ಇಟ್ಟಿರುವ ಸಮಸ್ಯೆ ಪರಿಹರಿಸಿ.      
ಕುಂಭ
ಇಂದು ಸಾಧಾರಣ ಯಶ.  ಸಕಾಲದಲ್ಲಿ ಕೆಲಸ ಮುಗಿಯದು. ಪ್ರಮುಖ ಹಣಕಾಸು ನಿರ್ಧಾರ ತಾಳಲು ಸೂಕ್ತ ದಿನವಲ್ಲ. ಕೌಟುಂಬಿಕ ವಾಗ್ವಾದ.
 ಮೀನ
ಹೆಚ್ಚಿನ ವಿಶೇಷ ಘಟಿಸದ ದಿನ. ವೃತ್ತಿ ಸಂಬಂಧ ಪ್ರಯಾಣ. ಏಕಾಂಗಿಗಳಿಗೆ ಸಂಗಾತಿ ದೊರಕಬಹುದು. ಅನಿರೀಕ್ಷಿತ ಧನಪ್ರಾಪ್ತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !