ಮೇಷ
ಹೆಚ್ಚು ಪರಿಶ್ರಮ ಬೇಡುವ ದಿನ. ಏಕೆಂದರೆ ಯಾವುದೂ ಸುಲಭದಲ್ಲಿ ಸಾಧ್ಯವಾಗದು. ಆಪ್ತರು ಮುನಿಸಿಕೊಳ್ಳಬಹುದು. ಆರ್ಥಿಕ ವ್ಯಯ ಹೆಚ್ಚು.
ವೃಷಭ
ಪ್ರವಾಸದ ಸಾಧ್ಯತೆ. ಹೊಸ ವ್ಯವಹಾರದಲ್ಲಿ ದುಡುಕಿ ಹಣ ಹೂಡದಿರಿ. ಬಾಕಿ ಇರುವ ಕಾರ್ಯ ಮುಗಿಸಿ. ಇಲ್ಲವಾದರೆ ಒತ್ತಡ ಎದುರಿಸುವಿರಿ.
ಮಿಥುನ
ಸಮಸ್ಯೆ ಪರಿಹಾರಕ್ಕೆ ಅವಸರ ಮಾಡದಿರಿ. ಸಾವಧಾನವಾಗಿ ಯೋಚಿಸಿ ನಿರ್ಧಾರ ತಾಳಿ. ಆರ್ಥಿಕ ಒತ್ತಡ ನಿವಾರಣೆ. ಬಂಧುವಿನ ಸಹಕಾರ.
ಕಟಕ
ಸಕಾರಾತ್ಮಕ ಬೆಳವಣಿಗೆ ಇಂದು ಕಾಣುವಿರಿ. ಭಾವುಕ ಪ್ರಸಂಗದಲ್ಲಿ ಮನಸ್ಸು ದೃಢವಾಗಿರಲಿ. ನಿಮ್ಮ ದೌರ್ಬಲ್ಯ ಪ್ರದರ್ಶಿಸದಿರಿ.
ಸಿಂಹ
ನಿಮ್ಮ ಯಾವುದೋ ಕೆಲಸ ಅರ್ಧದಲ್ಲೆ ನಿಂತು ಬಿಟ್ಟಿದೆ. ಅದರ ವ್ಯಾಕುಲ ಕಾಡುವುದು. ಇನ್ನೂ ಕೆಲವು ದಿನ ನೀವು ಕಾಯಬೇಕಾಗುವುದು.
ಕನ್ಯಾ
ವೃತ್ತಿಯಲ್ಲಿ ಉನ್ನತಿ. ಉದ್ದೇಶಿತ ಕಾರ್ಯ ಪೂರ್ಣ. ಆದರೆ ಕೌಟುಂಬಿಕ ಅಸಹನೆ. ಶಾಂತಿ, ಸೌಹಾರ್ದತೆ ದೂರ. ಧನವ್ಯಯ.
ತುಲಾ
ನಿರಾಳ ದಿನ. ಕಾಡುತ್ತಿದ್ದ ಚಿಂತೆ ಪರಿಹಾರ. ಉತ್ಸಾಹ ತುಂಬುವ ಕಾರ್ಯದಲ್ಲಿ ತೊಡಗಿ. ಬಂಧುಮಿತ್ರರ ಭೇಟಿ ಸಂತೋಷ ತರಲಿದೆ.
ವೃಶ್ಚಿಕ
ಬಾಕಿ ಇರುವ ಕೆಲಸ ಪೂರೈಸಿ ಸಮಾಧಾನ ಪಟ್ಟುಕೊಳ್ಳುವಿರಿ. ಹಣದ ಕೊರತೆ ನೀಗಲಿದೆ. ಬಂಧುಮಿತ್ರರ ಭೇಟಿ. ಆರೋಗ್ಯ ಚಿಂತೆ ಮಾಯ.
ಧನು
ಒತ್ತಡ ಹೆಚ್ಚು. ಕೆಲವು ಕಿರಿಕಿರಿಗೆ ಒಳಗಾಗುವಿರಿ. ಮನೆಯಲ್ಲಿ ಸಂಗಾತಿ ಜತೆ ವಾಗ್ವಾದ ನಡೆದೀತು. ತಾಳ್ಮೆಯಿಂದ ವ್ಯವಹರಿಸಿ. ಕಾರ್ಯಸಿದ್ಧಿ ವಿಳಂಬ.
ಮಕರ
ಹೆಚ್ಚಿನ ಒತ್ತಡವು ಎದುರಿಸುವಿರಿ. ಕೆಲಸದ ಮೇಲೆ ಪರಿಣಾಮ. ನಿಮ್ಮ ಮಿತಿಯಲ್ಲೆ ಕಾರ್ಯಾಚರಿಸಿ. ಕೈಗೆ ಎಟುಕದ ವಿಷಯ ಬಿಡಿ.
ಕುಂಭ
ದಿನದ ಆರಂಭ ಉತ್ಸಾಹದಿಂದ. ಆದರೆ ಸಂಜೆ ವೇಳೆಗೆ ಬೇಸರದ ಬೆಳವಣಿಗೆ ನಡೆದೀತು. ಕೆಲವರನ್ನು ಅತಿಯಾಗಿ
ಹಚ್ಚಿಕೊಳ್ಳದಿರಿ.
ಮೀನ
ಮನೆಯವರ ಜತೆ ಹೆಚ್ಚು ಸೂಕ್ಷ್ಮವಾಗಿ ವರ್ತಿಸುವಿರಿ. ಅವರ ಭಾವನೆಗೆ ಸ್ಪಂದಿಸುವಿರಿ. ಖರೀದಿ ಉತ್ಸಾಹದಲ್ಲಿ ಜೇಬಿಗೆ ತೂತು ಬಿದ್ದೀತು.



